ಒಂದು ಗಝಲ್
ಕವನ
ಅವಕಾಶವ ಸಾವಕಾಶವಾಗಿಯೇ ಸಾಗಲು ಬಿಡು
ತಲೆಯಿದ್ದರೂ ಮಾತನಾಡದವನ ಹೋಗಲು ಬಿಡು
ಜೊತೆಗಾರನಿಂದು ಶತ್ರುವಾದರೆ ಚಿಂತೆಯು ಏತಕೆ
ಒಳ್ಳೆಯವನನ್ನ ಒಳಗೊಳಗೆಯೇ ಬಾಗಲು ಬಿಡು
ಮನವೆಲ್ಲವು ಮೌನವಾದರೆ ಸೋತನೆಂದು ಅರ್ಥವೇ
ಮಾತಿನಲ್ಲಿ ಗೆಲ್ಲುವವರ ನಡುವೆಯೇ ತೇಗಲು ಬಿಡು
ಚಿಗುರುವ ಕಾಲಕ್ಕೆ ಹೀಗೇ ದೂರದವರು ಕೈಹಿಡಿದರು
ಬಿಟ್ಟವರ ಹಾಸ್ಯದ ವಿನೋದವೋ ತಾಗಲು ಬಿಡು
ಅನುಕರಣೆ ಇಲ್ಲದೇ ಮನುಷ್ಯನು ಬದುಕುವನೆ ಈಶಾ
ಅನುಸರಿಸಿ ನಡೆಯುವ ಕಾಲದವರೆಗೆ ಮಾಗಲು ಬಿಡು
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
