ಒಂದು ನ್ಯಾನೋ ಕಥೆ- ಆತ
ಆತ ಭಾವಜೀವಿ. ಆತನಿಗೆ ಹೆಣ್ಣು ಮಕ್ಕಳೆಂದರೆ ಪ್ರಾಣ, ಆದರೆ ದೇವರು ಆತನಿಗೆ ಬರೀ ಗಂಡು ಮಕ್ಕಳನ್ನೇ ದಯಪಾಲಿಸಿ ಮೋಸ ಮಾಡಿ ಬಿಟ್ಟ! ಆ ಮಕ್ಕಳನ್ನೇ ತನ್ನ ಯೋಗ್ಯತೆಗೆ ತಕ್ಕಂತೆ ಪ್ರೀತಿಯಿಂದ ಬೆಳೆಸಿದ. ಅವರು
ಇಷ್ಟಪಟ್ಟವರೊಂದಿಗೆ ಮದುವೆಯನ್ನೂ ಮಾಡಿದ!ಮದುವೆಯಲ್ಲಿ ಮಕ್ಕಳೊಂದಿಗೆ ಮಗುವಾಗಿ ಕುಣಿದಾಡಿದ, ಹಾಡಿದ! ಮದುವೆಯಾದ ಮಾರನೇ ದಿನ, ಮಗನ ಮೇಲೆ ಯಾವುದೋ ಮಾತಿಗೆ ತನ್ನ ಹಕ್ಕನ್ನು ಚಲಾಯಿಸಿದ. ಬೀಗರೆದುರೇ ಮಗ ಹೇಳಿದ " ನನ್ನ ಹೆಂಡತಿ ನನ್ನಿಷ್ಟ"! ಆತ ತತ್ತರಿಸಿ ಹೋದ!
-ಪರಮೇಶ್ವರಪ್ಪ ಕುದರಿ