ಒಂದೆಲಗ (ಬ್ರಾಹ್ಮಿ)

ಒಂದೆಲಗ (ಬ್ರಾಹ್ಮಿ)

ಬರಹ

ಬ್ರಾಹ್ಮೀತೈಲ (ರಾಮತೀರ್ಥ ಬ್ರಾಹ್ಮೀತೈಲ) ಹೆಸರು ಕೇಳದವರು ಇರಲಿಕ್ಕಿಲ್ಲ.
ತಲೆಗೆ, ಮೆದುಳಿಗೆ, ಕಣ್ಣಿಗೆ ತಂಪು. Cool, cool.

ಈ ಎಣ್ಣೆ ತಲೆಗೆ ಹಚ್ಚಿ ತಿಕ್ಕಿ ಮಲಗಿದರೆ- ಫಸ್ಟ್ ಕ್ಲಾಸ್ ನಿದ್ರೆ ಬರುವುದು.
ತಲೆಗೆ ಹಚ್ಚಿದಾಗಲೇ ಇಷ್ಟು ಕೆಲಸ ಮಾಡುವ ಈ ‘ಬ್ರಾಹ್ಮಿ’ಯ ಬಗ್ಗೆ ಕೆಲ ವಿವರ-

ಗದ್ದೆ ಬದಿಯಲ್ಲಿ,ನೀರಿರುವ, ತಂಪಾದ ಸ್ಥಳದಲ್ಲಿ, ಚಟ್ಟಿಯಲ್ಲೂ ಆರಾಮ, ಖರ್ಚಿಲ್ಲದೇ ಬೆಳೆಯುವ ಬಳ್ಳಿ ಇದು. ಗಿಡದ ದಂಟಿನಿಂದ ಒಂದೊಂದೇ ಎಲೆ ಬರುವುದರಿಂದ ‘ಒಂದೆಲಗ’ ಎಂಬ ಹೆಸರು.

ಇಂಗ್ಲೀಷ್ : Asiatic Pennywort, Gotu kola..
ಬಾಟನಿಕಲ್ ಹೆಸರು : Centella asiatica,
Bacopa monniera. ..
ಮಂಡೂಕ ಪರ್ಣಿ ಎಂಬೊಂದು ಭೇದವಿದೆ. ಗುಣಗಳೆಲ್ಲಾ ಸಮಾನವೇ.

ಮೆದುಳಿಗೆ ಸಂಬಂಧಿಸಿದ ತೊಂದರೆಗಳು-ನಿದ್ರೆ ಬರದಿರುವುದು,ಹಿಸ್ಟೀರಿಯಾ, ಎಪಿಲೆಪ್ಸಿಗಳಲ್ಲಿ; ಹೆಂಗಸರ ಮುಟ್ಟಿಗೆ ಸಂಬಂಧಿಸಿದ ತಾಪತ್ರಯಗಳಿಗೆ, ಮೂತ್ರದ ಕಾಯಿಲೆಗಳು,ಚರ್ಮರೋಗಗಳು,ಭೇದಿ..ಎಲ್ಲಾ..ಎಲ್ಲಾದಕ್ಕೂ..ಉಪಯೋಗಿಸುವರು. ಅದಕ್ಕೇ ಹಿಂದಿನವರು ಇದಕ್ಕೆ ಸಂಜೀವನಿ ಎನ್ನುತ್ತಿದ್ದರು.

ಬುದ್ಧಿವಂತಿಕೆ ಜಾಸ್ತಿಯಾಗಲೂ ಇದು ನಂಬರ್ ಒನ್ ಔಷಧಿ. ದ.ಕನ್ನಡ,ಉಡುಪಿ ಕಡೆಯವರು ಪಿ.ಯು.ಸಿ.ಯಲ್ಲಿ (ಟ್ಯೂಷನ್ ಇಲ್ಲದೇ) ಅತ್ಯಧಿಕ ಪರ್ಸೆಂಟ್‌ನಲ್ಲಿ ತೇರ್ಗಡೆಯಾಗುವುದಕ್ಕೂ, ಅಲ್ಲಿ ಮನೆಗಳಲ್ಲಿ ಆಗಾಗ ‘ತಿಮರೆ ಚಟ್ನಿ’ ತಿನ್ನುವುದಕ್ಕೂ
ಸಂಬಂಧವಿದೆ. (ಒಂದೆಲಗಕ್ಕೆ ತುಳುವಲ್ಲಿ ತಿಮರೆ ಎನ್ನುವರು).

ನೀವೂ ಸಹ, ನಿಮ್ಮ ಮಕ್ಕಳು ನಿಜಕ್ಕೂ ಬುದ್ಧಿವಂತರಾಗಬೇಕಾದರೆ, ಈಗಲೇ ಒಂದೆಲಗವನ್ನು ತಂದು ಚಟ್ಟಿಗಳಲ್ಲಿ ಬೆಳಸಿ, ಚಿತ್ರಾನ್ನ,ಪುಳಿಯೋಗರೆಗೆ ರೆಸ್ಟ್ ಕೊಟ್ಟು, ವಾರಕ್ಕೊಂದೆರಡು ಸಲವಾದರೂ ಚಟ್ನಿ ಮಾಡಿ ತಿನ್ನಿಸಿ.

ಈಗ ಮಾರ್ಕೆಟ್‌ನಲ್ಲಿ ಸಿಗುವ ಎಲ್ಲಾ ಬುದ್ಧಿವಂತಿಕೆ ಜಾಸ್ತಿ ಮಾಡುವ ಔಷಧಿಗಳಲ್ಲಿ
ಬ್ರಾಹ್ಮೀ ಇದ್ದೇ ಇರುವುದು. ಉಪಯೋಗಿಸುವ ಮೊದಲು ನಿಮ್ಮ ಮನೆ ವೈದ್ಯರ ಸಲಹೆ ಕೇಳಿ.

A popular folklore tale from Sri Lanka speaks of a prominent king from the 10th century AD named Aruna who claimed that Gotu Kola provided him with energy and stamina to satisfy his 50-woman harem.(wikipedia)

-ಗಣೇಶ.