ಒಂದು ಗಝಲ್

ಒಂದು ಗಝಲ್

ಕವನ

ತಮ್ಮನ್ನು ತಾವೇ ಹೊಗಳಿಕೊಳ್ಳುವವರೂ ಜಾಸ್ತಿಯಾಗಿದ್ದಾರೆ ತಮ್ಮಾ 

ತೆಗಳಿಸಿಕೊಳ್ಳುವವರ ಒಟ್ಟಿಂಗೆ ಸೇರುತ್ತಾ ಮೇಟಿಯಾಗಿದ್ದಾರೆ ತಮ್ಮಾ 

 

ಕಂಡದ್ದು ಕಂಡಂತೆ ಹೇಳಿದರೆ, ಹಲವರಿಗೆ ಕೋಪ ಬರುವುದು ಯಾಕೆ 

ಇನ್ನೊಬ್ಬರ ತಪ್ಪ ಹೇಳಿ, ತಮ್ಮದನ್ನು ಮುಚ್ಚಿಟ್ಟು ದನಿಯಾಗಿದ್ದಾರೆ ತಮ್ಮಾ

 

ಕೂಡು ಕುಟುಂಬದಲ್ಲಿನ ಬಾಂಧವ್ಯವು ಇಂದು ದೂರವಾಗಿದೆ ಯಾಕೆ 

ಗಂಡ ಹೆಂಡಿರ ಜಗಳದಲ್ಲಿ ಮಕ್ಕಳಿಂದು ಒಂಟಿಯಾಗಿದ್ದಾರೆ ತಮ್ಮಾ

 

ನ್ಯಾಯ ನೀತಿಯೇ ಇಲ್ಲದವರ ಜೊತೆಯಲ್ಲಿ ನಾವಿದ್ದೇವೆ ಯಾಕೆ

ಅನ್ಯಾಯವ ಸಮಾಜದಲ್ಲಿ ಮಾಡುತ್ತಲೇ ದೊರೆಯಾಗಿದ್ದಾರೆ ತಮ್ಮಾ

 

ಅಸತ್ಯ ನುಡಿಗಳ ನಡುವೆಯೇ ಸತ್ಯವು ನನಸಿಂದ ದೂರವಾಗಿದೆ ಈಶಾ

ಮೋಹವೇ ತುಂಬಿದ ಜಗದಲ್ಲಿ ಒಳ್ಳೆಯವರು ಮರೆಯಾಗಿದ್ದಾರೆ ತಮ್ಮಾ

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್