ಒಮ್ಮೆ ನೀನು ನಕ್ಕರೆ

ಒಮ್ಮೆ ನೀನು ನಕ್ಕರೆ

ಕವನ

ನಿನ್ನ ಮುನಿಸು ಕಣ್ಣ ಹೊಳಪು
ಎರಡು ಸೇರಿ ನಕ್ಕರೆ
ಬಿ೦ಕ ಬಿಟ್ಟು ಹಮ್ಮು ತೊರೆದು
ಒ೦ದು ಮಾತು ನುಡಿದರೆ

ಗಾಳಿ ನೀನು ಬೆ೦ಕಿ ನಾನು
ಮಳೆಗೆ ಅ೦ಜಿ ಕುಳಿತರೆ
ಕೊಳ್ಳಿಯೊಳಗೆ ಅಡಗಿ
ಸುಡುವ ಗುಣವ ಮರೆತರೆ

ಸಾಗಬೆಕು ಜೊತೆಗೆ ಜೊತೆಗೆ
ನೀನೆ ಗೈರು ಆದರೆ
ಯಾರ ಬಳಿಯು ಹೇಳಲಿನ್ನು
ನೀನೆ ದೂರ ಹೋದರೆ