ಒಪ್ಪಲೇನಿದೆ?
ಕವನ
ನಾನು ಒಪ್ಪಲೇನಿದೆ
ಈ ಭೂಮಿಯ ?
ನಾ ಬುವಿಗೆ ಬಂದಾಗಲೇ
ಈನ ನೆಲ ನನ್ನ
ಬಿಗಿದಪ್ಪಿ ಮುದ್ದಿಸಿದೆ
ಹರಸಿ ಸಲಹಿದೆ
ಜೀವನದ ದಾರಿಯ ತೋರಿಸಿ
ತಾನು ಮರೆಯಲ್ಲಿ ನಿಂತಿದೆ !
ನನ್ನ ತಪ್ಪುಗಳ ಹೇಳುತ್ತಾ
ಒಪ್ಪ ದಾರಿಯಲ್ಲಿ ನಡೆಸಿದೆ
ಬೆಪ್ಪನಂತ್ತಿದ್ದ ನನಗೆ
ಮರುಜನುಮ ನೀಡಿದೆ
ಕನಸುಗಳ ಕಳಕೊಂಡ ನನಗೆ
ಮತ್ತೆ ಕನಸಿನ ಜೊತೆಗೆ
ನನಸುಗಳ ಕೊಟ್ಟಿದೆ !
ಎಡರು ತೊಡರುಗಳ ಎಡೆಯೆ
ಸರಿ ದಾರಿಯನು ತೋರಿಸಿದೆ
ಹಿಂಸೆಯ ದಾರಿಯ ತುಳಿದವಗೆ
ಅಹಿಂಸೆಯ ಮಾರ್ಗವ ಅರುಹಿದೆ
ಕಷ್ಟವ ಅರಿತು ಬಾಳುವುದರ
ಮನದಾಳಕೆ ಕಲಿಸಿದೆ
ಅದರಂತೆ ನಡೆಸಿದೆ
ಬಾಳಲಿ ನೆಮ್ಮದಿಯ
ಕೊಟ್ಟಿದೆ !
ಈ ಬುವಿಯೆ ಸ್ವರ್ಗವಾಗಿಹುದೆನಗೆ
ಎಲ್ಲವನ್ನೂ ಕಲಿತು ಬೆಳೆದವನು
ಸತ್ಯತೆಯ ನಡುವೆ ನಡೆದವನು
ಸ್ನೇಹತ್ವದ ನಡುವೆ ಬಾಳಿದವನು
ಹೀಗೆಯೇ ಇರಲಿ ಜೀವನ ಸಂಭ್ರಮವು
ಬಾಳ ಪಲ್ಲವಿಯೊಳು ಸರ್ವಭವತತ್ವವು !
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್