ಒಲವಿನ ಚೆಲುವೆ

ಒಲವಿನ ಚೆಲುವೆ

ಕವನ

ಬೆಳಗಿನ ಹೊಂಗಿರಣದಲಿ 

ಚೆಲುವೆಯ ಮುಖವರಳಿ

ಮುಗಿಲಿಗೆ ಚಿಮ್ಮಿತು ಮುಗುಳುನಗೆ 

 

ಮುಂಜಾನೆ ಮಂಜಿನಲಿ

ಚೆಲುವೆ ತೇಲಿ ತೇಲಿ ತೇಲಿ 

ಮೈಯೆಲ್ಲ ಮಿಂದಿದೆ ಚೆಲುವು

 

ಚೆಲುವೆ ಮಂದಹಾಸ 

ನನ್ನ ಎದೆಯನು ತಾಗಿ

ಹೃದಯದಲಿ ಚಿಮ್ಮಿದೆ ಪ್ರೀತಿ 

 

ಚೆಲುವೆಯ ಕಿರುನಗೆಯು 

ನನ್ನ ತನುವಲಿ ತೇಲಿ ತೇಲಿ 

ಮನವೆಲ್ಲ ಮಿಂದಿತು ಒಲವು 

 

ಚೆಲುವೆಯ ಬಿಸಿ ಅಪ್ಪುಗೆ

ಅರಳಿತು ಹೂ ಮೈದುಂಬಿ

ತಂದಿತು ಪುಳಕ ನಗೆ ಚೆಲ್ಲಿ

 

ಚೆಲುವೆಯ ಕಂಗಳಲಿ ಆಸೆ

ತುಂಬಿ ಎದೆಯಲಿ ಮೂಡಿ

ಬಂತು ಪ್ರೀತಿ ಪ್ರೇಮದ ಹೊಳೆ 

 

ಇಬ್ಬನಿ ಹನಿ ಹನಿಯು 

ಚೆಲುವೆ ಕೆನ್ನೆ ಮೇಲೆ

ಇಟ್ಟಿದೆ ನವಿರಾದ ಮುತ್ತು

 

ಚೆಲುವೆ ಕೆಂದುಟಿ ರಂಗು

ನನ್ನ ಕೆನ್ನೆಯ ಮೇಲೆ

ಕೊಟ್ಟಿದೆ ರಂಗಾದ ಮುತ್ತು

 

ಮುಂಜಾನೆ  ಬೆಳಕಿನಲಿ 

ಗುನಿಗಿದಳು ಚೆಲುವೆ 

ಇಂಪಾದ ಪ್ರೇಮ ಗಾನವ

 

ಬಾಳಿನಲಿ ಜೊತೆಯಾದ ಚೆಲುವೆ 

ಬಂದು ಸರಿಗಮಪ ಹಾಡು

ಹಾಡಿದಳು ಸಿರಿ ಕಂಠದಿಂದ

 

-ಬಂದ್ರಳ್ಳಿ ಚಂದ್ರು, ತುಮಕೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್