ಒಂದು ಚಿತ್ರ : ಎರಡು ಗಝಲ್ ಗಳು

ಒಂದು ಚಿತ್ರ : ಎರಡು ಗಝಲ್ ಗಳು

ಕವನ

ಗಝಲ್ - ೧

 

ಹುಣ್ಣಿಮೆ ಚಂದಿರನ ಬೆಳಕು ಕಂಡು ಸಾಗರವು ಉಕ್ಕಿ ಬರುತಿದೆ

ಎಣ್ಣೆಯೆ ಇಲ್ಲದೆ  ಎದೆಯ ಗೂಡಲಿ

ಪ್ರೇಮದೀಪ ಹೊತ್ತಿ ಉರಿತಿದೆ

 

ಭಾವನೆಗಳು ಶರಧಿ ಅಲೆಗಳಾಗಿ

ಮೇಲಿಂದ ಮೇಲೆ ಅಪ್ಪಳಿಸುತಿವೆ

ನೆನಪುಗಳು ಕಣ್ಣಂಚಲಿ ತೇಲುತಲಿ  ಭಾಮೆಯ ರೂಪ ತೋರುತಿದೆ

 

ಇರುಳುಗತ್ತಲು ನೀಲಿ ನಭವದು

ಹೃದಯದ ಬಾಗಿಲು ತಟ್ಟುತಿದೆ

ಗಿರಿಯ ತುದಿಯ ತೆಂಗುಗರಿಗಳು

ಸೊಗಸಾಗಿ  ಚಾಮರ ಬೀಸುತಿದೆ

 

ಹಚ್ಚ ಹಸಿರಿನ ಮಧುರ ಮೈತ್ರಿಯ

ಭೂರಮೆಯ ಶೃಂಗಾರ ಹೆಚ್ಚಿಸಿವೆ

ಹೊಚ್ಚಹೊಸ್ತಿಲ ದಾಟುವ ಸುಂದರಿ

ಆಗಮನದಾಸೆ ಇಮ್ಮಡಿ ಆಗುತಿದೆ

 

ಶಶಿಯ ಚೆಲುವು ಸುಮದ ನಗುವು

ನನ್ನರಸಿ ರಾಧೆಯ ಮೊಗದಲಿ.

ಒಲವ ಧಾರೆಯೇ ಬಾಳಿನ ಸಂಗಾತಿ

ಆಗೆಂದು ಬಿಜಲಿ ಮನ ಕೂಗುತಿದೆ||

 

-*ಶ್ರೀ ಈರಪ್ಪ ಬಿಜಲಿ* 

***

ಗಝಲ್ -೨

 

ತಂಗದಿರನು ಪಡುವಣದಿ ಕೆಂಬಣ್ಣದಿ

ಸಾಗುತಿಹನು

ಬಾನಿನಲ್ಲಿ ಓಕುಳಿಯ ಹೊಂಬಣ್ಣದಿ

ಮೂಡುತಿಹನು

 

ಕಡಲಿನ ತೆರೆಯಿಂದು ಕಡುಕಪ್ಪು

ಧರಿಸುತ್ತ ತೇಲುತಿದೆ

ಮೌನರಾಗವ ಹಾಡುತ ಸ್ತಬ್ಧದಿ

ಜಾರುತಿಹನು

 

ಇಳೆಯಲ್ಲಿ ಚೈತನ್ಯದ ಸಿರಿಯಾಗಿ

ಕೌಮುದಿ ತೋರಿದೆ

ಸಂಧ್ಯಾಕಾಲದಿ ಉಗಮಿಸಿ ಬೆಳಕು

ತೋರುತಿಹನು

 

ಗ್ರಹಣದ ಸಮಯದಿ ಮೋಡದಲಿ

ಅವಿತು ಕುಳಿತಿರುವೆ

ಆಗಸದಿ ಹೊಳೆವ ತರುಣನಂತೆ

ಕಾಣುತಿಹನು

 

ಪೌರ್ಣಿಮೆಯಲಿ ನಲಿದು ಮತ್ತೆ

ಕಳೆಗುಂದುವ ಉಡುರಾಜ

ಅಭಿನವನವಮಹತ್ಕಾವ್ಯಕ್ಕೆ ಒಲಿದು

ಕುಣಿದಿಹನು

 

-*ಶಂಕರಾನಂದ ಹೆಬ್ಬಾಳ* 

***

ಚಿತ್ರ ಕೃಪೆ: ನೆಟ್ ಸಂಗ್ರಹ

ಚಿತ್ರ್