ಒಂದೂವರೆ ಗಂಟೆಯಲ್ಲಿ ಪಾಕಿಸ್ತಾನದ ಜಂಘಾಬಲ ಉಡುಗಿಸಿದ ಭಾರತ

ಯುದ್ದಕ್ಕಿಂತ ಮೊದಲು ಪಾಕಿಸ್ತಾನದ ಮಿಲಿಟರಿ 'ಮುಖಂಡರು ಸಾಕಷ್ಟು ಬೊಗಳೆ ಬಿಟ್ಟಿದ್ದರು. ಅಗತ್ಯ ಬಿದ್ದರೆ ಭಾರತದ ಮೇಲೆ ಅಣ್ವಸ್ತ್ರ ದಾಳಿ ನಡೆಸುವುದಾಗಿಯೂ ನುಡಿದಿದ್ದರು. ಆದರೆ ಸಮರ ಆರಂಭವಾದ ಎರಡನೇ ದಿನಗಳಲ್ಲಿ ಪಾಕಿಸ್ತಾನವು ಕುನ್ನಿಯಂತೆ ಕುಂಯಿಗುಡುತ್ತಾ ಬಾಲ ಮಡಚಿಕೊಂಡು ಶರಣಾಯಿತು.
ಆರಂಭದಲ್ಲಿ ಹಮಾಸ್‌ನಿಂದ ಪ್ರೇರಣೆ ಪಡೆದು ನೂರಾರು ಡೋನ್‌ಗಳನ್ನು ಮತ್ತು ಸಣ್ಣ ಕ್ಷಿಪಣಿಗಳನ್ನು ಹಾರಿಬಿಟ್ಟ ಪಾಕಿಸ್ತಾನವು ಭಾರತವನ್ನು ಬೆದರಿಸಲು ಯತ್ನಿಸಿತು. ಆದರೆ ಅದರಲ್ಲೇನೂ ಯಶ ಕಾಣಲಿಲ್ಲ. ಅವನ್ನೆಲ್ಲ ಹೊಡೆದುರುಳಿಸಲು ಭಾರತದ ವಾಯುರಕ್ಷಣಾ ಕವಚ 'ಸುದರ್ಶನ ಚಕ್ರ'ವು ಸಫಲವಾಯಿತು. ಆದರೆ ಸಮರಕ್ಕೆ ದೊಡ್ಡ ತಿರುವು ದೊರಕಿದ್ದು ಪಾಕಿಸ್ತಾನವು ಭಾರತದ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿ ಪ್ರಯೋಗಿಸಿದ ಬಳಿಕ. ದಿಲ್ಲಿಯನ್ನು ಗುರಿಯಾಗಿಸಿ ಇದನ್ನು ಪ್ರಯೋಗಿಸಲಾಯಿತಾದರೂ ಅದನ್ನು ಕೂಡಾ ಭಾರತವು ಅರ್ಧದಾರಿಯಲ್ಲಿ ಹೊಡೆದುರುಳಿಸಲು ಸಫಲವಾಯಿತು. ಆ ಕೂಡಲೇ ಪ್ರಧಾನಿ ಮೋದಿಯವರು ಪಾಕಿಸ್ತಾನವನ್ನು ಪೂರ್ಣಶಕ್ತಿಯಿಂದ ಬಗ್ಗುಬಡಿಯಲು ಸೂಚನೆ ನೀಡಿದರು. ಅಲ್ಲಿಂದ ಬಳಿಕ ಭಾರತದ ಮೂರೂ ಪಡೆಗಳು ಪಾಕಿಸ್ತಾನದ ಮೇಲೆ ಯಾವ ಪರಿ ಎರಗಿದವೆಂದರೆ ಕೆಲವೇ ಗಂಟೆಗಳಲ್ಲಿ ಇಡೀ ಪಾಕಿಸ್ತಾನವೇ ನಡುಗುವಂತಾಯಿತು. ಭಾರತವು ಸೂಪರ್ ಸಾನಿಕ್ ವೇಗದ ಬ್ರಹ್ಮಸ್ ಕ್ಷಿಪಣಿಗಳನ್ನು ಪ್ರಯೋಗಿಸಿದ ಬಳಿಕವಂತೂ ಪಾಕಿಸ್ತಾನದ ಜಂಘಾಬಲವೇ ಉಡುಗಿತು. ಮುಖ್ಯವಾಗಿ ಪಾಕಿಸ್ತಾನದ ವಾಯುಪಡೆಯನ್ನು ನಿಸ್ಸತ್ವಗೊಳಿಸುವ ಉದ್ದೇಶದಿಂದ ಅದರ ವಾಯುನೆಲೆಗಳನ್ನ ದಾಳಿಗೆ ಗುರಿಯಾಗಿಸಲಾಯಿತು. ಇದರಿಂದಾಗಿ ಪಾಕಿಸ್ತಾನದ ಹಲವಾರು ವಾಯು ನೆಲೆಗಳು ಧ್ವಂಸಗೊಂಡವು. ಪಾಕಿಸ್ತಾನದ ಯುದ್ಧವಿಮಾನಗಳು ಮೇಲೇಳದಂತಹ ಪರಿಸ್ಥಿತಿ ನಿರ್ಮಾಣವಾಯಿತು. ಒಂದೂವರೆ ಗಂಟೆಯ ಅವಧಿಯಲ್ಲಿ ರಾವಲ್ಪಿಂಡಿಯ ನೂರ್‌ಖಾನ್ ವಾಯುನೆಲೆ, ಶೋರ್ಕಟ್ ರಫೀಕಿ ವಾಯುನೆಲೆ, ಸಿಂಥ್‌ನ ಸುಕ್ಕೂರ್ ವಾಯುನೆಲೆ, ಸಿಯಾಲ್‌ಕೋಟ್‌ನ ವಾಯುನೆಲೆ, ಪಂಜಾಬಿನ ಮುರಿಡ್ ವಾಯುನೆಲೆ, ಸರ್ಗೋದಾ ವಾಯುನೆಲೆ, ಸ್ಥರ್ದು ವಾಯುನೆಲೆ, ಕರಾಚಿಯ ಭೋಲಾರಿವಾಯುನೆಲೆ ಮುಂತಾದವೆಲ್ಲ ಬ್ರಹ್ಮಸ್ ದಾಳಿಗೆ ಸಿಲುಕಿ ಉಧ್ವಸ್ಥಗೊಂಡವು.
ಭಾರತದ ದಾಳಿಯು ಹಿಂದೆಂದಿಗಿಂತ ಹೆಚ್ಚು ಭೀಕರವಾಗಿತ್ತು. ಪಾಕಿಸ್ತಾನದ ಕ್ಷಿಪಣಿಗಳೆಲ್ಲ ಗುರಿ ತಲುಪಲು ವಿಫಲವಾದರೆ, ಭಾರತದ ಕ್ಷಿಪಣಿಗಳೆಲ್ಲವೂ ನಿಖರವಾಗಿ ಗುರಿಯನ್ನು ತಲುವುವಲ್ಲಿ ಸಫಲವಾದವು. ಒಂದೇ ಒಂದು ಕ್ಷಿಪಣಿಯನ್ನು ತಡೆಯುವುದೂ ಪಾಕಿಸ್ತಾನದಿಂದಾಗಲಿಲ್ಲ. ಭಾರತವು ತನ್ನ ದಾಳಿಗೆ ಆಯ್ದುಕೊಂಡ ಗುರಿಗಳು ಕೂಡಾ ಪಾಕಿಸ್ತಾನದ ಪಾಲಿಗೆ ಅತ್ಯಂತ ಮಹತ್ವದ್ದಾಗಿದ್ದವು. ಅವನ್ನು ರಕ್ಷಿಸಲು ಪಾಕಿಸ್ತಾನದಿಂದಾಗಲಿಲ್ಲ. ಇದುವೇ ಪಾಕಿಸ್ತಾನಕ್ಕೆ ಮತ್ತು ಜಗತ್ತಿನ ಕೆಲವು ದೇಶಗಳಿಗೆ ಆತಂಕ ಸೃಷ್ಟಿಸಿದ್ದು.
ನೂರಖಾನ್ ಮತ್ತು ರಫೀಕಿ ವಾಯುನೆಲೆಯ ಮೇಲೆ ನಡೆದ ದಾಳಿಗಳು ಪಾಕಿಸ್ತಾನಕ್ಕೆ ಭಾರೀ ದೊಡ್ಡ ಆತಂಕ ಸೃಷ್ಟಿಸಿತು. ನೂರ್ ಖಾನ್ ಪಾಕ್ ಸೇನೆಯ ಅತಿ ಮುಖ್ಯ ವಾಯುನೆಲೆ ಯುದ್ಧವಿಮಾನಗಳಿಗೆ ಇಂಧನ ತುಂಬುವ ಕೇಂದ್ರವೂ ಅದುವೆ ಇನ್ನೂ ಗಮನಾರ್ಹ ವಿಚಾರವೆಂದರೆ ಪಾಕಿಸ್ತಾನದ ಅಣ್ವಸ್ತ್ರಗಳ ರಕ್ಷಣೆಯ ಕುರಿತಂತೆ ಹೊಣೆಗಾರಿಕೆ ಹೊಂದಿರುವ ಸೇನಾ ಕಮಾಂಡಿನ ಮುಖ್ಯಕಚೇರಿಗೆ ತೀರಾ ಸಮೀಪವಾಗಿರುವ ತಾಣವದು. ಭಾರತವು ಅದನ್ನ ಗುರಿಯಾಗಿಸಿಕೊಂಡು ದಾಳಿ ನಡೆಸಿದರೆ, ಪಾಕಿಸ್ತಾನದ ಅಣ್ವಸ್ತ್ರ ಕಾರ್ಯಾಚರಣೆಯ ನಿಷ್ಕ್ರಿಯವಾಗುವ ಸಾಧ್ಯತೆಯಿದ್ದಿತು. ಇದುವೇ ಪಾಕಿಸ್ತಾನಕ್ಕೆ ಅತಿಯಾದ ಭೀತಿ ತಂದುದು ಪಾಕಿಸ್ತಾನದ ಅಣ್ವಸ್ತ್ರ ಸಂಗ್ರಹದ ನೆಲೆಯ ಕುರಿತಂತೆ, ಅದರ ಕಮಾಂಡ್ ಸೆಂಟರ್ ನ ಕುರಿತಂತೆ ತನಗೆ ಪೂರ್ಣ ಮಾಹಿತಿಯಿದೆ ಹಾಗೂ ಅಗತ್ಯ ಬಿದ್ದಲ್ಲಿ ಅದನ್ನು ನಾಶಪಡಿಸಬಲ್ಲೆ ಎಂಬ ಸಂದೇಶವನ್ನು ಭಾರತವು ಈ ದಾಳಿಯ ಮೂಲಕ ರವಾನಿಸಿತು. ನೂರ್ ಖಾನ್ ನೆಲೆಯು ಇಸ್ಲಾಮಾಬಾದ್‌ನಿಂದ ಕೇವಲ 10 ಕಿಮೀ.ನಷ್ಟು ದೂರವಿದೆ. ಭಾರತವು ಪಾಕಿಸ್ತಾನದ ರಾಜಧಾನಿಗೇ ಗುರಿಯಿಡಬಲ್ಲುದು ಎಂಬುದು ಕೂಡಾ ಇದರಿಂದ ಸಾಬೀತಾಯಿತು. ನೂರ್.ಖಾನ್ ನೆಲೆಯು ಹಾನಿಗೊಂಡುದರಿಂದ ಪಾಕಿಸ್ತಾನದ ಗಣ್ಯರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸುವ ಹಾದಿಯೂ ಮುಚ್ಚಿದಂತಾಯಿತು.
ಭಾರತದ ಈ ದಾಳಿಗೆ ಬೆದರಿ ಪಾಕ್‌ಸೇನಾ ಮುಖ್ಯಸ್ಥ ಮುನೀರ್ ಕೂಡಾ ಬಂಕರ್‌ನಲ್ಲಿ ಅಡಗಿ ಕೂರಬೇಕಾಯಿತು ಎಂದು ಪಾಕಿಸ್ತಾನಿ ಮೂಲಗಳು ಈಗ ತಿಳಿಸುತ್ತಿವೆ. ರಫೀಕಿ ಮಿಲಿಟರಿ ನೆಲೆಯು ಪಾಕ್ ನ ಮುಂಚೂಣಿ ಯುದ್ಧವಿಮಾನಗಳನ್ನು ಸಿದ್ಧವಾಗಿಟ್ಟಿದ್ದ ನೆಲೆಯಾಗಿದ್ದು, ಅದನ್ನು ಹಾಳುಗೆಡವಿದ್ದರಿಂದ ಅಲ್ಲಿಂದ ಯುದ್ಧವಿಮಾನಗಳು ಮೇಲೇರಲಾರದಂತಹ ಸ್ಥಿತಿ ನಿರ್ಮಾಣವಾಯಿತು.
ಸೃರ್ದು ನೆಲೆಯ ನಾಶದಿಂದಾಗಿ ವಾಕಿಸ್ತಾನದ ಉತ್ತರ ಭಾಗದ ರಕ್ಷಣೆ ನಿಷ್ಕ್ರಿಯವಾಗುವಂತಾಯಿತು. ಸುಕ್ಕೂರು ವಾಯುನೆಲೆ ಹಾನಿಗೀಡಾದುದರಿಂದ ದಕ್ಷಿಣ ಭಾಗದ ರಕ್ಷಣೆ ಅಸಾಧ್ಯವಾಯಿತು. ಭೋಲಾರಿ ನೆಲೆಯು ಪಾಕಿಸ್ತಾನದ ಭವಿಷ್ಯದ ಆಧುನಿಕ ವಾಯುನೆಲೆ ಎಂಬ ಹೆಸರು ಪಡೆದಿತ್ತು. ಅದು ಕೂಡಾ ದಾಳಿಗೆ ಸಿಲುಕಿ ನಾಶವಾಯಿತು. ಸರ್ಗೋದಾ ನೆಲೆಯು ವಿಶೇಷ ತುಕಡಿಗಳು, ಅಣ್ವಸ್ತ್ರ ಪೂರೈಕೆ ವೇದಿಕೆ ಹೊಂದಿದ್ದ, ವ್ಯೂಹಾತ್ಮಕ ಮಹತ್ವದ ನೆಲೆಯಾಗಿತ್ತು. ಭಾರತದ ದಾಳಿಯಿಂದ ಅದೂ ನಿಷ್ಕ್ರಿಯವಾಗುವಂತಾಯಿತು.
ಒಂದೂವರೆ ಗಂಟೆಗಳ ಅವಧಿಯಲ್ಲಿ ಭಾರವು ಪಾಕಿಸ್ತಾನದ 11 ವಾಯು ನೆಲೆಗಳನ್ನು ಧ್ವಂಸಗೊಳಿಸಿತ್ತು ಅವು ಕಾರ್ಯಾಚರಣೆಗೆ ಅಲಭ್ಯವಾಗುವಂತೆ ಮಾಡಿದ್ದವು. ಪಾಕಿಸ್ತಾನದ ದಾಳಿ ಸಾಮರ್ಥ್ಯವೇ ಅರ್ಧದಷ್ಟು ಕುಂಠಿತಗೊಂಡಿತು. ಪಾಕ್ ತನ್ನನ್ನು ಉಳಿಸುವಂತೆ ತನ್ನ ಸ್ನೇಹಿತ ರಾಷ್ಟ್ರಗಳಿಗೆ ಮನವಿ ಮಾಡುವಂತಾಂಯಿತು. ಇನ್ನೊಂದು ಗುಂಡು ಹಾರಿದರೂ ನಮ್ಮಿಂದ ಬೆಂಕಿಯ ಚೆಂಡು ಹಾರಲಿದೆ ಎಂಬ ಮೋದಿಯವರ ಎಚ್ಚರಿಕೆಯೊಂದಿಗೆ ಭಾರತವು ಕದನ ವಿರಾಮಕ್ಕೆ ಒಪ್ಪಿಕೊಂಡಿದೆ.
(ಕೃಪೆ: ಹೊಸ ದಿಗಂತ)
ಚಿತ್ರ ಕೃಪೆ: ಇಂಟರ್ನೆಟ್ ತಾಣ