ಒಂದು ಜೀವ ಹಲವು ರೂಪ !






ಹೆಣ್ಮಗಳು. ಬಾವುಕಳು. ಹೃದಯಕ್ಕೆ ನೋವಾದರೆ ಕಣ್ಣಲ್ಲಿ ಅದು ಹೆರದು ಹೋಗುತ್ತದೆ. ಅರ್ಥ ಮಾಡಿಕೊಳ್ಳೋ ಹೊತ್ತಿಗೆ ಮತ್ತೆ ಪ್ರಶಾಂತ್ ಕಂಗಳು. ಆಕೆ ಇರೋದೆ ಹಂಗೆ. ಬಾಲ್ಯದಲ್ಲಿ ಎಲ್ಲರ ಚೆಂದನದ ಗೊಂಬೆ. ಯೌವ್ವನ ಹತ್ತಿರ ಬಂದರೆ ಮುಗೀತು. ಹತ್ತು ಹಲವು ಸಮಸ್ಯೆ ಸುತ್ತು ವರೆಯುತ್ತವೆ. ಅಪ್ಪ ಹೊರಗೆ ಹೋಗಬೇಡ ಅಂತಾನೆ. ಅಣ್ಣ ,ತಮ್ಮ ಇದ್ದರೆ ಆಯಿತು ಗದರುತ್ತಾರೆ. ವಾಚ್ ಮನ್ ಥರ ವಾಚ್ ಮಾಡ್ತಾರೆ. ಆಕೆ ಮಾಡೋದಾದರೂ ಏನೂ.
ಈ ಪ್ರಶ್ನೆಗೆ ಯಾರು ಉತ್ತರಿಸೋರು. ಗೊತ್ತಿಲ್ಲ. ತಂದೆ-ತಾಯಿಯರೇ ಮಕ್ಕಳನ್ನ ಬೆಳೆಸೋವಾಗ ನೆಟ್ಟಗೆ ಬೆಳಸಬೇಕು. ಗಂಡು ಮಗುವಿಗೆ ಸರಿಯಾಗಿ ಬಿಹೇವ್ ಮಾಡೋದನ್ನ ಕಲಿಸಬೇಕು. ಹುಡುಗಿ ನಿರ್ಬಿಡೆಯಿಂದ ಹೊರಗೆ ಓಡಾಡಲು ಬಿಡಬೇಕು.
ಈ ಸಾಲು ಬರೆಯೋಕೆ ಫೇಸ್ ಬುಕ್ ನ ಕೆಲವು ಸಾಲುಗಳೇ ಪ್ರೇರಣೆ. ಕೆರೆಯ ನೀರು ಕೆರೆಗೆ ಚೆಲ್ಲಿ ಅನ್ನೋ ಹಾಗೆ. ಫೇಸ್ ಬುಕ್ ನಲ್ಲಿ ಬಂದ ಸಾಲುಗಳನ್ನೆ ಇಲ್ಲಿ ಸಲ್ಪ ವಿಸ್ತಾರವಾಗಿ ಹೇಳ್ತಿದ್ದೇನೆ. ಇದರಿಂದ ಏನೋ ಒಂದು ನೆಮ್ಮದಿ ಸಿಗುತ್ತದೆ. ಶಾಶ್ವತ ನೆನಪಾಗಿ ಉಳಿಯುತ್ತದೆ.
ಆ ಸಾಲು ಹೀಗಿವೆ. ನಿಮ್ಮ ಮಗಳನ್ನ ಹೊರಗಡೆ ಹೋಗಬೇಡಿ ಅಂತ ಹೇಳಲೇಬೇಡಿ. ಇದು ಒಂದು ಮಾತು. ಮತ್ತೊಂದು ಮಾತು ಇದೆ. ಅದು ಗಂಡು ಮಕ್ಕಳಿಗೆ ಸಂಬಂಧಿಸಿದ್ದು. ಅದು ಹೀಗಿದೆ ನೋಡಿ. ಗಂಡು ಮಕ್ಕಳಿಗೆ ಹೊರಗಡೆ ಹೇಗೆ ಬಿಹೇವ್ ಮಾಡಬೇಕು ಅಂತ ಕಲಿಸಿಕೊಡಿ ಅಂತ. ಎರಡೂ ಸೇರಿಸಿದಾಗ ಅರ್ಥ ಬರೋದು ಒಂದೇ. ಹೆಣ್ಣು ಮಕ್ಕಳೊಟ್ಟಿಗೆ ಚೆನ್ನಾಗಿ ಬಿಹೇವ್ ಮಾಡಿ ಅಂತ ಗಂಡುಮಕ್ಕಳಿಗೆ ಹೇಳುತ್ತದೆ ಈ ಸಾಲುಗಳು. (Dont tell your Daughter Not to go Out-Tell your son to behave properly)
ಈ ಸಾಲುಗಳು ನನ್ನ ತುಂಬಾ ಕಾಡಿವೆ. ನಾವು ಎಷ್ಟು ಸರಿಯಾಗಿ ಬಿಹೇವ್ ಮಾಡ್ತೀವಿ ಅಂತ. ಹುಡುಗಿ ಸಲಿಗೆ ಕೊಟ್ಟರೆ ಏನೇನೋ ಮಾಡೋ ಕೋತಿ ಬುದ್ದಿ ಹೋಗೋದೇಯಿಲ್ಲ. ನಾನು ಎಷ್ಟು ಸರಿ. ನಾವು ಎಷ್ಟು ಸರಿ ಎಂಬ ಪ್ರಶ್ನೆ ನನನ್ನ ಸದಾ ಹಿಂಡುತ್ತದೆ. ಯಾಕೆ ಗೊತ್ತಿಲ್ಲ.
-ರೇವನ್ ಪಿ.ಜೇವೂರ್