ಒಂದು ಚಿತ್ರ - ಎರಡು ಗಝಲ್ ಗಳು

ಒಂದು ಚಿತ್ರ - ಎರಡು ಗಝಲ್ ಗಳು

ಕವನ

ಗಝಲ್ ೧

ಮಧುವು ಸಿಗಲಲ್ಲಿ 

ಹುಡುಗನು ಹೋದನು

ಕದವು ತೆರೆಯಲಲ್ಲಿ

ಹುಡುಗನು ಹೋದನು

 

ಹುಡುಗಿಯು ಹತ್ತಿರವೇ 

ತಿರುಗಿದಳು ಏತಕೊ

ಸೌಂದರ್ಯದ ನೋಟದಲ್ಲಿ 

ಹುಡುಗನು ಹೋದನು

 

ಮನೆಯ ಒತ್ತಡದಿಂದ 

ಹೀಗಾಯಿತೋ ಏನೊ

ಮನದಾಸೆಯ ಗೆಲುವಲ್ಲಿ 

ಹುಡುಗನು ಹೋದನು

 

ಮದರಂಗಿಯ ನೆನಪುಗಳು 

ಮೂಡದೇನು ಈಗ

ಮದುವೆಯ ಹುರುಪಿನಲ್ಲಿ 

ಹುಡುಗನು ಹೋದನು

 

ಈಶನ ಬೇಡಿಕೊಳ್ಳುವುದು 

ಇಬ್ಬರಿಗಿರುವ ದಾರಿ

ಕನಸಿನ ನನಸಲ್ಲಿ 

ಹುಡುಗನು ಹೋದನು

***

ಗಝಲ್ ೨

ಒಂದೊಳ್ಳೆಯ ಗೆಳೆಯನು 

ನಾನಾಗಬೇಕಿತ್ತು ಅವಳಿಗೆ

ಮಾತೆಲ್ಲವೂ ಸುಂದರ 

ಮುತ್ತಾಗಬೇಕಿತ್ತು ಅವಳಿಗೆ

 

ಚಿತ್ರಗಳಲ್ಲಿಯ ಬೆಳಕಿನಂತೆ 

ಪ್ರೀತಿಯು ಆಗಿಹೋಯಿತೆ

ಚಿಂತಿಸುವ ಮನಕಿಂದು 

ಒಲವಾಗಬೇಕಿತ್ತು ಅವಳಿಗೆ

 

ಎಲ್ಲೋ ಹಾರಾಡಿದ ನೆನಪು 

ಮತ್ತೆ ಮರುಕಳಿಸಿತೆ

ಪ್ರಾರಂಭದ ದಿನಗಳಲ್ಲೇ 

ಗೆಲುವಾಗಬೇಕಿತ್ತು ಅವಳಿಗೆ

 

ಹಳೆಯ ಬಟ್ಟೆಗಳ 

ನಡುವೆ ಬೆಲೆಯು ಬಂದೀತೆ

ಹೊಸತು ದಾರಿಯೊಳು 

ನೆರವಾಗಬೇಕಿತ್ತು ಅವಳಿಗೆ

 

ಚಿಮಿಣಿ ದೀಪದಡಿಯ 

ಕತ್ತಲೆಯಲ್ಲಿ ಬೆಳಕಿದೆಯೆ

ಈಶನ ದೊರಗುಮೈಯು 

ಸವಿಯಾಗಬೇಕಿತ್ತು ಅವಳಿಗೆ

 

-ಹಾ ಮ ಸತೀಶ

 

ಚಿತ್ರ್