ಒಂದು ಭೇಟಿ, ಒಂದು ಯುಗದ ಪ್ರಾರಂಭ
ಅನಿರಿಕ್ಷಿತ ಭೇಟಿಗಳು ಹೊಸ ಉತ್ತೇಜನಕ್ಕೆ ಕಾರಣವಾಗುತ್ತದೆ. ಆದರೆ ಇಲ್ಲೊಂದು ಭೇಟಿ ಭಾರತದ ಭವಿಷ್ಯವನ್ನೆ ಬದಲಾಯಿಸುತ್ತದೆ, ಭಾರತದಲ್ಲಿ ವಿಜ್ಞಾನವನ್ನು ನೆಲೆಯೂರಿಸುತ್ತದೆ. ಇಂದು ಭಾರತ ವಿಜ್ಞಾನ ರಂಗದಲ್ಲಿ ಏನೆ ಸಾಧನೆ ಮಾಡಿದ್ದರು, ಅದಕ್ಕೆ ಕಾರಣ ಆ ಭೇಟಿ.
ಅದು 1893, ಜಪಾನಿನಿಂದ ಚಿಕಾಗೊಗೆ ತೆರಳುತ್ತಿದ್ದ ಹಡಗಿನಲ್ಲಿ ಭಾರತದ ಕೈಗಾರಿಕ ಕ್ಷೇತ್ರದ ಪಿತಾಮಹ ಜಮ್ ಶೆಡ್ ಜೀ ಟಾಟಾ ಪ್ರಯಾಣಿಸುತ್ತಿದ್ದರು.ಅದೇ ಹಡಗಿನಲ್ಲಿ ಪ್ರಪಂಚ ಕಂಡ ಅದ್ಬುತ ವ್ಯಕ್ತಿ, ಭಾರತಾಂಬೆಯ ಹೆಮ್ಮೆಯ ಪುತ್ರ ಸ್ವಾಮಿ ವಿವೇಕಾನಂದರು ಪ್ರಯಾಣಿಸುತ್ತಿದ್ದರು. ಇಬ್ಬರೂ ಅನಿರಿಕ್ಷಿತವಾಗಿ ಮುಖಾಮುಖಿಯಾದಾಗ ಹಲವು ವಿಷಯಗಳ ಬಗ್ಗೆ ಚರ್ಚಿಸಿದರು. ಬರೀ ವ್ಯಾಪರದ ಚಿಂತನೆಯಲ್ಲಿ ತೊಡಗಿದ್ದ ಟಾಟಾರವರು ಕೆಲವೇ ಮಾತುಗಳಿಂದ ಆದ್ಯಾತ್ಮಕ್ಕೆ ತಲೆದೂಗಿದರು.
ಸ್ವಾಮಿಗಳ ಮಾತುಗಳಿಗೆ ಮರುಳಾದರು, ಅವರ ಬುದ್ದಿವಂತಿಗೆಗೆ ಅಚ್ಚರಿಪಟ್ಟರು. ಅವರ ದೇಶ ಪ್ರೇಮಕ್ಕೆ ಶರಣಾದರು. ತಾನು ಸರ್ವಧರ್ಮ ಸಮ್ಮೇಳನಕ್ಕೆ ಹೊರಟಿರುವುದಾಗಿ ತಿಳಿಸಿದರು. ತಾನು ನಾನಾ ದೇಶಗಳಿಂದ ಯಂತ್ರಗಳನ್ನು ತಂದು ಭಾರತದ ಕೈಗಾರಿಕ ಕ್ಷೇತ್ರವನ್ನು ಶಕ್ತಿಗೊಳಿಸುವುದಾಗಿ ತಿಳಿಸಿದರು ಟಾಟಾ.
ಬರೀ ಕೈಗಾರಿಕೆ ಸಾಲದು ನಾವು ವೈಜ್ಞಾನಿಕವಾಗಿ ಬೆಳೆಯಬೇಕು, ಭಾರತದಲ್ಲಿ ವಿಜ್ಞಾನ ಕ್ಷೇತ್ರ, ಸಂಸ್ಥೆಗಳು ತಲೆಯೆತ್ತಬೇಕೆಂದು ಸ್ವಾಮಿ ಅಭಿಪ್ರಾಯ ಪಟ್ಟರು. ಅದೆ ಅವರಿಬ್ಬರ ಮೊದಲ ಮತ್ತು ಕೊನೆಯ ಭೇಟಿ. ಸ್ವಾಮಿಗಳ ಮಾತುಗಳನ್ನು ಟಾಟಾರವರು ಅದೇಷ್ಟು ಗಂಭೀರವಾಗಿ ತೆಗೆದುಕೊಂಡರೆಂದರೆ 1898 ನವೆಂಬರ್ 23ರಂದು ಸ್ವಾಮಿಗಳಿಗೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಟಾಟಾ ಇನ್ಸ್ಟಿಟ್ಯೂಟ್) ಸ್ಥಾಪನೆಗೆ ವಿವೇಕಾನಂದರಿಗೆ ಆಹ್ವಾನ ಪತ್ರಿಕೆ ಕಳಿಸಿದರು. ಸ್ವಾಮಿಗಳು ರಾಮಕೃಷ್ಣ ಮಿಷನ್ ಸ್ಥಾಪನೆಯ ತರಾತುರಿಯಲ್ಲಿದ್ದರಿಂದ ಸಿಸ್ಟರ್ ನಿವೇಧಿತರನ್ನು ಕಳುಹಿಸಿಕೊಟ್ಟರು.
ವಿವೇಕಾನಂದರ ಹೆಸರು ಕೇಳಿದ ತಕ್ಷಣವೆ ಎರಡು ಮಾತಿಲ್ಲದೆ ಕೃಷ್ಣರಾಜ ಒಡೆಯರ್ 371 ಎಕರೆ ಜಾಗವನ್ನು ಬೆಂಗಳೂರಿನಲ್ಲಿ ಸಂಸ್ಥೆಗಾಗಿ ಉಡುಗೊರೆ ನೀಡಿದರು.
ಸ್ವಾಮಿಗಳು ಜುಲೈ 1902 ರಲ್ಲಿ ವಿಧಿವಶರಾದರು. ಟಾಟಾರವರು 1904 ರಲ್ಲಿ ವಿಧಿವಶರಾದರು.
ಆದರೇ 1909ರಲ್ಲಿ ಟಾಟಾ ಇನ್ಸ್ಟಿಟ್ಯೂಟ್ ತಲೆಯೆತ್ತಿತು. ಇದರ ಬೆನ್ನಲ್ಲೆ 1930 ರಲ್ಲಿ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೊಷಿಯಲ್ ಸೈನ್ಸ್, 1940ರಲ್ಲಿ ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ಎಲ್ಲವೂ ಉದ್ಬವಗೊಂಡವು.
ಇಂದು ಭಾರತ ವಿಜ್ಞಾನ ಕ್ಷೇತ್ರದಲ್ಲಿ ಅದೇಷ್ಟೊ ಸಾಧನೆಗಳು ಮಾಡಿದೆ. ಪಕ್ಕದ ಗ್ರಹ ಮಾರ್ಸ್ ಮೇಲೆಯೂ ತನ್ನ ಕೈಚಳಕ ತೊರಿದೆ. ಇದಕ್ಕೆಲ್ಲ ಬುನಾಧಿ ಆ ಭೇಟಿಯೆಂದರೆ ತಪ್ಪಾಗಲಾರದು.
ಇದಕ್ಕೆಲ್ಲ ಕಾರಣ ಆ ಮಹಾನ್, ಆ ಶಕ್ತಿ...
'ಸ್ವಾಮಿ ವಿವೇಕಾನಂದರು'
- ನಿಮ್ಮ ಗೆಳೆಯ ಮುರಳಿ
Comments
ಉ: ಒಂದು ಭೇಟಿ, ಒಂದು ಯುಗದ ಪ್ರಾರಂಭ
:)