ಒಬ್ಬಂಟಿ ನಾ..
ಕವನ
ಆಳವಾದ ಸಾಗರದಡಿಗೆ ಸಿಲುಕಿದೆ ಜೀವನ
ನಿಂತು ನೋಡುತ್ತಾ ನಗುತಿರುವರು ನನ್ನ ಜನ
ಬಿಸಿರಕ್ತಕೆ ಕಾಯುತಿದೆ ಅಲ್ಲೊಂದು ಮನ
ತುಸು ಸಮಯ ಮಾತ್ರ ಇರುವುದೆನ್ನ ಪ್ರಾಣ..
ಎದೆಯೊಳಗೆ ನಿಲ್ಲದ ದುಗುಡ - ದುಮ್ಮಾನ
ತುಂಬಿದ ನೀರ ಉಕ್ಕಿಸಲು ಕಣ್ಣೀರ ಸತತ ಪ್ರಯತ್ನ
ಏನೂ ಅರಿಯದ ಜೀವವೂ ನಕ್ಕಿತು ನೋಡಿ ನನ್ನ
ನನ್ನವರೇ ನನ್ನಿಂದ ದೂರವಾದಾಗ ಒಬ್ಬಂಟಿ ನಾ..
ಇನ್ನೇನೂ ಬೇಡವಾಗಿದೆ ಈ ಜೀವಕೆ
ಪ್ರಾಣಪಕ್ಷಿಯ ಹಾರಿಬಿಡಲು ಆದರೇಕೋ ಹೆದರಿಕೆ
ಬಿಗಿಯಾದ ಬಂಧನವಿತ್ತು ನನ್ನ ಮೌನಕ್ಕೆ
ಯೋಚನೆಗಳ ಸುಳಿಯಲ್ಲಿ
ಭಾವನೆಯ ಬೆಸುಗೆಯಲ್ಲಿ,
ಪುಳಕವಿತ್ತ ಪ್ರಾಣ ಹೆಣವಾಗಿ ತೇಲುತ್ತಿತ್ತು,
ಸಾಗರದಲೆಯ ಮೇಲಕ್ಕೆ..
-ಭಾರತಿ ಗೌಡ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
