ಒಲವೇ.♥️

Submitted by GVK SHEKAR on Tue, 04/14/2020 - 20:49

ನಿನಗಾಗಿ ತಂಗಾಳಿಯ ಹಿಡಿದು ತರುವೆ ಎಂದು ಹೇಳುವ ಪ್ರೇಮಿ ನಾನಲ್ಲ.

ತಂಪೂ ಬಿಸಿಯೋ ನೀಡುವೆ ನಿನಗೆ ನನ್ನ ಉಸಿರೆಲ್ಲ.

ನಿನಗಾಗಿ ಆಕಾಶದಿಂದ ಮಳೆ ತರಿಸುವ ಶಕ್ತಿ ನನಗಿಲ್ಲ..

ಆದರೆ ನಿನ್ನ ಕಣ್ಣಿನಿಂದ ಒಂದು ಹನಿ ಕೂಡ ಜಾರಲು ನಾ ಬಿಡುವುದಿಲ್ಲ.

ನಿನಗಾಗಿ ಚಂದಿರನ ಹಿಡಿದು ತರುವೆ ಎಂದು ಸುಳ್ಳು ಭರವಸೆ ನಾ ನೀಡುವುದಿಲ್ಲ..

ಮಗುವಿನಂತಿರುವ ನಿನ್ನ ನವಿರಾದ ಹೃದಯಕ್ಕೆ ನಾ ಎಂದಿಗೂ ಮೋಸ ಮಾಡುವದಿಲ್ಲ..

 

    ಇಂತಿ

 

 

(ಜಿ.ವಿ.ಕೆ)   ಶೇಖರ . ಎಸ್.ಎಸ್ .ಎಲ್.ಸಿ