ಒಂದು ಸರಳಕತೆ
ಒಂದು ಸರಳಕಥೆ...
ಗುರುಗಳೊಬ್ಬರು ಮೌಲ್ಯಶಿಕ್ಷಣದ ತರಗತಿಯಲ್ಲಿ 'ತಾಳ್ಮೆ'ವಿಷಯದ ಕುರಿತು ಪಾಠ ಮಾಡುತ್ತಿದ್ದರು.ಕಥೆಯ ರೂಪದಲ್ಲಿ ಜೀವನದಲ್ಲಿ ತಾಳ್ಮೆಯ ಮಹತ್ವವನ್ನು ಬಹಳ ಸೊಗಸಾಗಿಯೇ ಮಕ್ಕಳಿಗೆ ಹೇಳಿಕೊಡುತ್ತಿದ್ದರು.ತರಗತಿಯಲ್ಲಿ ಒಬ್ಬ ವಿದ್ಯಾರ್ಥಿ ಮಾತ್ರ ಇವರ ನೀತಿಕತೆಗೆ ಕಿವಿಗೊಡದೆ ತನ್ನ ಪಾಡಿಗೆ ತಾನು ಏನೋ ಗೀಚಿಕೊಳ್ಳುತ್ತಿದ್ದ.ಗುರುಗಳು ಒಂದೆರಡು ಬಾರಿ ಎಚ್ಚರಿಸಿದರೂ ಅವನು ಮಾತ್ರ ಎಚ್ಚರಗೊಳ್ಳಲೇ ಇಲ್ಲ.ಗುರುಗಳು ನೇರವಾಗಿ ಅ ಹುಡುಗನ ಕಡೆ ಹೆಜ್ಜೆ ಹಾಕಿದವರೆ ಅವನಿಗೆ ಕಪಾಳಮೋಕ್ಷ ಮಾಡಿದರು.ಕಾರಣ ಗುರುಗಳು ತಾಳ್ಮೆ ಕಳೆದುಕೊಂಡಿದ್ದರು.ಮಕ್ಕಳಿಗೆ ಹೇಳಿದ್ದನ್ನು ತಾವು ಪಾಲಿಸುವುದರಲ್ಲಿ ಎಡವಿದ್ದರು.ಆದರೆ ಮಕ್ಕಳಿಗೆ ಮಾತ್ರ ಅವರ ಗೆಳೆಯನ ಊದಿದ ಮುಖ ನೋಡಿದಾಗ ತಾಳ್ಮೆಯ ಮಹತ್ವ ಅರಿವಾಗಿತ್ತು.
-@ಯೆಸ್ಕೆ
Comments
ಉ: ಒಂದು ಸರಳಕತೆ
ಅವರಲ್ಲಿ ತಾಳ್ಮೆ ಇದ್ದಿದ್ದರೆ ಆ ಹುಡುಗನಿಗೂ ಕೇಳುವ ಆಸಕ್ತಿ ಇರುತ್ತಿತ್ತೇನೋ!