ಒಲವಿಂದ ಹರಸು

ಒಲವಿಂದ ಹರಸು

ಕವನ

ಕರೆಸುತಲಿ ಪಕ್ಕದಲೆ ಕೂರಿಸುತ ಹರಸಿಂದು

ತಲೆಯೆತ್ತಿ ನಡೆವಂತೆ ಮಾಡುನೀ ಕೇಶವನೆ

ಎಲ್ಲವನು ಮನಸ್ಸಿಂದ ಗುಡಿಸುತಲೆ ಒಗೆಯುವೆನೆ 

ಕನಸಿನಲು ನಿನ್ನನ್ನು ಕಾಣುತಲೆ ಮಲಗುವೆನೆ

 

ಬೆಳಕಾಗಿ ಜಗವೆಲ್ಲ ಕತ್ತಲೆಯ ಸರಿಸಿರಲು

ತಮದೊಳಗು ಬೆಳಕಸುರಿ ಕೃಷ್ಣಯ್ಯ ನೀನೆಂದು 

ಜಪತಪವ ಗೈಯುತಿಹೆ ನಿಷ್ಠೆಯಲಿ ನಾನೆಂದು

ಇನ್ನೇನು ಬೇಕಿಹುದೊ ಹೇಳುವಿಯೊ ಕುಲದೊಡೆಯ

 

ಕಣ್ ಬಿಡುತ ನನ್ನಡೆಗೆ ಓಡುತಲಿ ಬಾಯಿಂದು

ಸೋತಿಹೆನು ಬುವಿಯೊಳಗೆ ಸಿಗಲಿಲ್ಲ ನೆಮ್ಮದಿಯು

ಕರುಣೆಯೊಳು ಸಾಗರನೆ ಜಗದಗಲ ಚೇತನವೆ

ಹರಸುತಲಿ ಕೈಹಿಡಿದು ಮುನ್ನಡೆಸಿ ಸಲಹಿಂದು

***

ಗಝಲ್

ಹರಿಯಲಿಲ್ಲ ಬದುಕು ಹೀಗೆಯೇ ಯಾವತ್ತೂ ಗೆಳತಿ

ಹೊಳೆಯಲಿಲ್ಲ ಬದುಕು ಹೀಗೆಯೇ ಯಾವತ್ತೂ ಗೆಳತಿ

 

ನಡೆಯಲಿಲ್ಲ ಬದುಕು ಹೀಗೆಯೇ ಯಾವತ್ತೂ ಗೆಳತಿ

ತಿಳಿಯಲಿಲ್ಲ ಬದುಕು ಹೀಗೆಯೇ ಯಾವತ್ತೂ ಗೆಳತಿ

 

ಅರಿಯಲಿಲ್ಲ ಬದುಕು ಹೀಗೆಯೇ ಯಾವತ್ತೂ ಗೆಳತಿ

ಮೆರೆಯಲಿಲ್ಲ ಬದುಕು ಹೀಗೆಯೇ ಯಾವತ್ತೂ ಗೆಳತಿ

 

ಜರೆಯಲಿಲ್ಲ ಬದುಕು ಹೀಗೆಯೇ ಯಾವತ್ತೂ ಗೆಳತಿ

ನಟಿಸಲಿಲ್ಲ ಬದುಕು ಹೀಗೆಯೇ ಯಾವತ್ತೂ ಗೆಳತಿ

 

ಸವಿಯಲಿಲ್ಲ ಬದುಕು ಹೀಗೆಯೇ ಯಾವತ್ತೂ ಗೆಳತಿ

ಮರೆಯಲಿಲ್ಲ ಬದುಕು ಹೀಗೆಯೇ ಯಾವತ್ತೂ ಗೆಳತಿ

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್