ಒಂದು ಗಝಲ್
ಕವನ
ಭಾವನೆ ಬಾರದೆ ಹೋದೆಯ ದೂರಕೆ ಚೆಲುವ
ಜೀವವ ತಾರದೆ ಬಂದೆಯ ಹೇಳದೆ ಚೆಲುವ
ಗೆಲುವನು ಚೆಲ್ಲುತ ಕೊಡುತಿಹ ಕಾರಣ ತಿಳಿಯದೆ
ಚಿಂತೆಯು ಬಂದರು ವಾದವ ಮಾಡುವೆ ಚೆಲುವ
ಜಾತಿಯ ಮೆಟ್ಟಿಲು ಜೊತೆಯಲಿ ಸಾಗಿದೆ ಸುಲಭದಿ
ವಾಸನೆ ಬಾರದೆ ತನುವನು ಸೇರಿತೆ ಚೆಲುವ
ಚಿಂತನೆ ಮೂಡದೆ ಬದುಕದು ಕಂತಿತು ಮನೆಯಲಿ
ಕಾತರ ತುಂಬಿದ ಮೋಹದಿ ಬದುಕಲೆ ಚೆಲುವ
ಬತ್ತಿದ ಕಣ್ಣನು ರಶ್ಮಿಯು ಸುಡುತಿದೆ ಈಶಾ
ಸೇರಿಹ ಮಣ್ಣಲಿ ಮತ್ತದೇ ಹುಟ್ಟಿಹೆ ಚೆಲುವ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
