ಒಂದು ಗಝಲ್...

ಒಂದು ಗಝಲ್...

ಕವನ

ಅರಳುಗಳಲಿ ಹೊಗರು ತುಂಬಲಿ, ನವ ವಸಂತಿನ ಎಲರು ಬೀಸಲಿ...

ಸುಖಾಗಮಿಸಿ ಆದರಿಸಿರಿ, ಉದ್ಯಾನಗಳ ಉದ್ಯಮಗಳು ಮುಂದುವರಿಯಲಿ...

 

ಪಂಜರವು ದುಃಖತ್ರಸ್ತಗೊಂಡಿವೆ, ಕೋಮಲ ನಸುತಂಗಾಳಿಗಳಿಗೆ ಹೇಳಿರಿ;

ನಿವೇದಿಸಿದೊಡೆ ದೈವ ಮುನ್ನಿರೇ ಇಂದು ಒಲವಿನ ಪಠಣವ ನುಡಿಹಾಡಲಿ...

 

ಕೆಲವೊಮ್ಮೆಯಾದರೂ ಸರಿ, ನುಸುಕು ಸೌಮ್ಯ ಪ್ರಾತಃಕಾಲ ಬಾಯ್ಗೂಡಿಯೊಂದಿಗೆ ಉದಯವಾಗಲಿ

ಕೆಲವೊಮ್ಮೆಯಾದರೂ ಸರಿ, ರೇಷ್ಮೆ ರಜನಿಗಳು ನಿನ್ನ ಕೇಶರಾಶಿಗಳ ಕಸ್ತೂರಿ ಕಂಪಿಸಲಿ...

 

ಸಂಭವಿಸಿದ್ದೆನ್ನೆಲ್ಲ ಬೆರ್ಪಡೆಯ ಇರುಳಿನಲ್ಲಿ ಸಹಿಸಿಕೊಂಡಿದ್ದೇನೆ. ಆದರೆ,

ಅಶ್ರುಪೂರಿತ ನನ್ನ ಕಣ್ಣೀರುಗಳು, ನಿನ್ನ ಗತಿ ಭವಿತವ್ಯ ನಿರ್ಧರಿಸಲಿ...

 

ಅಣುಗು ಕರೆದಿದ್ದಾಳೆ ತನ್ನ ಆಸ್ಥಾನಕ್ಕೆ ನನಗೆ, ನನ್ನ ಪ್ರೇಮದ ದಸ್ತಾವೇಜಿನೊಂದಿಗೆ;

ಹೊಂದಿದ್ದೇನೆ ನಾನು ಹರುಕಲು ಕೊರಳಪಟ್ಟಿಯೊಂದು. ಅದರಲ್ಲೇ ಸಂತಸಪಡಿಲಿ...

 

'ಫೈಝ'ನ ಸ್ಥಾನಮಾನಕ್ಕೇರುವ ಮಾರ್ಗಯುದ್ದಕ್ಕೂ ಎಂದಿಗೂ ಏನೂ ಸೆಳೆಯಲಿಲ್ಲ;

ಜೀವಸಖಳ ಓಣಿಯಿಂದ ಹೊರನಡೆಯುವ ದಾರಿಗಳು ಗಲ್ಲುಗಂಬದೆಡೆಗೆ ಸಾಗಲಿ...

* * * * *

ಉರ್ದು ಮೂಲ : ಫೈಝ ಅಹ್ಮದ್ ಫೈಝ

ಗಾಯಕರು    : ಮೆಹದಿ ಹಸನ್

ಆಕಾರ ಗ್ರಂಥ : ಲಾ ಜವಾಬ್ ಗಜಲೆನ್

ಕನ್ನಡಕ್ಕೆ         : ಶಿಕ್ರಾನ್ ಶರ್ಫುದ್ದೀನ್ ಎಂ, ಮಂಗಳೂರು. 

 

ಚಿತ್ರ್