ಒಂದು ಗಝಲ್

ಒಂದು ಗಝಲ್

ಕವನ

ಉರಿಸದಾ ಹಣತೆಯಲಿ ಬೆಳಕು ಹರಿಯುವುದೇ ಹೇಳು

ಮೋಡವಿಲ್ಲದ ನಾಡಲ್ಲಿ ಮಳೆಯು ಸುರಿಯುವುದೇ ಹೇಳು

 

ಎಲ್ಲಾ ಬಲ್ಲವನೆಂದ ನಮಗೆ ನಾವೇ ಮಾಡುವ ಮೋಸ

ಅರಿಯದೆಂದರಿಯದಿರೆ ತನು ತಿರಿಯುವುದೇ ಹೇಳು

 

ಹರಿತ ಖಡ್ಗವ ಹಿಡಿದು ಹೀಗೆ ರಣರಂಗಕ್ಕಿಳಿದರೆ ಸಾಕೇ

ಹೃದಯ ಗಟ್ಟಿ ಇಲ್ಲದಿರೆ ಕತ್ತಿ ತರಿಯುವುದೇ ಹೇಳು

 

ಒಡಲ ಶುದ್ದಿಯೇ ನಮ್ಮ ಸುಖದ ಬದುಕಿನ ಸೂತ್ರವು

ದ್ವೇಷ ಮಡುಗಟ್ಟಿರಲು ಮನಸು ಅರಿಯುವುದೇ ಹೇಳು

 

ಅಹಂ ಎಲ್ಲದಕೂ ಅಡೆತಡೆ ಇನ್ನೂ ತಿಳಿಯದಿರೆ ಈಶಾ

ಹಮ್ಮು ಬಿಮ್ಮಿನ ಜೀವನ ಭವದಿ ಬಿರಿಯುವುದೇ ಹೇಳು

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್