ಒಲವಾಗಿದೆ...

ಒಲವಾಗಿದೆ...

ಮಂಜಿನ ಹನಿಯೊಳಗೂ ನಿನ್ನ ಚೆಲುವು

ಮಂಜರಿಯೊಳಗಾವರಿಸೇ ನಿನ್ನ ಚೆಲುವು

ಮಂಜುಳಕಲರವದೊಳಗೇ ಇಳಿದೂ

ವಂಚಿಸದಿರು ಮರೆಯಾಗಿ ಬಳಿದೂ....

 

ಜಾರುತಿರುವ ಹನಿಗಳ ಬಿಗಿದಪ್ಪಿ

ಕರಗುತಿರುಗುತಿರುವೆ ಕ್ಷಣಕೂ ನಾ ತಪ್ಪಿ

ಬರವಿಡಿದಿದೆ ನನ್ನದೆಯೊಳಗೆ

ಬರಕನೀಡು ಚೂರು ನಿನ್ನೆದೆಯೊಳಗೆ.....

 

ನುಸುಳಿರುವೆ  ನೆನಪೊಳಗೇ ನೀನು

ನೀಸುವೆಯಾ ನಿನ್ನೊಳಗೆ ತುಸು ನನ್ನ  

ಬಸುಗುತಿದೆ ಪ್ರೀತಿ ತುಸು ಮೆಲ್ಲಗೆ

ಬಸಿಯದಿರು ನನ್ನ ಸಾವೊಳಗೆ....

 

ಬಳಿಸಾರಿ ಗಾಳಿಯಲಿ ಉಸಿರಿರುವೆ ಪ್ರೀತಿ

ಇಳೆಗಾತು ಮಲಗಿರುವೆ ನೀಡದೆ ಸಮ್ಮತಿ

ಸುಳಿದೆಗೆಯಿಸು ಮನದೊಲವ

ಹಳಿಯದೇ ಪ್ರಿಯೆ ನನ್ನೊಲವ....

 

-ಸಿ.ಎನ್.ಭಾಗ್ಯಲಕ್ಷ್ಮಿ ನಾರಾಯಣ

ಚಿತ್ರ ಕೃಪೆ: ಇಂಟರ್ನೆಟ್ ತಾಣ