ಒಂದೂ ಕಾಲು ಕೋಟಿ ಕೊರಳುಗಳ ಭಾರತ

ಒಂದೂ ಕಾಲು ಕೋಟಿ ಕೊರಳುಗಳ ಭಾರತ

ಕವನ

ಒಂದೂ ಕಾಲು ಕೋಟಿ ಕೊರಳುಗಳು ಒಂದೇ ಎಂದುಸುರಲಿ|

ವಿವಿಧತೆಯಲ್ಲಿ ಏಕತೆ ಹಾಡಿ ಭಾರತವೆದ್ದು ನಿಲ್ಲಲಿ|

ಹಿಂಸೆ ಬದಿಗಿಟ್ಟು ದೇಶವನು ಕಟ್ಟು ತೋಷ ಭಾವದಲ್ಲಿ|

ಒಡಕು ಬಿರುಕುಗಳ ಕಡೆಗಣಿಸುತ ನಡೆ ಎದೆಯ ಬೆಸುಗೆಯಲ್ಲಿ|

 

ಸಕಲ ಜನಾಂಗಕೆ ಹಿತವೆನೆ ಬಯಸುತ ಕೂಡಿ ಹೆಜ್ಜೆಯಿಡುವ|

ವಿಕಲ ಮನಸುಗಳ ಉಲ್ಲಾಸಕೆಳೆತನದಲಿ ಮುನ್ನಡೆಯುವ|

ಕೊಳಕು ಹುಳುಕುಗಳ ರಾಜಕೀಯದ ಹುಲುಸುಗಳನು ಕಳೆಯುವ|

ಲೋಕ ನಿಬ್ಬೆರಗು ನೋಟವಿಡುವಂತೆ ಸರ್ವ ಸಮತೆ ತರುವ|

 

ವಿದ್ಯೆ ಬುದ್ಧಿಮತ್ತೆ ಸಮಾಜ ತಿದ್ದುವಂತೆ ಅಣಿಗೊಳಿಸುವ|

ಬಹುಜನಕೆ ಹಿತವು ಸರ್ವ ಜನ ಸುಖವು ಸೇರುವಿಕೆ ಬಯಸುವ|

ಬಹಳ ಭಾಷೆಗಳು ಬಹು ಸಂಸ್ಕ್ರುತಿಯೊಳು ನಾಡೊಳಿತುಗೊಳಿಸುವ|

ಭೇದ ಬೆಳೆ ಕಳೆದು ಕೀಳು ಕಿತ್ತೆಸೆದು ಅಯ್ಕ್ಯ ಬೆಳೆಯ ತೆಗೆವ|

 

- ಪೇರೂರು ಜಾರು

ಚಿತ್ರ ಕೃಪೆ:ಇಂಟರ್ನೆಟ್ ತಾಣ

ಚಿತ್ರ್