ಒಲವು
ಬರಹ
ತುಟಿ ಮೇಲೆ ನಗೆಯ ಬಿಂದು
ಕಣ್ಣಿನಲ್ಲಿ ಹೊಳಪ ಕಂಡು
ಮೂಡಿ ಮನದಿ ಪ್ರೀತಿ ಸಿಂಧು
ಮನವ ಬಿಚ್ಚಿ ಹಾಡಿದೆ ಅಂದು
'ಅನಿಸುತಿದೆ ಯಾಕೋ ಇಂದು… ನೀನೇನೆ ನನ್ನವಳೆಂದು'
ನನ್ನಲಿಯ ಪ್ರೀತಿ ಭಾವನೆ
ಹೇಳದೆ ಕುಳಿತೆ ಸುಮ್ಮನೆ
ಹಾಡಿಯೂ ಮೂಕನಾದೇನೆ?
ತೇಲಿ ಬಂತು ಕವಿಯ ಕಲ್ಪನೆ
'ಮಾಯವಾಗಿದೆ ಮನಸು… ಹಾಗೆ ಸುಮ್ಮನೆ '
ಕೊರಗುತಿಹೆ ಯಾಕೆ ಮನವೆ
ಇದು ಕೂಡ ಪ್ರೀತಿ ಅಲ್ಲವೇ
ನಿನ್ನ ಜೊತೆ ನಾ ಹಾಡುವೆ
ನಾನು ಕೂಡ ಉತ್ತರ ಅರಿಯೆ
'ಒಂಟಿತನದ ಗುರುವೇ… ಒಲವೆ?'