ಒಮ್ಮೆ ಕವಿಯಂನ್ಸ್ಕಂಡ್ರೆ
ಕವನ
ಒಮ್ಮೆ ಕವಿಯಂನ್ಸ್ಕಂಡ್ರೆ ಮುಂದೈತೆ ಕಷ್ಟ ಕಣ್ರಿ
ಕೊಳ್ಳೆ ಹೊಡದ್ರು ಅಂದ್ರೂ ಒಳ್ಳೆ ಕವನ ಅಂತ
ಬೆನ್ನು ತಟ್ತಾರಲ್ರಿ ಅಯ್ಯೋ ಅನ್ನೋ ಬದ್ಲು
ಮೋಸ, ನೋವು ಅಂದ್ರೆ ಒಳ್ಳೆ ಕಲ್ಪನೆಯಂತ
ಒದ್ದಾಡ್ದೆ ಅಂದ್ರೂನೂ ವಾರೆವ್ಹಾ ಅಂತಾರಲ್ರಿ
ಕಳುಸಿದ್ಲು ಒಂದುದಿನ ಅವಳೊಳ್ಳೆ ಮೆಸೇಜು
ಪ್ರೀತಿ ಪ್ರೇಮಾನೆ ತುಂಬಿತ್ತು ಆ ಪೇಜು
ಆಮೇಲೆ ಗೊತ್ತಾಯ್ತು ಅವಳೊಳ್ಳೆ ಕವಯಿತ್ರಿ
ಗೊತ್ತಿಲ್ದೇ ಹೋಗಿದ್ರೆ ಆಗೋದ ಊಹಿಸ್ಕೋರಿ
ನಿನ್ನೇ ಪ್ರೀತಿಸ್ತೇನೆ ಅಂತ ನಾ ಬರ್ದಾಕಿ
ಅರ್ಧ ಗಂಟೆ ಆದ್ರೂ ಉತ್ರಾನೆ ಬರ್ಲಿಲ್ಲ
ಎದೆಯೆಲ್ಲಾ ಢವಢವ, ಏನಾಯ್ತೋ ಅವಘಡ
ಭಾರಿ ಚಲೋ ಐತಂತ ಎಲ್ಲೆಲ್ಲೋ ಫಾರ್ವರ್ಡು
ಆಗಿ ತಿರುಗಿ ಅದು ಮತ್ತೆ ನಂಗೇ ಬಂತೂರಿ..
ನನ್ಪ್ರೀತಿ ಈ ರೀತಿ ಪಾಪ್ಕಾರ್ನು ಆಗೋಯ್ತು ರೀ..
Comments
ಉ: ಒಮ್ಮೆ ಕವಿಯಂನ್ಸ್ಕಂಡ್ರೆ
In reply to ಉ: ಒಮ್ಮೆ ಕವಿಯಂನ್ಸ್ಕಂಡ್ರೆ by makara
ಉ: ಒಮ್ಮೆ ಕವಿಯಂನ್ಸ್ಕಂಡ್ರೆ
In reply to ಉ: ಒಮ್ಮೆ ಕವಿಯಂನ್ಸ್ಕಂಡ್ರೆ by makara
ಉ: ಒಮ್ಮೆ ಕವಿಯಂನ್ಸ್ಕಂಡ್ರೆ
ಉ: ಒಮ್ಮೆ ಕವಿಯಂನ್ಸ್ಕಂಡ್ರೆ
In reply to ಉ: ಒಮ್ಮೆ ಕವಿಯಂನ್ಸ್ಕಂಡ್ರೆ by makara
ಉ: ಒಮ್ಮೆ ಕವಿಯಂನ್ಸ್ಕಂಡ್ರೆ