ಒಲೆ, ಒಲೆ, ಒಲೆ, ಒಲೆ,........ಅಜ್ಜಂತೀನ......ಒಲೆ, ಒಲೆ ! !

ಒಲೆ, ಒಲೆ, ಒಲೆ, ಒಲೆ,........ಅಜ್ಜಂತೀನ......ಒಲೆ, ಒಲೆ ! !

ಬರಹ

ಒಲೆ, ಒಲೆ, ಒಲೆ, ಒಲೆ,........ಅಜ್ಜಂತೀನ......ಒಲೆ, ಒಲೆ !!

ಅರೆ ಎಂಟಣ್ಣ, ಏನಾಯ್ತು ? ನೆಟ್ಗಿದಿಯೆನಪ್ಪ ! ಎನೊ ಆಡೆಳ್ತಿದಿಯಲ್ಲಪ್ಪ !

ಎ ತೆಗ್ಯಯಪ್ಪ, ನಿನೊಳ್ಳೆ, ನನ್ಗೆನಾಗೈತೆ, ದೆವ್ನಂಗ್ ನಿನ್ ಮುಂದ್ ಕಾಣ್ತಿಲ್ವ. ನಾನು..ನಾನು...ಬಂದಿದ್ಯಾಕೆ ? ಅ ... ಗ್ಯಪ್ತಿ ಬಂತಪ. ಎಳ್ತಿನ್ ತಾಳು. " ನಿನ್ನಿನ್ ಮ್ಯಾಚ್ ನಾಗೆ ಗುಂಗುರ್ ಕುದ್ಲಿನ್ ಉಡ್ಗ ಕೊನ್ಯಾಗೆ ಗೊಲ್ ಬಡೀಲಿಲ್ವ ! ' ಮಸ್ಯಪ್ಪ,' ಅದ್ನ, ನಿನ್ ನೊಡ್ದಾ ಎಂಗೆ, ಅಂತ ತಿಳ್ದ್ ಒಗ್ವ; ಸರಿ ನೀನ್ ನೋಡ್ದೆ- ಸಂಕೆ, ಪರಿಆರ ಆತು ಬಿಡ್ಪಾ,
ಎಂಕ್ಟೇಸಪ್ಪ : ' ಎಂಥ ಗೊಲೊ ಮಾರಾಯ ಅದು.' ಮ್ಯರಡೊನ ಹೇಳಿದ್ನಿಜ ನೋಡು."ಇಂತ ಗೋಲ್ ಹೊಡ್ಯೊ ತಂಡ ಸೊಲೊದ್ ಸಾಧ್ಯವೆ "?

ಸರಿ ಬಿಡು, ನಾನ್ ಒರಟೆ; 'ನಿನ್ ಸಂಪ್ದ ಕ್ಕೆನೊ ಬರಿತೊಯೊ ಎನಪ'. 'ಅದೆ ಬಿಟಿ ಅತ್ತಿ ಬೀಜ, ಕೊಳ್ಬೆಕು. ಯದ್ವ ತದ್ವ ಬೆಲೆಗೊಳ್ ಎರ್ಸವ್ರೆ, ಯಡ್ವಟ್ ಆದೀತು, ಬತ್ತಿನಪ್ಪೊ',
ಬರ್ಲಾ !

ಇಂತಹ ಸರಳ ಹೃದಯದ ಎಂಟಪ್ಪ, ಎಲ್ಲರ ಹಿತ ಬಯಸೊನು, ಅವನ ಬಾಯ್ನಲ್ಲಿ ಎಲ್ರು ಅಪ್ಗಳೆ ! 'ಮೆಸ್ಸಿ' ಅವನ್ ಲೆಕ್ದಲ್ಲಿ ಮಸ್ಯಪ್ಪ !

ಜರ್ಮನಿಯ 'ಸಿ 'ಗ್ರುಪ್ ನ ಅರ್ಜೆಂಟೈನ ಸರ್ಬಿಯ ಮಾಂಟೆನೆಗ್ರೋ ವಿರುಧ್ದ ಆಡಿದ ಆಟದಲ್ಲಿ (೬-೦) ಗೊಲಿನಿಂದ ಭರ್ಜರಿ ವಿಜಯ ಗಳಿಸಿ ಮುಂದೋಡಿದೆ. ಈ ಸಂಭ್ರದ ಪಂದ್ಯ, ಜಿಲ್ ಸಿಂಕರ್ ಜೆನ್ ನ ಎಫ್.ಸಿ ಶಾಲ್ಕೆಸ್ ಸ್ಟೇಡಿಯಂ ನಮುಚ್ಚಿದ ಛಾವಣಿಯಡಿಯಲ್ಲಿ ಪ್ರಚಂಡ ಪ್ರೆಕ್ಷಕ ವೃಂದದ ಸಮ್ಮುಖದಲ್ಲಿ ನಡೆಯಿತು. ಸ್ಟೇಡಿಯಮ್ ಒಳಗೆ ಈಗ ಬೆಳಕು ನೆರಳು ಗಳ ಸಂಯೊಜನೆ ಚೆನ್ನಾಗಿದೆ.ಅದರಿಂದಲೆ ಅರ್ಜೆಂಟೈನ ದ ಭವ್ಯಗೊಲುಗಳನ್ನು ಟೀವಿ ಕ್ಯಾಮರಾಗಳು ಅಷ್ಟು ಸೊಗಸಾಗಿ ಸೆರೆಹಿಡಿಯಲು ಸಾಧ್ಯವಾಯಿತು.ಕ್ರೀಡಾಂಗಣದ ಒಳಗೆ, ಆಕಾಶ ನೀಲಿ ಮತ್ತು ಬಿಳಿ ಬಣ್ಣದ ಉಡುಪಿನಲ್ಲಿ 'ಒಲೆ ...ಒಲೆ' ... ಎಂದು ಹಾಡಿದ ಹಾಡು, ಆಕಾಶ ಪಾತಾಳಗಳನ್ನು ಒಂದು ಗೂಡಿಸುವಂತೆ ಮೊರೆಯುವ ಶಬ್ದದ ಮಧ್ಯೆ, ಡಿಯಾಗೊ ಮೆರಡೊನ ಮತ್ತು ಅವರ ಮಗಳು 'ದಲ್ಮ 'ಕುಳಿತು ಸಂಗಿತ ವನ್ನು ಆನಂದಿಸುತ್ತಿದ್ದರು.

ಮಧ್ಯಾಂತರದ ಮೊದಲೆ ೨ ಗೊಲು ಗಳನ್ನು ಬಾರಿಸಿದ ಮಿಡ್ ಫೀಲ್ಡರ್ ಮ್ಯಾಕ್ಸಿ ರೊಡ್ರಿಗ್ಯುಸ್, ಬದಲಿ ಆಟಗಾರ, ಎಷ್ಟೆಬಾನ್ ಕ್ಯಾಂಬಿಯಾಸ್ಸೊ ಹೊಡೆದ ಗೋಲ್ ಗಳು ವಿಶ್ವ ದಾಖಲೆಯನ್ನು ಸ್ಥಾಪಿಸಿವೆ.ಈ ಗೊಲ್ ೨೪ ಜನ ಆಟಗಾರರ ಕಾಲಿಗೆ ತಗುಲಿ ಅಪ್ಪಿ, ಮುತ್ತಿಟ್ಟು, ಸೆಳೆದಪ್ಪಿ, ಸ್ಪರ್ಶಿಸಿ ಕಾಲೊದೆತ ದಿಂದ ಮಾಡಿದ ಮರೆಯಲಾಗದ ಒಂದು ವಿಶೇಷ ಘಟನೆ ! ಆ ರಸ ನಿಮಿಷಗಳನ್ನು ಕೆಳಗೆ ನಮೂದಿಸಿದೆ.

೬ ನೆ ನಿಮಿಷ ಪ್ರಥಮ ಗೊಲ್, ಮ್ಯಾಕ್ಸಿ ರಾಡ್ರಿಗ್ಯುಸ್ ೧-೦
೩೦ ನೆ ನಿಮಿಷ ಎರಡನೆ ಗೋಲ್, ಎಷ್ಟಬಾನ್ ಕ್ಯಾಂಬಿಯಾಸ್ಸೊ ೨-೦
೪೧ ನೆ ನಿಮಿಷ ಮುರನೆ ಗೊಲ್ ,ಮ್ಯಾಕ್ಸಿ ರಾಡ್ರಿಗ್ಯುಸ್ ೩-೦
೭೮ ನೆ ನಿಮಿಷ ನಾಲ್ಕನೆಗೊಲ್, ಹರ್ನಮ್ ಕ್ರೆಸ್ಪೊ ೪-೦
೮೪ ನೆ ನಿಮಿಷ ಐದನೆ ಗೊಲ್, ಕಾರ್ಲೊಸ್ ಆಲ್ಬರ್ಟೊ ತೆವೆಝ್ ೫-೦
೮೮ ನೆ ನಿಮಿಷ ಆರನೆ ಗೊಲ್, ಲಿಯೊನೆಲ್ ಮೆಸ್ಸಿ ೬-೦

ಭಾರತದ ಮಹತ್ವದ ಫುಟ್ ಬಾಲ್ ಆಟಗಾರ, ಬೈಚುಂಗ್ ಭೂಟಿಯ, ಅಂತರಾಷ್ಟ್ರೀಯ ಸಾಕರ್ ಗೆ ವಿದಾಯ ಹೇಳುವ ಮನಸ್ಥಿತಿಯಲ್ಲಿದ್ದಾರೆ. ಸಿಕ್ಕಿಂ ರಾಜ್ಯದ ಒಂದು ಚಿಕ್ಕ ಹಳ್ಳಿ'ಟಿರಿಕಿಟಮ್'ನಲ್ಲಿ ಹುಟ್ಟಿದ ಬೈಚುಂಗ್, ಭಾರತದ ಪ್ರಖ್ಯಾತ ಫುಟ್ ಬಾಲ್ ತಾರೆ.ವಿಪರ್ಯಾಸ ವೆಂದರೆ, ಇದುವರೆಗು ಭೈಚುಂಗ್ ಉತ್ತಮ ಪಂದ್ಯ ವಾಡಲು ಪ್ರಯತ್ನಿಸಿ ಉತ್ತಮ ತಂಡಗಳನ್ನು ಕಟ್ಟಲು ಮಾಡಿದ ಪ್ರಯತ್ನಗಳು ಅವರಿಗೆ ಸಮಾಧಾನವನ್ನು ತಂದಿಲ್ಲ.

ದಿನದ ಎರಡನೆಯ ಆಟದ 'ಸಿ' ಗ್ರುಪಿ ನಲ್ಲಿ, ಜರ್ಮನಿಯ ಸ್ಟುಟ್ಗರ್ಟಿನಲ್ಲಿ ನಡೆದ ನೆದರ್ ಲ್ಯಾಂಡ್ಸ್ ವಿರುಧ್ದ ಐವರಿ ಕೋಸ್ಟ್ ಮ್ಯಾಚಿನಲ್ಲಿ (೨-೧) ವಿಜಯಸಾಧಿಸಿ ಡಚ್ ತಂಡ ಮುಂದಿನ ಹಂತಕ್ಕೆರಿದೆ.ರಾಡ್ ವ್ಯಾನ್ ನಿಸ್ಟೆಲ್ ರುಯ್ (೨೬) ರಾಬಿನ್ ವ್ಯಾನ್ ಪರ್ಸಿ (೨೨)ತಲಾ ಒಂದು ಗೊಲ್ ಮಾಡಿ ನೆದರ್ ಲ್ಯಾಂಡ್ ತನ್ನ ಸ್ಥಾನವನ್ನು ವಿಶ್ವ ಕಪ್ಪಿನಲ್ಲಿ ಕಾಯ್ದಿರಿಸಿಕೊಂದಿದೆ.ಐವರಿ ಕೊಸ್ಟ್ ಒಂದು ಗೊಲ್ ಮಾಡಲು ಸಾಧ್ಯ ವಾಯಿತು.

ಡಿ ಗ್ರುಪಿನ ಕೊನೆಯ ಆಟದಲ್ಲಿ, ಜರ್ಮನಿಯ ಹ್ಯಾನೊವರ್ ನಲ್ಲಿ ಮೆಕ್ಸಿಕೊ ಆಂಗೋಲ ವಿರುಧ್ದ (೦-೦) ನಿಂದ ಡ್ರಾ ಮಾಡಿ ಕೊಂಡಿತು.ಪೆರೆರ ಜೊವೆಕಾರ್ಡೊ ಎಲ್ಲಾ ಗೊಲುಗಳನ್ನು ಸಮರ್ಥವಾಗಿ ತಡೆದರು.ಡಿಫೆಂಡರ್ 'ಜಂಬಾ' ಸಕತ್ತಾಗಿ ಹೋರಾಡಿದರು.ಹೋದವಾರ ಪೋರ್ಚುಗಲ್ ವಿರುಧ್ದ (ಕಪ್ಪು ಜಿಂಕೆಗಳು) (೧-೦) ಗೊಲಿನಿಂದ ಸೊಲನ್ನೊಪ್ಪಿಕೊಂಡಿದ್ದವು.ಕೊನೆಯ ೧೧ ನಿಮಿಷ ಕೇವಲ ೧೦ ಜನರೆ ಆಂಗೋಲದ ಕಡೆ ಆಡಿದರು. ೪೩,೦೦೦ ಜನ ಮೆಕ್ಸಿಕನ್ನರು ತಮ್ಮ ರಾಷ್ಟ್ರ್ಗೀತೆಯನ್ನು ಮೊದಲ ೨೦ ನಿಮಿಷಗಳಲ್ಲಿ ಹೇಳುತಿದ್ದು, ಆ ಶಬ್ದ ಕಿವಿ ಕಿವಿಡಾಗುವಷ್ಟು ಬಿರುಸಾಗಿತ್ತು.ಆಂಗೋಲದ ರಕ್ಷಾತ್ಮಕ ಆಟ, ಜನರ ಮೆಚ್ಚುಗೆ ಗಳಿಸಿತು. ಕೊನೆಯ ವರೆಗು ಗೊಲ್ ಮಾಡಲು ಅವರು ಬಿಟ್ಟುಕೊಡಲಿಲ್ಲ.

ಇಂದು "ಫಿಫಾ ವಿಶ್ವ ಕಪ್ಪಿನಲ್ಲಿ" ಆಡುವ ತಂಡಗಳು: ಶನಿವಾರ, ಜೂನ್, ೧೭, ೨೦೦೬.

ಸಾ. ೬-೩೦ ಪೋರ್ಚುಗಲ್ ವಿರುಧ್ದ ಇರಾನ್ - ' ಡಿ'
ರಾ. ೯-೩೦ ಚೆಕ್ ರಿಪಬ್ಲಿಕ್ ವಿರುಧ್ದ ಘಾನ - 'ಇ'
ಮ.ರಾತ್ರಿ.೧೨-೩೦ ಇಟಲಿ ವಿರುಧ್ದ ಯು.ಎಸ್.ಎ -'ಇ'