ಒಂದು ಚಿತ್ರಕ್ಕೆ ಎರಡು ಕವನಗಳು

ಒಂದು ಚಿತ್ರಕ್ಕೆ ಎರಡು ಕವನಗಳು

ಕವನ

ವಯೋವೃದ್ದನ ಸ್ವಗತ

ನೋವಿನ ಅನುಭವ ನೋಡಿದೆ ಹೃದಯದಿ

ಸಾವದು ಬರದೆಯೆ ಕಾಯುತಲಿ|

ಬವಣೆಯ ಜೊತೆಯಲಿ ಬದುಕಿನ ಕಷ್ಟವ

ಸವಿಯುತ ಉಂಡೆನು ಗುಡಿಸಲಲಿ||

 

ಹಡೆದಿಹ ಮಕ್ಕಳು ಹೊರಹಾಕುತ್ತಲಿ

ನಡೆದಿಹ ಹೊರಗಡೆ ದುಃಖದಲಿ|

ಮಡದಿಯು ತೀರಿದ ಬಳಿಕವೆ ಮನೆಯಲಿ

ನುಡಿದಿಯ ಬಿರುನುಡಿ ಕೋಪದಲಿ||

 

ಚಿಂತೆಯು ಮನದಲಿ ಬಾಧಿಸಿ ಕೊರೆದಿದೆ

ಕಂತೆಯ ನೆನೆಪಲಿ ಹೃದಯವನು|

ಸಂತನ ಹಾಗೆಯೆ ಬದುಕುವೆ ಲೋಕದಿ

ನಂತರ ಬೊಮ್ಮನ ನೆನೆಯುವೆನು||

 

ಅಂಜುತ ಬಾಳದ ಜೀವನ ನನ್ನದು

ಗಂಜಿಯ ಕೊಡದಿಹ ಸುತರಿವರು|

ನಂಜಿನ ವಿಷವನು ಹೊಂದಿಹ ದುಷ್ಟರು

ಕುಂಜರ ತೆರದಲಿ ಕಾಣುವರು||

 

ಗಳಿಸಿದೆ ಹೊಲಮನೆ ನೌಕರಿ ಕೊಡಿಸಿದೆ

ತೋಳದು ಬಲಿಯಲು ನೂಕಿದರು |

ಬೆಳೆಸಿದ ಜನಕನ ಪ್ರೀತಿಯ ಮನವನು

ತಿಳಿಯದ ಮೂಢರು ಹೊರಟಿಹರು||

*✍️ಶಂಕರಾನಂದ ಹೆಬ್ಬಾಳ* 

***************

ಮೂಕವೇದನೆಯಲಿ ವೃದ್ಧ

ಜೀವನ ಪಯಣದ ಏಳು ಬೀಳುಗಳಲಿ

ಚಿಂತಿಸುತಿರುವ ವೃದ್ಧ|

ಭಾವದ ಮೆಟ್ಟಿಲ ಜೋಪಾನ ಮಾಡುತ

ಸಾಗುತಿರುವ ವೃದ್ಧ||

 

ಕಷ್ಟಗಳ ಅನುಭವಿಸಿ ದುಡಿದು ದಣಿದ

ಭಾಗ್ಯಧಾತ  ಮಹಾಮಹಿ|

ನಷ್ಟಗಳ ಸಾಲಿನಲ್ಲಿ ನೆಮ್ಮದಿಯಿಲ್ಲದೆ

ಸೋಲುತಿರುವ ವೃದ್ಧ||

 

ಕಗ್ಗತಲ ಕಾನನದ ಅಳಿವುಳಿವಿನ ಪ್ರಶ್ನೆಯಲಿ

ಮುಗಿದ ಅಧ್ಯಾಯವಾಗುತಿದೆ|

ಬಗ್ಗುಬಡಿದ ಸ್ಥಿತಿಗೆ ಬೇಸತ್ತು ನೊಂದು

ಬೆಚ್ಚುತಿರುವ ವೃದ್ಧ||

 

ಅಹರ್ನಿಶಿಯ ಬವಣೆಯಲಿ ಬಳಲಿ

ಒಪ್ಪತ್ತಿನ ಕೂಳಿಗು ತತ್ವಾರವಾಗಿದೆ|

ವಿಶ್ವಾಸದಿ ಬೆಳೆಯ ಬೆಳೆದರು ಬೆಲೆಯಿಲ್ಲದೆ

ಕೊರಗುತಿರುವ ವೃದ್ಧ||

 

ಬದ್ದನಾಗಿ ಹೊಲಮನೆ ಉಳಿಸುತ ಮಕ್ಕಳ

ಸಾಕುತ ನಡೆದಿಹನು|

ಬುದ್ದಿಲಿ ಅಭಿಜ್ಞನಾಗಿದ್ದರು ಬಾಳಿಗೆ ಬೆಂದು

ಅಂಜುತಿರುವ ವೃದ್ಧ||
 

-ಅಭಿಜ್ಞಾ ಪಿ ಎಮ್ ಗೌಡ 

 

ಚಿತ್ರ್