ಒಮ್ಮೊಮ್ಮೆ ...
ಕವನ
ಒಮ್ಮೊಮ್ಮೆ ಒಮ್ಮೆಗೆ ಒಮ್ಮೆಲೆ
ಇಳಿದು ಬಿಟ್ಟವರಂತೆ
ಹರಡರಡಿ ಕುಳಿತಿರುತ್ತೇನೆ
ಕರುಣೆಯಿಲ್ಲದ ಕಟುಕನೆಂದಂತೆ
ದಾರಿಯ ಕಾಯುತ್ತಿದ್ದೇನೆ
ಹೂವಿನ ಮಾಲೆಯ ಧರಿಸಿದ ಕುರಿಯಂತೆ
ಗೊತ್ತಿಲ್ಲದ್ದನ್ನು ಕಲಿತ ತಪ್ಪಿಗೋ ಏನೋ
ಈಗಲೂ ಹಿಂದಿನ ಬೇಂಚಿನಲ್ಲಿಯೇ ಕುಳಿತ್ತಿದ್ದೇನೆ
ಕಲಿಯದ ಮಸ್ತಕಗಳಿಂದಲೇ ಕಲಿಯಲು ಮುಂದಾಗಿದ್ದೇನೆ
ವಿಚಿತ್ರ ಆದರೂ ಸತ್ಯ ! ಯಾಕೆಂದರೆ ?
ಕಲಿಯುಗದಲ್ಲಿದ್ದೇನೆ
ನಾಲ್ಕು ಅಕ್ಷರ ಕಲಿತ ಕೂಡಲೇ ಬೆಂದ ಕಾಳುಗಳು ನಾವೆ
ಎನ್ನುವವರ ಜೊತೆಗೆ ಏಗಲಾಗದಿದ್ದರೂ ಸುಮ್ಮನಾಗಿದ್ದೇನೆ
ಉಪ್ಪರಿಗೆಯಲ್ಲಿ ಕುಳಿತು ಆದೇಶ ಕೊಡುವವರ ನಡುವೆ ನಾನಿದ್ದೇನೆ
ಬರಹಗಳು ನೋಡಿದ ಕೂಡಲೇ ಬರಬೇಕು ಎನ್ನವರ ಜೊತೆಗೆ ಹತ್ತಿರದಲ್ಲೇ ಇದ್ದು ಕಲಿತು ಬರಲೆನ್ನುವವರು ನಾವೆ
ಒಬ್ಬಂಟಿಯಾಗಿದ್ದೇ ಸಾಧನೆ ಮಾಡುವಯೆಂದರೆ
ನೆಲವೆ ಬಾಯಿ ತೆರೆದು ಕುಳಿತಿದೆ !
-ಹಾ ಮ ಸತೀಶ
ಚಿತ್ರ್