ಒಂದು ಗಝಲ್

ಒಂದು ಗಝಲ್

ಕವನ

ಎಲ್ಲ ಮರೆತು ಸಾಗಿದೆಯೊ ನನ್ನ ನಲ್ಲ ಎಲ್ಲಿರುವೆ ಸಖ

ಕಾಣದಾ ದಾರಿಯಲಿ ಸೊರ ಸೊರಗಿ ಹೋಗಿರುವೆ ಸಖ

 

ಬಾಯಾರಿ ಒಣಗುತ್ತಲೇ ಮಾತುಗಳು ಬರದಿಂದು ಯಾಕೆ 

ಮರಳುಗಾಡಲಿ ಅಲೆದಲೆದು ಬಳಲಿ ಬೆಂಡಾಗಿರುವೆ ಸಖ 

 

ಮುನಿಸನೇಕೆ ತೋರಿದೆಯೋ ತನುವದುವು ಅಳುತಿಹುದು

ಹೃದಯದೊಳಗೆ ಪ್ರೀತಿ ಬಗೆಗೆ ಬೇಸರವ ತೋರಿರುವೆ ಸಖ

 

ಹೊಸ ಹುರುಪು ಬರಲೀಗ ಹಳೆ ಕೊಳಕು ತೊಲಗಿತೋ

ಕನಸುಗಳ ಬೆಟ್ಟದೊಳಗೆ ಹೊಸತನದಿ ಅರಳಿರುವೆ ಸಖ

 

ಮುದಿಡಿರುವ ಯೌವನದಿ ರಶ್ಮಿ ಚಿಮ್ಮಿತೇ ಈಶಾ

ಒಲವಿನೊಳು ಗೆಲುವಿರಲು ಮತ್ತೆ ಬರುತಿರುವೆ ಸಖ

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್