ಒಬ್ಬ ಕಳ್ಳನ ಕತೆ -ನೋಬಲ್ ಪ್ರಶಸ್ತಿ ವಿಜೇತ ಐಸಾಕ್ ಬಾಲ್ಶೆವಿಕ್ ಸಿಂಗರ್ ಬರೆದದ್ದು

ಒಬ್ಬ ಕಳ್ಳನ ಕತೆ -ನೋಬಲ್ ಪ್ರಶಸ್ತಿ ವಿಜೇತ ಐಸಾಕ್ ಬಾಲ್ಶೆವಿಕ್ ಸಿಂಗರ್ ಬರೆದದ್ದು

ಬರಹ

ಒಂದು ಊರು . ಊರಿನ ಬಹುತೇಕ ಜನ ಹತ್ತಿರದ ಚರ್ಮ ಹದ ಮಾಡುವ ಕಾರಖಾನೆಯಲ್ಲಿ ಕೆಲಸ ಮಾಡುತ್ತಿದ್ದರು . ಕಡಿಮೆ ಸಂಬಳ . ಅನಾರೋಗ್ಯಕರ ವಾತಾವರಣ. ಬೆಳಿಗ್ಗೆ ಎದ್ದ ಕೂಡಲೇ ಟಿಪಿ಼ನ್ ಕ್ಯಾರಿಯರ್ ತೆಗೆದುಕೊಂಡು ಹೋಗಿ ದಿನವೆಲ್ಲಾ ಕಷ್ಟಪಟ್ಟು ದುಡಿಯುತ್ತಿದ್ದರು .
ಆ ಊರಿನಲ್ಲಿ ಒಬ್ಬ ಕಳ್ಳನಿದ್ದ . ಆದರೆ ಆತ ನಿಯತ್ತಿನ ಮನುಷ್ಯ. ತನ್ನ ಊರಿನಲ್ಲಿ ಕಳ್ಳತನ ಮಾಡುತ್ತಿರಲಿಲ್ಲ . ಪರ‌ಊರುಗಳಲ್ಲಿ ಕಳ್ಳತನ ಮಾಡಿಕೊಂಡಿದ್ದ . ಇತರರಿಗೆ ತಾನೊಬ್ಬ ಸೇಲ್ಸ್ ಮನ್ ಎಂದು ಹೇಳಿದ್ದ . ವರ್‍ಷಕ್ಕೊಮ್ಮೆ ತನ್ನ ಊರಿನ ಜನರಿಗೆ ಗಿಫ಼್ಟ್ ಎಂದು ಚಿಕ್ಕ ಪುಟ್ಟ ಸಾಮಾನುಗಳನ್ನು ಹಂಚುತ್ತಿದ್ದ . ತಾನು ಕಳ್ಳತನ ಮಾಡಿದರೂ ಪರವಾಗಿಲ್ಲ , ಮನೆಯವರಿಗೆ ಒಳ್ಳೇಯ ಹಾಗೂ ಪ್ರಾಮಾಣಿಕ ಜೀವನ ನಡೆಸಲು ಅನುಕೂಲ ಮಾಡಿದ್ದೇನೆಂದು ಅವನ ವಿಚಾರ.
ಹೀಗಿರುವಾಗ ಒಂದು ಸಲ ಹೆಂಡತಿಯ ಹೆರಳಲ್ಲಿ ಒಂದು ಜಡೆಬಿಲ್ಲೆಯನ್ನು ನೋಡುತ್ತಾನೆ. ತಾನು ಕೊಟ್ಟಿದ್ದಲ್ಲ , ಕೊಡಿಸಿದ್ದಲ್ಲ, ಅದನ್ನು ಬೇರೆಲ್ಲಿಯೋ ನೋಡಿದ ನೆನಪು. ಅವಳನ್ನು ಕೇಳಿದರೆ ಸಮರ್ಪಕ ಉತ್ತರ ಸಿಗಲಿಲ್ಲ.
ರಾತ್ರಿಯೆಲ್ಲಾ ನಿದ್ದೆ ಬಾರದೆ ಹೊರಳಾಡಿದ , ಆ ಆಭರಣವನ್ನು ಊರಿನ ಗೌಡತಿಯ ಜಡೆಯಲ್ಲಿ ನೋಡಿದ ನೆನಪಾಯಿತು . ಒಂದು ಮನೆಯಲ್ಲಿ ಇಬ್ಬರು ಕಳ್ಳರು ಇರಲಾಗದು ಎಂಬ ತೀರ್ಮಾನಕ್ಕೆ ಬಂದು ಬೆಳಗಾಗುವದನ್ನೇ ಕಾದು ಹೆಂಡತಿಗೆ ಹೇಳಿದ - "ನನಗೂ ಟಿಪಿ಼ನ್ ಕ್ಯಾರಿಯರ್ ಕಟ್ಟಿ ಕೊಡು. ಕಾರ್ಖಾನೆಗೆ ದುಡಿಯಲು ಹೋಗುತ್ತಿದ್ದೇನೆ."

- ಇದು ಐಸಾಕ್ ಬಾಲ್ಶೆವಿಕ್ ಸಿಂಗರ್ ನ ಒಂದು ಕಥೆ.