ಒಂದು ಭಾಷೆಯ ಉಳಿವು ಒಂದು ಸಂಸ್ಕೃತಿಯ ಉಳಿವು

ಒಂದು ಭಾಷೆಯ ಉಳಿವು ಒಂದು ಸಂಸ್ಕೃತಿಯ ಉಳಿವು

ಇತ್ತೀಚನ ದಿನಗಳಲ್ಲಿ ಪ್ರಾದೇಶಿಕ ಭಾಷೆಗಳು ತನ್ನೂರಿನಲ್ಲೆ ಪರದಾಡುತ್ತಿವೆ. ಭೂಗೋಳದಲ್ಲಿಯೆ ಅತ್ಯಂತ ಪ್ರಾಚೀನ ಭಾಷೆಗಳಾದ ದ್ರಾವಿಡ ಭಾಷೆಗಳು ತಮ್ಮನ್ನು ಉಳಿಸಿ ಎಂದು ಬೇಡಿಕೊಳ್ಳುವ ಪರಿಸ್ಥಿತಿ ಬಂದಿದೆ. ಇದಕ್ಕೆ ಪುಷ್ಟಿ ಎನ್ನುವಂತೆ ಕೇಂದ್ರ ಸರ್ಕಾರವು "ಒಂದು ದೇಶ ಒಂದು ಭಾಷೆ" ಎಂಬ ವಾಕ್ಯದೊಂದಿಗೆ  ಸೆಪ್ಟೆಂಬರ್ ೧೪ ರಂದು ಹಿಂದಿ ದಿವಸ ಎಂದು ಘೋಷಿಸಿದೆ. ೨೦೨೪ರ ಚುನಾವಣೆ ಹೊತ್ತಿಗೆ ಈ ವಿಚಾರದಲ್ಲಿ ಮಹತ್ವದ ಪ್ರಗತಿಯಾಗಬೇಕು ಎಂದು ಗೃಹಮಂತ್ರಿಗಳು ಹೇಳಿಕೆ ನೀಡಿದ್ದಾರೆ

ಹಾಗಂತ ಇದೇನು ಬಿಜೆಪಿ ಪಕ್ಷದ ಆಶಯವಷ್ಟೆ ಅಲ್ಲ ಸಂವಿಧಾನ ರಚನೆಕಾರರು ಸಂವಿಧಾನದ ವಿಧಿ ೩೫೧ ರ ಪ್ರಕಾರ ಹಿಂದಿಯನ್ನು ಬೆಳೆಸುವುದು ಕೇಂದ್ರ ಸರ್ಕಾರದ ಕರ್ತವ್ಯವೆಂದು ಬರೆದಿದೆ. ಹಾಗದರೆ ಸಂವಿಧಾನ ಪಾಲಿಸುವುದರಲಿ ತಪ್ಪೇನಿದೆ ಎನ್ನಿಸಬಹುದು ಆದರೆ ಕ್ಷಣ ಕ್ಷಣಕ್ಕೂ ಬದಾಲಗುವ ಈ ಯುಗದಲ್ಲಿ ಮುಂದೇನಾಗುವುದು ಎಂದು ಊಹಿಸಲು ಅಸಾಧ್ಯ. ಆಗಿನ ಕಾಲದ ಸಾಕ್ಷರತೆ ಇನ್ನಿತರೆಗಳನ್ನು ಗಮನಿಸಿ ಅವರು ಹಿಂದಿ ರಾಷ್ಟ್ರ ಭಾಷೆಯಾಗಲಿ ಎಂದು ಪರಿಗಣಿಸಿರಬಹುದು. ಆದರೆ ಈಗ ಅವರ ಊಹೆಯಂತಿಲ್ಲ ದಕ್ಷಿಣ ಭಾರತೀಯಾರದ ನಾವು ಆಂಗ್ಲ ಭಾಷೆಯನ್ನು ಯಾವುದೆ ತಕಾರಾರಿಲ್ಲದೆ ಒಪ್ಪಿಕೊಂಡಿದ್ದೇವೆ ಆದರೆ ಹಿಂದಿಯಂದರೆ ಅದನ್ನು ಹೇರಿಕೆ ಎಂದೆ ಪರಿಗಣಿಸುತ್ತೇವೆ . ಆದ್ದರಿಂದ ಸರ್ಕಾರ ಪ್ರಸ್ತುತ ಕಾಲಕ್ಕೆ ತಕ್ಕಂತೆ ತನ್ನ ನಿರ್ಧಾರವನ್ನು , ಕಾರ್ಯಗಳನ್ನು ಮಾಡಬೇಕು. 

ಟ್ರಂಪ್ ಭಾರತದ ಪ್ರವಾಸದಲ್ಲಿ ಕೆಲವು ಬಾರಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದರು ಆದರೆ ಭಾರತದ ಶೇಕಡ ೩೫ ರಷ್ಟು ಮಂದಿಗೆ ಹಿಂದಿಯೆ ಬಾರದು. ಜಗತ್ತಿನ ಒಬ್ಬ ಪ್ರಮುಖ ನಾಯಕನಿಗೆ ಹಿಂದಿ ಪ್ರಮುಖ ಭಾಷೆ ಎಂದು ಬಿಂಬಿಸಿರುವುದು ನಮ್ಮ ದುರದೃಷ್ಟವೆ ಸರಿ. ವೈವಿಧ್ಯತೆಯಲ್ಲಿ ಏಕತೆ ಎಂದು ಸಾರುವ ನಮ್ಮ ದೇಶದಲ್ಲಿ ಎಲ್ಲಾ ಭಾಷೆಗಳಿಗು ಸಮನಾದ ಗೌರವ ಸಿಗಬೇಕು. ಭಾಷೆ ಒಂದು ಬರಿ ಸಂವಹನದ ದಾರಿಯಲ್ಲ ಅದು ಸ್ಥಳೀಯ ಸಂಸ್ಕ್ರತಿ ಮತ್ತು ಅಲ್ಲಿಯ ಜನರ ಭಾವನೆಯಾಗಿರುತ್ತದೆ.

ರಾಷ್ಟ್ರೀಯ ಮುಖ್ಯ ಸರ್ಕಾರಿ ವಾಹಿನಿಗಳಾದ ರಾಜ್ಯಸಭ ಮತ್ತು ಲೋಕಸಭಾಗಳಲ್ಲಿಯು ಬಹುತೇಕ ಕಾರ್ಯಕ್ರಮಗಳು ಹಿಂದಿಯಲ್ಲೆ ಪ್ರಸಾರವಾಗುತ್ತವೆ. ಅನೇಕ ಕೇಂದ್ರ ಸರ್ಕಾರಿ ಕೆಲಸದ ಪರೀಕ್ಷೆಗಳು ಕೇವಲ ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಬರೆಯುವ ಅವಕಾಶವಿರುತ್ತದೆ. ಇದರಿಂದ ಅನೇಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸಿವ ಕೆಲಸಕ್ಕೆ ಅರ್ಹರಾಗುವ ಎಲ್ಲಾ ಕ್ಷಮತೆ ಇದ್ದರು ಕೇವಲ ಭಾಷೆಯ ಸಮಸ್ಯೆಯಿಂದ ಅವಕಾಶ ವಂಚಿತರಾಗುತ್ತಾರೆ. ಅದರಿಂದಲೆ ಗ್ರಾಮೀಣ ಭಾಗದ ಬ್ಯಾಂಕ್ ಗಳು ಹಿಂದಿಮಯವಾಗಿವೆ , ಹಲಾವರು ATM ಗಳಲ್ಲಿಯು ಸಹ ಪ್ರಾದೇಶಿಕ ಭಾಷೆ ಲಭ್ಯವಿಲ್ಲ. ನಾವೇನು ಈ ದೇಶದ ತೆರಿಗೆಯನ್ನು ಪಾವತಿಸುವುದಿಲ್ಲವೆ ರಾಷ್ಟ್ರದ ಬಹುತೇಕ ಆರ್ಥಿಕತೆ ದಕ್ಷಿಣ ಭಾರತದ ಮೇಲೆಯೇ ನಿಂತಿದೆ. ಅತ್ಯಧಿಕ ತೆರಿಗೆ ಪಾವತಿಯ ಮೊದಲೈದು ಸ್ಥಾನದಲ್ಲಿ ದಕ್ಷಿಣದ ಮೂರು ರಾಜ್ಯಗಳಿವೆ. ಆದರೂ ನಮ್ಮ ಮೇಲೆ ತಾತ್ಸರವೇಕೆ.

ದಕ್ಷಿಣ ಭಾರತದವರು ದೆಹಲಿಗೆ ಹೋಗುವುದಕ್ಕಿಂತ ಉತ್ತರದವರು ಬೆಂಗಳೂರು, ಚೆನ್ನೈ , ಹೈದರಾಬಾದ್ ಗೆ ವಲಸೆ ಬರುವುದೆ ಹೆಚ್ಚು. ಇಲ್ಲಿಗೆ ಬಂದ ಅನೇಕರಿಗೆ ನಮ್ಮ ಭಾಷೆಯ ಮೇಲಾಗಾಲಿ ನಾಡಿನ ಮೇಲಾಗಲಿ ಕಿಂಚಿತ್ತು ಗೌರವ ಕಾಣಿಸುವುದಿಲ್ಲ ಕಾರಣ ನಮ್ಮ ಭಾಷೆಯ ಬಗ್ಗೆ ಅವರಿಗೆ ಸ್ವಲ್ಪವು ಅರಿವಿರುವುದಿಲ್ಲ.
ದಕ್ಷಿಣ ಭಾರತದ ನಮಗೆ ಹಿಂದಿಯನ್ನು ತೃತೀಯ ಭಾಷೆಯಾಗಿ ಶಿಕ್ಷಣದಲ್ಲಿ ಅಳವಡಿಸಿದ್ದಾರೆ ಆದರೆ ಏಕೆ ಉತ್ತರ ಭಾರತೀಯಯರಿಗೆ ದ್ರಾವಿಡ ಭಾಷೆಗಳನ್ನು ಪರಿಚಯಿಸಿಬಾರದು ಆಗಲೇ ತಾನೆ ನಮ್ಮ ಸಂಸ್ಕ್ರತಿಯು ಅವರಿಗೆ ತಿಳಿವುದು, ಆಗಲೆ ಏಕತೆಗೆ ನಿಜವಾದ ಅರ್ಥ ಬರುವುದು.

ಒಂದು ಭಾಷೆ ಹೋರಾಟದಿಂದಾಗಲಿ , ಸಂಘಟನೆಗಳಿಂದಾಗಲಿ ಉಳಿಯುದಿಲ್ಲ .ಒಂದು ಭಾಷೆ ಅಳಿಸಿದರೆ ಒಂದು ಸಂಸ್ಕೃತಿಯೆ ಅಳಿಸಿದಂತೆ. ಸುಮಾರು ೨೦೦ ದಶಲಕ್ಷ ಜನ ಮಾತನಾಡುವ ಭಾಷೆಗಳನ್ನು ಕಡೆಗಣಿಸಬಾರದು . ಅದನ್ನು ಬೆಳೆಸಿಕೊಂಡು ಹೋಗುವಂತ ಕೆಲಸವನ್ನು ಸರ್ಕಾರ ಮಾಡಬೇಕು ಆಗಲೇ ವೈವಿಧ್ಯತೆಯಿಂದ ಏಕತೆ ಸಾಧ್ಯ ರಾಷ್ಟ್ರದ ಪ್ರಗತಿಗೆ ದಾರಿ.