ಒಂದು ಗಝಲ್

ಒಂದು ಗಝಲ್

ಕವನ

ಪ್ರೀತಿಯಿರದ ಬಾಳಿಗಿಂದು ಪ್ರೇಮಿಯಾಗಲಿ ಹೇಗೆ

ನೀತಿಯಿರದ ಹೃದಯಕಿಂದು ಸ್ನೇಹಿಯಾಗಲಿ ಹೇಗೆ

 

ಕಡಲತೀರಕೆ ಹೊಡೆವ ನೀರಿಗಿಂದು ಪೆಟ್ಟಾಗದೇನು

ತಡೆಹೇಳುವಂತ ಮಿಲನಕಿಂದು ಕತೆಯಾಗಲಿ ಹೇಗೆ

 

ಮಿಡಿವ ಮನಸ್ಸಿಲ್ಲದಲ್ಲಿ ಬದುಕಿಂದು ಹುಟ್ಟಬಹುದೆ 

ಕಾರಣವಿಲ್ಲದೆ ಸಿಡುಕುವಳಿಗೆ  ಏಣಿಯಾಗಲಿ ಹೇಗೆ

 

ಸ್ವರ್ಗನರಕಗಳು ಬುವಿಯಲ್ಲಿಯೇ ಕಾಲನ್ನು ಊರಿವೆ

ಮೆಟ್ಟಿಲುಗಳ ಏರಿ ಕನಸನಿಂದು ಭೇಟಿಯಾಗಲಿ ಹೇಗೆ

 

ನನಸುಗಳ ಹಂಬಲಿಸುವುದು ತಪ್ಪೆನುವಿಯೊ ಈಶಾ

ಸಾಗುವಳು ಮೋಸದಲಿಂದು ಜೊತೆಯಾಗಲಿ ಹೇಗೆ

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್