ಒಮ್ಮೆ ನಕ್ಕು ಬಿಡಿ !

ಒಮ್ಮೆ ನಕ್ಕು ಬಿಡಿ !

ಕೆಸರಿನಲ್ಲಿ ಮಲಗಿದ ಎಮ್ಮೆ 

ಸೀರಿಯಲ್ ನೋಡಲು ಕುಳಿತ ಹೆಣ್ಣು 

ಯಾವತ್ತೂ ಬೇಗ ಎದ್ದು ಬರುವುದಿಲ್ಲ...

***

ಗ್ಯಾರೇಜಿಗೆ ಹೋಗಿ ಬಂದ ಬೈಕು...

ತವರಿಗೆ ಹೋಗಿ ಬಂದ ವೈಫು...

ಒಂದೆರಡು ದಿನ ಆದ ಮೇಲೇನೇ ದಾರಿಗೆ ಬರೋದು!

***

ಮಹಿಳೆಯರಿಗೆ ಕಪಾಟು ತೆರೆದರೆ ಎರಡೇ ಚಿಂತೆ...

​ತೊಡುವುದಕ್ಕೆ ಬಟ್ಟೆ ಇಲ್ಲ​

ಇಡುವುದಕ್ಕೆ ಜಾಗವಿಲ್ಲ...

***

ಹೆಲ್ಮೆಟ್ ಮತ್ತು ಹೆಂಡತಿ ಇಬ್ಬರ ಸ್ವಭಾವ ಒಂದೇ...

ತಲೆ ಮೇಲೆ ಇಟ್ಟುಕೊಂಡ್ರೆ ನೀವು ಸೇಫ್ ಆಗಿರ್ತೀರಿ

***

ಅಪ್ಪ : ಯಾಕೋ ಶಾಲೆಗೆ ಹೋಗಿಲ್ಲ?​

ಪುಟ್ಟ : ನಿನ್ನೆ ನಮ್ಮನ್ನೆಲ್ಲಾ ತೂಕ ಮಾಡಿದ್ದಾರೆ... ಇವತ್ತು ಮಾರಿ ಬಿಡ್ತಾರೇನೋ ಅಂತ ಹೋಗಿಲ್ಲ!

***

ಹೆಂಡತಿ: ಈ ಮನೇಲಿ ನಾನ್ ಇರಬೇಕು, ಇಲ್ಲ ನಿಮ್ಮ ಅಮ್ಮ ಇರಬೇಕು...

ಗಂಡ: ಇಬ್ರೂ ಬೇಕಾಗಿಲ್ಲ!! ಕೆಲಸದವಳು ಒಬ್ಬಳಿದ್ರೆ ಸಾಕು...

***

ಅಪಘಾತ ವಲಯದ ಸೂಚನಾಫಲಕದ ಹೊಸ ಸಾಲು:

ಎಚ್ಚರಿಕೆ:-

ನಿಧಾನವಾಗಿ ಹೋಗದಿದ್ದಲ್ಲಿ

​ನಿಧನ​ವಾಗಿ ಹೋಗುವಿರಿ!

***

ಜಗತ್ತಲ್ಲಿ ಹುಡುಗರ ಬಗ್ಗೆ ಇರೋ ದೊಡ್ಡ ತಪ್ಪು ತಿಳುವಳಿಕೆ:

"ಮದುವೆ ಆದ್ಮೇಲೆ ಹುಡುಗ ಸರಿಹೋಗ್ತಾನೆ"....!!!

***

ಅತಿಥಿ: ಬಾಗಿಲವರೆಗೂ ಬಂದು ಬೀಳ್ಕೊಡುತ್ತಿದ್ದೀರಿ... ತುಂಬಾ ಸಂತೋಷ...

ಮನೆ ಒಡತಿ:  ಹಾಗೇನಿಲ್ರಿ... ನಿನ್ನೆ ತಾನೇ ಹೊಸ ಚಪ್ಪಲಿ ತಗೊಂಡೆ... ಈಗಿನ ಕಾಲದಲ್ಲಿ ಯಾರನ್ನೂ ನಂಬಲಿಕ್ಕೆ ಬರಲ್ಲ ನೋಡಿ...

***

ಲೇಡೀಸ್ ಹಾಸ್ಟೆಲ್ ಗೆ ಬೆಂಕಿ ಹತ್ತಿಕೊಂಡಿತು‌. ಪಕ್ಕದ ಹಾಸ್ಟಲಿನ ಹುಡುಗರು ಮುಗಿಬಿದ್ದರು. ಆಗ ದೂರದರ್ಶನದಲ್ಲಿ ಬಂದ ಬ್ರೇಕಿಂಗ್ ನ್ಯೂಸ್ - "ಹಾಸ್ಟಲ್ ಗೆ ಹತ್ತಿದ್ದ ಬೆಂಕಿಯನ್ನು ಹತೋಟಿಗೆ ತರಲಾಗಿದೆ. ಆದರೆ ಹುಡುಗರನ್ನು ಹತೋಟಿಗೆ ತರುವುದು ಕಷ್ಟವಾಗಿದೆ"

***

ಮದುವೆ ಮನೆಯಲ್ಲಿ ಚಪ್ಪಲಿ ಕಳೆದುಕೊಂಡವನ ಕವಿತೆ:

ಒಂದು ಜೋಡಿ ಸೇರುವುದನ್ನು ನೋಡಲು ಬಂದು 

ಇನ್ನೊಂದು ಜೋಡಿಯನ್ನ ಕಳೆದುಕೊಂಡೆ...

***

ಸೋಮ : ನಿಂಗೆ ಎಷ್ಟು ಮಕ್ಳು? 

ಗುಂಡ : 12, ಪುನಃ ಗರ್ಭಿಣಿ... 

ಸೋಮ : ಅಷ್ಟೊಂದು ಮಕ್ಳ? 

ಗುಂಡ : ಹೆಂಡ್ತಿನ ಯಾವತ್ತೂ ಖಾಲಿ ಹೊಟ್ಟೇಲಿ ಇಡಲ್ಲ ಅಂತ ಮಾವಂಗೆ ಮಾತು ಕೊಟ್ಟಿದ್ದೆ...

***

ಮಗ: ಅಮ್ಮಾ ನನಗೆ ಈ ಅಂಗಡಿಯಿಂದ ಪಟಾಕಿ ಕೊಡ್ಸು...

ಅಮ್ಮ: ಅಯ್ಯೋ ಕರ್ಮ... ಅದು ಪಟಾಕಿ ಅಂಗಡಿ ಅಲ್ವೋ... ಅದು ladies hostel

ಮಗ: ಮತ್ತೆ ಅಪ್ಪ ನೆನ್ನೆ ಅವರ ಫ್ರೆಂಡ್ ಹತ್ರ ಹೇಳ್ತಿದ್ದರು ಇಲ್ಲಿ ಮಸ್ತ್ ಪಟಾಕಿಗಳಿವೆ ಅಂತ...

***

ಹೆಂಡತಿ (ಸಿಟ್ಟಿನಿಂದ) : ನಿಮ್ಮನ್ನು ಮದುವೆ ಆಗೋ ಬದಲು ನಾನು ಒಬ್ಬ ರಾಕ್ಷಸನ್ನ ಮದುವೆ ಆಗಿದ್ರೂ ಎಷ್ಟೋ ಸುಖವಾಗಿರ್ತಿದ್ದೆ...

ಗಂಡ : ಹಾಗೆಲ್ಲ ರಕ್ತಸಂಬಂಧದಲ್ಲಿ ಮದುವೆ ಆಗಬಾರದು ಕಣೇ ಒಳ್ಳೇದಲ್ಲ! 

***

(ಸಂಗ್ರಹ) - ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ