ಒಡಲ ಉರಿ

ಒಡಲ ಉರಿ

ಕವನ

ಅಕ್ಕ ಅಣ್ಣ ಬೇಗ ಬನ್ನಿರಿಲ್ಲಿ

ಇಹುದು ವಿಧ ವಿಧ ಹಣತೆಯು

ನನ್ನ ಬದುಕಿಗೆ ರಂಗು ನೀಡಲು

ಬಣ್ಣ ಕೊಳ್ಳಿರಿ ಇಲ್ಲಿಯೇ

 

ಬೆಳಕ ಹಬ್ಬವ ಸಂಭ್ರಮಿಸಲು

ವಿವಿಧ ವಸ್ತುವು ಇಲ್ಲಿದೆ

ಪಡೆದುಕೊಂಡರೆ ನೀವಿದೆಲ್ಲವ

ಮನದಿ ಹರುಷ ನನಗಿದೆ

 

ಒಡಲ ಉರಿಯನು ತಣಿಸಲೆಂದೆ

ಸಹಿಸುತಿರುವೆ ಬಿಸಿಲ ಧಗೆಯನು

ಬೆವರು ಇಳಿದರೆ ಒರೆಸಬಲ್ಲೆನು

ಮಡದಿ ಮಕ್ಕಳ ಕಣ್ಣೀರನು

 

ಪರರ ಹಂಗಿಗೆ ಇರದು ಎಡೆಯು

ಸ್ವಂತ ದುಡಿಮೆಯು ಇರಲದು

ಕಷ್ಟನಷ್ಟದೊಳಗಿದ್ದರೂನು ಬಾಳು

ಖುಷಿ ನೆಮ್ಮದಿಗೆ ಬರ ಕಾಣದು

-ಸೌಮ್ಯ ಆರ್ ಶೆಟ್ಟಿ, ಮಂಜೇಶ್ವರ 

ಚಿತ್ರ್