ಒಲವೇ ಮಂದಾರ _ ಒಂದು ಸುಂದರ ಕಾವ್ಯ
ಗೆಳೆಯನ ಒತ್ತಾಯದ ಮೇರೆಗೆ ನಿನ್ನೆ ಒಲವೇ ಮಂದಾರ ಚಲನಚಿತ್ರ ನೋಡಲು ಹೋಗಿದ್ದೆ . ಬಹಳ ದಿನಗಳ ನಂತರ ಒಂದು ಒಳ್ಳೆಯ ಸಿನಿಮಾ ನೋಡಿದ ಅನುಭವಾಹಿತು . ರಂಗಭೂಮಿಯಲ್ಲಿ ಪಳಗಿದ ಜಯತೀರ್ಥ ಪಕ್ವವಾದ ಚಿತ್ರವನ್ನು ನೀಡಿದ್ದಾರೆ . ಇಡೀ ಚಿತ್ರ ಪ್ರೀತಿಯ ಹಲವು ಮುಖಗಳ ಮೆರವಣಿಗೆ . ಚಿತ್ರದಲ್ಲಿ ದೇಸಿ ಹಾಗೂ ಜಾಗತೀಕರಣದ ಪ್ರೀತಿಯ ಮುಖಾಮುಖಿ ಕೂತೂಹಲವಾಗಿದೆ . ಪ್ರೀತಿಯ ಹಲವು ಮುಖಗಳು ತಣ್ಣನೆ ನಮ್ಮನ್ನು ಆವರಿಸಿಕೊಳ್ಳುತ್ತಾ ಹೋಗುತ್ತವೆ . ಸತ್ಯಘಟನೆ ಆದರಿಸಿದ ಚಿತ್ರದೊಳಗಿನ ಎರಡು ಉಪಕಥೆಗಳು ಚಿತ್ರದ ಮುಖ್ಯ ಆಖರ್ಷಣೆ . ಒಳ್ಳೆಯ ಹೋಂವರ್ಕ ಮಾಡಿಕೊಂಡೆ ನಿರ್ದೇಶಕರು ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದಾರೆ . ಮುಖ್ಯ ಕಥೆಗಿಂತ ರಂಗಾಯಣರಘು ಮಾಡಿದ ಪ್ರೇಮಿಯ ಪಾತ್ರ ನಮ್ಮನ್ನು ಬಹಳ ಕಾಡುತ್ತದೆ. ಚಿತ್ರದಲ್ಲಿ ನಾಯಕಿಗೆ ಮಾತು ಕಡಿಮೆ . ನಟನೆಯ ಮೂಲಕ ಮಾತಿಗಿಂತ ಹೆಚ್ಚಿನದನ್ನು ಕಟ್ಟಿಕೊಡುವಲ್ಲಿ ನಿರ್ದೇಶಕರು ಗೆದಿದ್ದಾರೆ . ಕಲೆ , ಸಾಹಿತ್ಯದ ಅಭಿರುಚಿ ಇರುವ ನಿರ್ದೇಶಕನಿಂದ ಮಾತ್ರ ಇಂತಹ ಚಿತ್ರ ಸಾದ್ಯ . ಎಂಟು ರಾಜ್ಯಗಳ ಮೂಲಕ ಸಾಗುವ ಕಥೆ ಬಿನ್ನ ಸಂಸ್ಕೃತಿ ಗಳ ಅಂತರವನ್ನು ,ಚೆಲುವನ್ನು ತೋರಿಸಿಕೊಡುತ್ತದೆ . ಒಟ್ಟಿನಲ್ಲಿ ಒಲವೇ ಮಂದಾರ ನಾ ನೋಡಿದ ಅತ್ಯುತ್ತಮ ಚಿತ್ರಗಳಲೊಂದು . ಗೆಳೆಯರೇ ಸಮಯವಿದ್ದರೆ ಒಂದುಸಾರಿ ನೋಡಿಕೊಂಡು ಬನ್ನಿ ನೀವು ಶಭಾಶ ಹೇಳುವಿರಿ .
Comments
ಉ: ಒಲವೇ ಮಂದಾರ ...