ಒಲವ ಲೀಲೆ
ಕವನ
ತಾವರೆಯ ವದನದಲಿ ಜೋಡಿ ಕಣ್ಗಳು ಕಮಲ
ಸಾವಧಾನದಲಿಂತು ಬಂದೆಯಲ್ಲ
ಯಾವ ಯೋಚನೆಯೊಳಗೆ ನೀನಿರುವೆ ನಾನರಿಯೆ
ಭಾವಗಳ ಮರೆಮಾಚಿ ನಿಂತೆಯಲ್ಲ
ಯಾರ ಕಾದಿಹೆ ನೀನು ನಲ್ಲ ಬರುತಿಹನೇನು
ಮೋರೆಯಲಿ ಕಾತರದ ಎಳೆಯ ಕಂಡೆ
ಮೇರೆ ಮೀರಿದ ತುಮುಲ ಮರೆಸಬಲ್ಲುದೆ ಕಮಲ
ದಾರಿಯುದ್ದಕೆ ಒಲವ ಹಾಸಿ ನಿಂದೆ
ಕರದಿ ಹಿಡಿದಿಹ ಗುಚ್ಛ ಇನಿಯಗೀಯುವ ಇಚ್ಛೆ
ಬರಲವನು ಕಾದಿರುವ ಕುಸುಮಬಾಲೆ
ಭರಪೂರ ಪ್ರೇಮದಲಿ ಇನಿಯಗರ್ಪಿಸಿಕೊಳುವೆ
ಶರಣೆನುವ ಭಾವವಿದು ಒಲವ ಲೀಲೆ||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ ಕೃಪೆ : ಅಂತರ್ಜಾಲ
ಚಿತ್ರ್
