ಒಲವ ಗೀತೆ

ಒಲವ ಗೀತೆ

ಬರಹ

ಲಗ್ಗೆ ಇಟ್ಟು ಆಗಾಗ್ಗೆ ಕಾಡಬೇಡ

ಕದ್ದು ಕದ್ದೆನ್ನ ನೀ ನೋಡಬೇಡ

ಈ ಹೃದಯ ಓಕೆ ನಾ ? ಈ ಗೆಳೆಯ ಇಷ್ಟಾನಾ ?

ಹೇಳೆ ನೀ ಕೇಳೆ ನೀ ಹೇಳೆ ಕೇಳೆ ಗೆಳತಿ  "ಪ"

ಮರೆಯದಿರು ಜೋಪಾನ ಮನ

 ಮಂದಿರದಿ ನಿನಗೆ ಸನ್ಮಾನ

ಈ ಹೃದಯ ಓಕೆ ನಾ ? ಈ ಗೆಳೆಯ ಇಷ್ಟಾನಾ ?

ಹೇಳೆ ನೀ ಕೇಳೆ ನೀ ಹೇಳೆ ಕೇಳೆ ಗೆಳತಿ  " ಲಗ್ಗೆ "

ಬಾ ಗೆಳತಿ ಇದುವೆ ನಿನಗೆ ಆಹ್ವಾನ

ನೀ ಕೂರಲು ಕಾದಿದೆ ಹೃದಯ ಸಿಂಹಾಸನ

ಈ ಗೆಳೆಯ ಇಷ್ಟವಾದ್ರೆ ಬಾ ಅವನ ಮನಸು ಸ್ಪಸ್ಟವಾದ್ರೆ ಬಾ " ಲಗ್ಗೆ "

ಬಾ ಚಲುವೆ ಬಾ ಈ ಪ್ರೀತಿ ಅರಮನೆಗೆ ಬಾ

ಅಲ್ಲಿದ್ದರೆ ರೀತಿ,ನೀತಿ ನೀ ಬಾ ಗೆಳತಿ ಬಾ

ಬರವಸೆ ನಿನ್ನಲ್ಲಿದ್ದರೆ ಬಾ ಚಲುವೆ ಬಾ "ಲಗ್ಗೆ"

ಅತಿ ಆಸೆ ನಿಮ್ಮೂರಲ್ಲೇ ಬಿಟ್ಟು  ಬಾ

ನಾನೆಂಬುದ ಬಿಟ್ಟು(ಸುಟ್ಟು)ಪ್ರೀತಿಯೊಂದ ಉಟ್ಟು ಬಾ

ಬಾ ಚಲುವೆ ಬಾ ಒಲವೆ ಬಾ ಗೆಳತಿ ಬಾ   "ಲಗ್ಗೆ"

ನಂಬಿಕೆ ಇಟ್ಟು ಬಾ ಅಂಜಿಕೆ ಸುಟ್ಟು(ಬಿಟ್ಟು) ಬಾ

ನಿನ್ನ ಮನಸು ಎನ್ನ ಬಯಸುವುದಾದರೆ ಬಾ

ನಿಮ್ಮವರ ಬಿಟ್ಟು ಪ್ರೀತಿಗೆ ಬೆಲೆ ಕೊಟ್ಟು ಬರುವುದಾದರೆ ಬಾ "ಲಗ್ಗೆ"

-ಕೃಷ್ಣಮೊರ್ತಿ ಅಜ್ಜಹಳ್ಲಿ ಬಿ ಎಂ ಎಸ್ ಸಿ ಇ