ಒಂದು ಪವರ್ ಫುಲ್ ಕತೆ

ಒಂದು ಪವರ್ ಫುಲ್ ಕತೆ

ಒಂದು 'ಪವರ್ ಫುಲ್' ಕತೆ

ಪತ್ರಿಕೋದ್ಯಮ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಒಬ್ಬರು ತಮ್ಮ ವಿದ್ಯಾರ್ಥಿಗಳಿಗೆ ರಾಜ್ಯದ ಯಾವುದಾದರೂ ಪ್ರಭಾವಿ ರಾಜಕಾರಣಿಗಳ ಸಂದರ್ಶನ ಪಡೆದು ವರದಿ ತಯಾರಿಸುವಂತೆ ಸೂಚಿಸುತ್ತಾರೆ.ಅದರಂತೆ ವಿದ್ಯಾರ್ಥಿಗಳು ಪ್ರಭಾವಿ ರಾಜಕಾರಣಿಗಳನ್ನು ಹುಡುಕಿ ಅವರ ಸಂದರ್ಶನ ಪಡೆಯಲು ಕಸರತ್ತು ನಡೆಸುತ್ತಾರೆ.ಅದರಲ್ಲೊಬ್ಬಳು ವಿದ್ಯಾರ್ಥಿನಿ ತನ್ನವರ ಪ್ರಭಾವ ಬಳಸಿ ರಾಜ್ಯದ ವೆರಿ 'ಪವರ್ ಫುಲ್' ರಾಜಕಾರಣಿಯೊಬ್ಬರ ಸಂದರ್ಶನ ಪಡೆಯಲು ಅನುಮತಿ ದೊರಕಿಸಿಕೊಳ್ಳುತ್ತಾಳೆ.ಯಶಸ್ವಿಯಾಗಿ ಸಂದರ್ಶನ ಮುಗಿಸಿ ಸವಿವರ ವರದಿ ತಯಾರಿಸಿ ಅದನ್ನು ಒಪ್ಪಿಸಲೆಂದು ಅಸಿಸ್ಟೆಂಟ್ ಪ್ರೊಫೆಸರ್ ಬಳಿ ತೆರಳುತ್ತಾಳೆ.ವಿಶ್ವವಿದ್ಯಾಲಯದ ಯಾವುದೇ ಮೂಲೆಯಲ್ಲು ಹುಡುಕಿದರು ಪ್ರೊಫೆಸರ್ ಸಿಗಲಿಲ್ಲ. ವಿಚಾರಿಸಿದಾಗ ಅವರು ಅಮಾನತ್ತಾಗಿದ್ದಾರೆ ಎಂಬ ಉತ್ತರ ಸಿಕ್ಕಿತು.ಕಡೆಗೆ ವಿಭಾಗದ ಮುಖ್ಯಸ್ಥರಿಗಾದರು ಸಂದರ್ಶನದ ಪವರ್ ಫುಲ್ ವರದಿ ಒಪ್ಪಿಸೋಣ ಎಂದು ತೀರ್ಮಾನಿಸಿ ಅವರ ಕೊಠಡಿಗೆ ಹೋದಳು.ಅಲ್ಲಿಯೂ ಅವಳಿಗೆ ಆಶ್ಚರ್ಯ ಕಾದಿತ್ತು. ವಿಭಾಗದ ಮುಖ್ಯಸ್ಥರು ಎರಡು ದಿನಗಳ ಹಿಂದೆ ಸ್ವಯಂ ನಿವೃತ್ತಿ ಪಡೆದು ಮನೆ ಕಡೆ ಹೆಜ್ಜೆ ಹಾಕಿದ್ದರು.ಕೇವಲ ಐದು ದಿನಗಳ ಒಳಗೆ ವಿಶ್ವವಿದ್ಯಾಲಯದಲ್ಲಿ ಆದ ಈ ರೀತಿಯ ದಿಢೀರ್ ಬೆಳವಣಿಗೆಯಿಂದ ಅವಳು ಗೊಂದಲಕ್ಕೊಳಗಾದಳು.ಕೆಲವರನ್ನು ವಿಚಾರಿಸಿ ನೋಡಿದಳು.ಅವರು 'ಗೊತ್ತಿಲ್ಲ'ಎಂಬ ಒಂದು ಪದದ ಉತ್ತರ ಕೊಟ್ಟರು.ಹೀಗೆ ಗೊಂದಲದಲ್ಲಿರಬೇಕಾದರೆ ಅವಳ ವಿಳಾಸಕ್ಕೆ ಒಂದು ಪತ್ರ ಬರುತ್ತದೆ.ಅದರಲ್ಲಿ 'ಸಂತ್ರಸ್ತ ಅಸಿಸ್ಟಂಟ್ ಪ್ರೊಫೆಸರ್'ಎಂಬ ಒಕ್ಕಣೆಯಿತ್ತು.ಒಳಗಡೆ,ನಿನಗೆ ಪ್ರಭಾವಿ ರಾಜಕಾರಣಿಯ ಸಂದರ್ಶನ ಮಾಡು ಅಂದಿದ್ದೆ ಅತೀ ಪ್ರಭಾವಿದ್ದಲ್ಲ,ನೀನು ಸಂದರ್ಶನದಲ್ಲಿ ಅವರ ಹಗರಣ,ಮಾಫಿಯದ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ನಿನಗೆ ಪಾಠ ಹೇಳಿಕೊಟ್ಟ ನನ್ನನ್ನು ತಮ್ಮ ಪ್ರಭಾವ ಬಳಸಿ ಅಮಾನತು ಮಾಡಿಸಿದ್ದಾರೆ.
ಇನ್ನು ವಿಭಾಗದ ಮುಖ್ಯಸ್ಥರು ಪವರ್ ಫುಲ್ ಮಂತ್ರಿಯ ಕಿರುಕುಳ ತಾಳಲಾರದೆ ತಮ್ಮ ಕೆಲಸಕ್ಕೆ ರಾಜಿನಾಮೆ ಕೊಟ್ಟು ಮನೆಗೆ ಹೋಗಬೇಕಾಯಿತು.ನೀನು ಪವರ್ ಫುಲ್ ಸಂದರ್ಶನ ಮಾಡಲು ಹೋಗಿ ನಮಗೆ ಪವರ್ ಇಲ್ಲದ ಹಾಗೆ ಮಾಡಿದೆ ಎಂದು ಬರೆದಿತ್ತು.ಇದನ್ನು ಓದಿದ ಅವಳು, ಅ ಪವರ್ ಫುಲ್ ಮಂತ್ರಿ ಪುಣ್ಯಕ್ಕೆ ವಿಶ್ವವಿದ್ಯಾಲಯ ಮುಚ್ಚಿ ಹಾಕಲಿಲ್ಲ ಅಂತ ಸಮಾಧಾನ ಪಟ್ಟುಕೊಂಡಳು.

-@ಯೆಸ್ಕೆ

Comments