ಒಂದು ಸಣ್ಣ ಅನುಭವ

ಒಂದು ಸಣ್ಣ ಅನುಭವ

ಕವನ

ನಾ ಹೊರಟೆ ಕಛೇರಿಗೆ ಈ ದಿನ.

ಎನಗಾಯ್ತು  ನಾರಾಯಣ ಸ್ವರೂಪಿ ನಾಯಿಯ ದರ್ಶನ.

 

ನನ್ನನ್ನು ನೋಡಿ  ಅದು ಬೊಗಳಲು  ಶುರು ಮಾಡಿತ್ತು,

ನನ್ನ ಎದೆಯ ಜಂಘಾ ಬಲವೇ ಉಡುಗಿತ್ತು.

 

 ಕಚ್ಚುವ ನಾಯಿ ಬೊಗಳದು, ಬೊಗಳುವ ನಾಯಿ ಕಚ್ಚದು ಎಂಬುದೊಂದು ಮಾತು,

ಆದರೆ  ಈ ಪ್ರಾಣಿಯ ರೀತಿ ನೀತಿ ಯಾರಿಗೆ ಗೊತ್ತು?

 

ಚಿಕ್ಕಂದಿನಲ್ಲಿ  ಕಚ್ಚಿಸಿಕೊಂಡ  ಆ ನೆನಪು,

 ಮೂಡಿಸಿದೆ ಮನದಲ್ಲಿ ಅದರ ಛಾಪು.

 

ಹೆದರಿ ನಾ ಹಿಡಿದೆ ಆಫೀಸಿಗೆ  ಬೇರೆಯೇ ದಾರಿ,

ಮಾಡುತ್ತಾ ನಮನ ದೇವರಿಗೆ ಮನದಲ್ಲಿ ನೂರು ಬಾರಿ.

 

Comments