ಒಲವಿನ ರಕ್ತ ಚರಿತ್ರೆ..!

ಒಲವಿನ ರಕ್ತ ಚರಿತ್ರೆ..!

ಸೈರಾಟ್ ಪ್ರೇಮ ಕಥೆ !ಹದಿಹರೆಯದ ಒಲವಿನ ರಕ್ತ ಚರಿತ್ರೆ.ಮರಾಠಿ ಚಿತ್ರರಂಗದ ಸಂಚಲನ.4 ಕೋಟಿ ಚಿತ್ರಕ್ಕೆ 100 ಕೋಟಿ ಗಳಿಕೆ.ಮರಾಠಿ ಚಿತ್ರರಂಗದ ದೊಟ್ಟಮಟ್ಟ ಚಿತ್ರ.ಕಮರ್ಷಿಲಿ ದೊಡ್ಡ ಹಿಟ್ ಆದ ಪ್ರಥಮ ಚಿತ್ರ.ಹಾಲಿವುಡ್ ಸ್ಟುಡಿಯೋದಲ್ಲಿ ಸಾಂಗ್ ರೆಕಾರ್ಡ್. ಝೀಂಗಾಟ್ ಸಾಂಗ್ ಎಲ್ಲರ ಫೇವರಿಟ್​.ದಕ್ಷಿಣದ ಭಾಷೆಯಲ್ಲೂ ಸೈರಾಟ್ ರಿಮೇಕ್.ರಾಕ್​ ಲೈನ್ ತಂದಿದ್ದಾರೆ ರಿಮೇಕ್ ಹಕ್ಕು .        ನಾಗರಾಜ್ ಮಂಜುಳೆ ಸೈರಾಟ್ ಡೈರೆಕ್ಟರ್​
-----
ಸೈರಾಟ್. ಹುಚ್ಚು. ಪ್ರೇಮದ ಹುಚ್ಚು.ಪ್ರೇಕ್ಷಕರಿಗೂ ಹಿಡಿಸಿದೆ ಆ ಹುಚ್ಚನ್ನ. ಪ್ರೀತಿ-ಪ್ರೇಮದ ಈ ಹುಚ್ಚು ಗಳಿಕೆಯಲ್ಲೂ 100 ಕೋಟಿ ದಾಟಿದೆ. ಮರಾಠಿ ಚಿತ್ರರಂಗದಲ್ಲಿಯೇ ಇಷ್ಟು ದೊಡ್ಡ ಮಟ್ಟದಲ್ಲಿ ಕಮರ್ಷಿಲಿ ಹಿಟ್ ಆದ ಮೊದಲ ಸಿನಿಮಾ ಇದಾಗಿದೆ. ಹಾಕಿದ್ದು 4 ಕೋಟಿ.ಗಳಿಸಿದ್ದು 100 ಕೋಟಿ. ಆದರೆ, ಹುಚ್ಚು ಇನ್ನು ಬಿಟ್ಟು  ಹೋಗಿಲ್ಲ.ಬನ್ನಿ ನೊಡೋಣ.

ಒಂದು ಪ್ರೇಮ ಕಥೆ !
ನೈಜತೆನೇ ಚಿತ್ರದ ಜೀವಾಳ
ಸಂಗೀತ ಹಿಡಿಸುತ್ತೆ ಹುಚ್ಚು
ಹಾಲಿವುಡ್​ ಸ್ಟುಡಿಯೋದಲ್ಲಿ ಸಾಂಗ್ ರೆಕಾರ್ಡ್​
4ಕೋಟಿ ಸಿನಿಮ ಗೆದ್ದಿದ್ದು 100 ಕೋಟಿ

---
ಸೈರಾಟ್. ಭಾರತೀಯ ಚಿತ್ರರಂಗದ ಹೊಸ ಸಂಚಲನ. ಮರಾಠಿ ಚಿತ್ರರಂಗಕ್ಕೂ ಹೊಸ ದಿಕ್ಕನ್ನೆ ತೋರಿಸಿದೆ. ಕಮರ್ಷಿಲಿ ಇಲ್ಲಿವರೆಗೂ ಮರಾಠಿ ಚಿತ್ರಗಳು ಇಷ್ಟು ಮಟ್ಟಿಗೆ ಯಶಸ್ಸು ಕಂಡಿರಲಿಲ್ಲ. ಆದರೆ, ಸೈರಾಟ ಆ ಹಾದಿ ತೋರಿದೆ. ಮರಾಠಿ ಚಿತ್ರಗಳು ಇಷ್ಟು ಹುಚ್ಚು ಹಿಡಿಸಬಲ್ಲುದು  ಅನ್ನೋದುನ್ನ ಈಗ ಸೈರಾಟ್ ಸಾಬೀತು ಮಾಡಿದೆ.

ಸೈರಾಟ್ ಅಂದ್ರೆ ಏನೂ. ಇಂಗ್ಲೀಷ್ ನಲ್ಲಿ wild  ಅನ್ನೋ ಅರ್ಥ ಬರುತ್ತದೆ. ಅದನ್ನ ಕನ್ನಡಕ್ಕೆ ತಂದ್ರೆ, ಅದು ಕಾಡು,ವನ್ಯ,ಮರಳು ಗಾಡು. ಹೀಗೆ ಹಲವು  ಅರ್ಥ ಕೊಡುತ್ತದೆ. ಇಲ್ಲಿ ಕಾಡು ಆಗೋದಿಲ್ಲ. ಅದು ಪ್ರೀತಿಯ ಹುಚ್ಚು ಅಂತಲೇ ಅರ್ಥೈಸಿಕೊಳ್ಳಬೇಕು. ಅದು ಈ ಸೈರಾಟ್ ಮೀನಿಂಗ್..

ಸೈರಾಟ್ ಬಜೆಟ್ ನಾಲ್ಕು ಕೋಟಿ!
ಗಳಿಸಿದ್ದು 100 ಕೋಟಿ ಗೂ ಹೆಚ್ಚು
450 ಥಿಯೇಟರ್ ನಲ್ಲಿ ಚಿತ್ರ ರಿಲೀಸ್
ಹೊರ ರಾಜ್ಯ-ವಿದೇಶ ಸೇರಿ  200
ಥಿಯೇಟರ್​ನಲ್ಲಿ ಚಿತ್ರ ರಿಲೀಸ್

---
ಸೈರಾಟ್​ ಚಿತ್ರದಲ್ಲಿ ಏನಿದೆ. ಜನ ಹುಚ್ಚೆದ್ದು ನೊಡೋಕೆ. ಮರಾಠಿ ಚಿತ್ರಗಳು ಎಂದೂ ಇಷ್ಟೊಂದು ಅಬ್ಬರ ಮಾಡಿರಲಿಲ್ಲ. ಇಲ್ಲಿವರೆಗೂ. ಸೈರಾಟ್ ಚಿತ್ರ ಅದನ್ನ ಮಾಡಿದೆ. ಏನದರ ಗುಟ್ಟು.
ನೈಜವಾಗಿವೆ ಪಾತ್ರಗಳ ಪೋಷಣೆ!
ಮಹಾರಾಷ್ಟ್ರದ ಹಳ್ಳಿಗೆ ಹೋದ ಅನುಭವ
ಪಾತ್ರ ಆಡೋ ಮಾತು ತೀರಾ ನೈಜ
ಕ್ಯಾಮೆರಾ ವರ್ಕ್ ನೈಜತೆ ಕಟ್ಟಿಕೊಡ್ತದೆ
ಚಿತ್ರದ ಸಂಗೀತ ಹುಚ್ಚು ಹಿಡಿಸುತ್ತದೆ

-----
ಚಿತ್ರ ಪಾತ್ರಗಳು ನಮ್ಮನ್ನ ಸೆಳೆದು ಬಿಡುತ್ತವೆ. ನಮ್ಮವೇ ಅನ್ನೋ ಭಾವ ಕಂಡಿತ ಮೂಡುತ್ತವೆ. ಪ್ರೇಮಿಗಳ ಪಾತ್ರ ಮಾಡಿರೊ ನಟಿ ರಿಂಕು ರಾಜಗುರು ಗಮನ ಸೆಳೆಯುತ್ತಾರೆ. ರಿಂಕು ಇನ್ನೂ ಚಿಕ್ಕ ಹುಡುಗಿ. ಚಿತ್ರಕ್ಕೆ ಆಡಿಷನ್ ನಡೆದಾಗ 7ನೇ ತರಗತಿ ವಿದ್ಯಾರ್ಥಿ. ಚಿತ್ರೀಕರಣ ಆರಂಭವಾದಾಗ 8 ನೇ ತರಗತಿ. ಈಗ 10 ನೇ ತರಗತಿಗೆ ಕಾಲಿಟ್ಟಿದ್ದಾಳೆ.ಚಿಕ್ಕ ಹುಡುಗಿ ಈಗ ದೊಡ್ಡ ಸೆಲೆಬ್ರೆಟಿ.

ರಿಂಕು  ಪಾತ್ರ ಪ್ರಮುಖ ಆರ್ಷಣೆ
ಬುಲೆಟ್​-ಟ್ರ್ಯಾಕ್ಟ್ ರ್ ಚಾಲನೆ ಖದರ್
ಪಿಸ್ತೂಲ್ ಚಲಾಯಿಸೋ ಗಟ್ಟಿಗತ್ತಿ

----
ರಿಂಕು ರಾಜಗುರು ಪಾತ್ರದ ಹೆಸರು ಅರ್ಚನಾ ಪಾಟೀಲ್. ಜೊತೆಗಾರ ಆಕಾಶ್ ನಿರ್ವಹಿಸಿರೋ ಪಾತ್ರದ ಹೆಸರು ಪ್ರಶಾಂತ್ ಕಾಳೆ. ಎರಡೂ ಪಾತ್ರಗಳ ಪ್ರೇಮ ಕಥೆ ಇಡೀ ಚಿತ್ರ. ಜೊತೆಗೆ ಇನ್ನೋ ಒಂದಷ್ಟು ಪಾತ್ರಗಳು ಬರುತ್ತವೆ. ಅದರಲ್ಲಿ ತಾನಾಜಿ ನಿರ್ವಹಿಸಿರೋ ಪಾತ್ರ ಗಮನ ಸೆಳೆಯುತ್ತದೆ. ನಿರ್ದೇಶಕ ನಾಗರಾಜ್ ಮಂಜುಳೆ ತಮ್ಮ ಈ ಪ್ರಯತ್ನದಿಂದ ಎಲ್ಲೆಡೆ ಹೆಸರಾಗಿದ್ದಾರೆ. ಸಂಗೀತ ನಿರ್ದೇಶಕರಾದ ಅಜಯ್ -ಅತುಲ್ ಎಲ್ಲರ ಮನಸಲ್ಲೂ ಮತ್ತೆ..ಮತ್ತೆ ಜಾಗ ಮಾಡಿಕೊಂಡಿದ್ದಾರೆ.

ಮರಾಠಿ ಇಂಡಸ್ಟ್ರೀಯತ್ತ ಎಲ್ಲರೂ ತಿರುಗಿ ನೋಡುವಂತೆ  ಮಾಡಿದೆ ಸೈರಾಟ್.ಇದು ಸೈರಾಟ್ ಚಿತ್ರದ ಹೆಗ್ಗಳಿಕೆ ಮತ್ತು ಹೊಸ ಅಲೆ. ದಕ್ಷಿಣದಲ್ಲೂ ಚಿತ್ರ ರಿಮೇಕ್ ಆಗುತ್ತಿದೆ. ರಾಕ್​ ಲೈನ್ ವೆಂಕಟೇಶ್ ರಿಮೇಕ್ ಹಕ್ಕು ಪಡೆದಿದ್ದಾರೆ. ತೆಲುಗು ಅಲ್ಲದೇ ಕನ್ನಡದಲ್ಲೂ ಸೈರಾಟ್ ರಿಮೇಕ್ ಆಗುತ್ತಿದೆ. ವೇಟ್ ಮಾಡಿ.

-ರೇವನ್ ಪಿ.ಜೇವೂರ್​