ಒಬ್ಬ ನಕ್ಸಲನ ಕತೆ
ಒಬ್ಬ ನಕ್ಸಲನ ಕಥೆ
ಅವರಿಗೆ ಇಬ್ಬರು ಗಂಡು ಮಕ್ಕಳು.ಸಾವಿನ ಬಾಗಿಲಲ್ಲಿ ನಿಂತಿದ್ದ ಅವರು,ತಾನು ಸಂಪಾದಿಸಿದ ಎಲ್ಲಾ ಆಸ್ತಿಯನ್ನು ಹಿರಿಮಗನ ಹೆಸರಿಗೆ ಬರೆದು ಕಣ್ಣುಮುಚ್ಚಿಕೊಂಡರು.ಕಿರಿಮಗ ಕೂತು ತಿನ್ನಬೇಕು ಅನ್ನೋ ಮನಸ್ಥಿತಿಯವನಾಗಿದ್ದೆ ಅವರ ಈ ನಿರ್ಧಾರಕ್ಕೆ ಕಾರಣವಾಗಿತ್ತು.ಆದರೆ ಅವರ ಈ ನಿರ್ಧಾರ ಅಣ್ಣತಮ್ಮಂದಿರನ್ನು ದಾಯಾದಿಗಳನ್ನಾಗಿ ಮಾಡಿತು.ತನಗೆ ಅನುಭವಿಸಲು ಸಿಗದ್ದು ತನ್ನ ಅಣ್ಣನಿಗೂ ಸಿಗಬಾರದೆಂದು ಮನಸ್ಸಿನಲ್ಲಿ ಅಂದುಕೊಂಡ ತಮ್ಮ.ಆಗ ಅವನಿಗೆ ಕಂಡಿದ್ದೆ ನಕ್ಸಲ್ ಮಾರ್ಗ.ಮಲೆನಾಡಿನವನಾಗಿದ್ದರಿಂದ ನಕ್ಸಲರ ಗುಂಪೊಂದನ್ನು ಹುಡುಕಿ ಅದನ್ನು ಸೇರಿಕೊಳ್ಳುವುದು ಅವನಿಗೆ ಕಷ್ಟವಾಗಲಿಲ್ಲ.ಗುಂಪಿನ ಒಳಹೊಕ್ಕವನಿಗೆ ಅಲ್ಲಿನ ಐಷಾರಾಮಿ ಜೀವನ ಸ್ವರ್ಗವನ್ನೇ ಕಣ್ಣಮುಂದೆ ತಂದಿರಿಸಿತ್ತು.ಹಣ,ಮನರಂಜನೆ,ಆಯುಧ ಇದ್ಯಾವುದಕ್ಕು ಅಲ್ಲಿ ಬರವಿರಲಿಲ್ಲ.ಡ್ಯ್ರಾಗನ್ ದೇಶದಿಂದ, ಕೆಂಪು ಪಕ್ಷದಿಂದ,ಪ್ರಗತಿಪರ ಸಂಘಟನೆಗಳಿಂದ ತಾವು ಮಾಡುವ ಕುಕೃತ್ಯಕ್ಕೆ ಸಾಕಷ್ಟು ಬೆಂಬಲ ಸಿಗುತಿತ್ತು.ಅಲ್ಲದೆ ದೇಶದಲ್ಲಿ ಆಂತರಿಕ ಅಸ್ಥಿರತೆ ಉಂಟುಮಾಡಿ ಅ ಮೂಲಕ ತಮ್ಮ ರಾಜಕೀಯ ಬೇಳೆಬೇಯಿಸುವ ಕೆಲ ರಾಜಕಾರಣಿಗಳು ಇವರ ಬೆನ್ನಿಗಿದ್ದರು.ತನ್ನ ನಕ್ಸಲ್ ಗುಂಪಿನ ನಾಯಕನಲ್ಲಿ,'ನನ್ನ ಅಣ್ಣ ನನಗೆ ದ್ರೋಹ ಮಾಡಿ ತಾನು ಮಾತ್ರ ಶ್ರೀಮಂತಿಕೆ ಅನುಭವಿಸುತ್ತಿದ್ದಾನೆ.ಅಂತವನ ಮೇಲೆ ಸೇಡು ತೀರಿಸಿಕೊಳ್ಳಬೇಕು'ಎಂದಾಗ ಅ ನಾಯಕನ ಕ್ರಾಂತಿಯ ಕಿಡಿ ಹೊತ್ತಿ ಉರಿಯತೊಡಗಿತು.ಒಂದುರಾತ್ರಿ ಅವನ ಸಹಾಯದೊಂದಿಗೆ ಅಣ್ಣನ ಮನೆ ಮೇಲೆ ದಾಳಿ ಮಾಡಿದ.ಮನೆಯಲ್ಲಿದ್ದ ತನ್ನ ಅಣ್ಣ ಅತ್ತಿಗೆ ಮತ್ತು ಅವರ ಇಬ್ಬರು ಮಕ್ಕಳನ್ನು ಬರ್ಬರವಾಗಿ ಹತ್ಯೆ ಮಾಡಿ ಮನೆಯಲ್ಲಿದ್ದ ನಗ ನಾಣ್ಯವನ್ನು ದೋಚಿಕೊಂಡ.ಸರಕಾರದ ಕಣ್ಣಿಗಿದು ನಕ್ಸಲ್ ದಾಳಿಯಾಗಿ ಕಂಡಿತು.ಆದರೆ ವಾಸ್ತವದಲ್ಲಿ ಇದು ವೈಯಕ್ತಿಕ ದ್ವೇಷದಿಂದ ನಡೆದ ದಾಳಿಯಾಗಿತ್ತು.ಮುಂದೆ ಇಂತಹ ಹಲವು ದಾಳಿಗಳನ್ನು ಸಂಘಟಿಸಿ ಅನೇಕ ಜನರ ರಕ್ತ ಚೆಲ್ಲುತ್ತಾನೆ.ಹೀಗೆ ಹಲವು ವರ್ಷ ಕಳೆದ.ಈಗ ಅವನ ದೇಹದಲ್ಲಿ ಮೊದಲ ಚೈತನ್ಯ ಉಳಿದಿರಲಿಲ್ಲ.ಚರ್ಮ ಸುಕ್ಕುಗಟ್ಟಲು ಆರಂಭವಾಗಿತ್ತು.ಜೊತೆಗೆ ಕಾಡಿನ ಜೀವನವು ಅವನಿಗೆ ಬೇಸರ ತರಿಸಿತ್ತು.ಹೇಗಾದರು ಇದರಿಂದ ಹೊರಬರಬೇಕೆಂದು ಹಪಹಪಿಸಿದ.ಕಾಡಿನ ಹೊರಗಿದ್ದ ನಕ್ಸಲ್ ಮನಸ್ಥಿತಿಯವರು ಇಂತಹ ಒಂದು ಅವಕಾಶಕ್ಕಾಗಿ ಕಾಯುತ್ತಿದ್ದರು.ಅವನಿಗೆ ಆಹ್ವಾನ ಕೊಟ್ಟರು.ಜಾಮೀನು ಕೊಡಿಸುವ,ಅಗತ್ಯಬಿದ್ದರೆ ಮುಂದೆ ಉದ್ಯೋಗದಲ್ಲಿ ನಕ್ಸಲರಿಗಾಗಿಯೇ ಮೀಸಲಾತಿ ಕೋಟ ಕಲ್ಪಿಸಿ ಕೊಡುವ ಭರವಸೆಯನ್ನೂ ನೀಡಿದರು.ಅವನ ಪುಣ್ಯಕ್ಕೆ ರಾಜ್ಯದಲ್ಲಿ ಪ್ರಗತಿಪರರ ಪುಂಗಿಗೆ ತಲೆದೂಗುವ ಸರಕಾರ ಆಗ ಅಸ್ತಿತ್ವದಲ್ಲಿತ್ತು.ಮಾಧ್ಯಮವು ಕೂಡ ಇವನನ್ನು ಹೀರೊವನ್ನಾಗಿ ಬಿಂಬಿಸಲು ಸಕಲ ಸಿದ್ಧತೆ ಮಾಡಿಕೊಂಡಿತ್ತು.ಒಂದು ಕುಟುಂಬವನ್ನು ಹತ್ಯೆ ಮಾಡಿದಕ್ಕೆ ಖೈದಿಯಾಗಿ ಕಂಬಿ ಹಿಂದೆ ಇರಬೇಕದವನನ್ನು ಸರಕಾರ ರಾಜ ಮರ್ಯಾದೆಯಿಂದ ನಡೆಸಿಕೊಂಡಿತ್ತು.ಪಿಕ್ ಪಾಕೆಟ್ ಮಾಡಿ ಜೈಲು ಶಿಕ್ಷೆ ಅನುಭವಿಸುತಿದ್ದ ಖೈದಿಗಳು ಸಾಮೂಹಿಕ ಕೊಲೆಗಾರನಿಗೆ ಸಿಕ್ಕ 'ಅತಿಥಿ ಭಾಗ್ಯ'ವನ್ನು ನೆನೆದು ಕೈ ಕೈ ಹಿಸುಕಿಕೊಂಡರು.
-@ಯೆಸ್ಕೆ
Comments
ಉ: ಒಬ್ಬ ನಕ್ಸಲನ ಕತೆ
:(