ಒಂದೆಲಗದ ತಂಬ್ಳಿ

ಒಂದೆಲಗದ ತಂಬ್ಳಿ

ಬೇಕಿರುವ ಸಾಮಗ್ರಿ

ಒಂದೆಲಗ 1/2 ಕಪ್‌ ಕತ್ತರಿಸಿದ್ದು , ಕಾಳು ಮೆಣಸು 5-6, ಜೀರಿಗೆ 1 ಚಮಚ, ಕಾಯಿತುರಿ 1ಕಪ್‌, ಉಪ್ಪು , ಬೆಲ್ಲ , ಮಜ್ಜಿಗೆ 1 ಕಪ್‌, ಎಣ್ಣೆ
ಒಣಮೆಣಸು, ಸಾಸಿವೆ ಕಾಳು .

ತಯಾರಿಸುವ ವಿಧಾನ

ಕಾಳು ಮೆಣಸು ಮತ್ತು ಜೀರಿಗೆಯನ್ನು ಹುರಿದಿಡಿ, ಮಿಕ್ಸಿಗೆ ಕಾಯಿತುರಿ, ಹುರಿದಿಟ್ಟ ಕಾಳು ಮೆಣಸು ಮತ್ತು ಜೀರಿಗೆ ಹಾಕಿ ನುಣ್ಣಗೆ ರುಬ್ಬಿ, ಒಂದೆಲಗವನ್ನು ಬೇರೆಯಾಗಿಯೇ ರುಬ್ಬಿ ಸೋಸಿ ಇಟ್ಟುಕೊಳ್ಳಿ. ನಂತರ ಒಂದು ಪಾತ್ರೆಯಲ್ಲಿ ರುಬ್ಬಿದ ಕಾಯಿತುರಿ ಮಿಶ್ರಣ, ಸೋಸಿದ ಒಂದೆಲಗದ ರಸ, ಮಜ್ಜಿಗೆ, ಉಪ್ಪು, ಮತ್ತು ಬೆಲ್ಲವನ್ನು ಹಾಕಿ ಚೆನ್ನಾಗಿ ಕಲಸಿ. ನಂತರ ಎಣ್ಣೆ, ಸಾಸಿವೆ ಮತ್ತು ಒಣಮೆಣಸಿನ ಒಗ್ಗರಣೆ ಕೊಡಿ. ತಂಬುಳಿ ರೆಡಿ.