ಒಳಿತಿನ ನಿರೀಕ್ಷೆ !?

ಒಳಿತಿನ ನಿರೀಕ್ಷೆ !?

ಕವನ

ದಿನನಿತ್ಯ ಹಾಳಲ್ಲಿ ಮುಳುಗಿ

ಮಹಾಪಾಪಿಯಾಗಿರುವೆ ನೀನು

ನಿನ್ನನ್ನು ಕ್ಷಮಿಸೀತೆ ಇಲ್ಲಿ 

ಈ ಸುಮಧುರ ಮಣ್ಣು 

 

ಅವಿವೇಕದಿಂದ ನೀಚತನವನ್ನು

ಅನುಸರಿಸಿದೆ

ಅಜಾಗರೂಕತೆಯಿಂದ ತಪ್ಪು 

ನೀನು ಎಸಗಿದೆ

 

ಕ್ರೂರ ಪ್ರಾಣಿಗಳಿಗಿಂತ ಕಡೆ

ಇತರರಿಗೆ ನೋವಕೊಟ್ಟೆ

ಎಂದೂ ಸರಿಯಾಗದ ರೀತಿ

ಇಂದು ನೀನು ಕೆಟ್ಟೆ

 

ನಿನಗೆ ತಕ್ಕ ಶಾಸ್ತಿಯಾಗಬೇಕು

ಈ ಜಗದಿ

ಕೊನೆಗೆ ಈ ಪ್ರಪಂಚದಲ್ಲಿ 

ಸರಿಬೇಕು ನೀ ದಿನ ದಿನದಿ

 

ಇಲ್ಲಿ ನೀಚ ಬುದ್ಧಿ ಬಿಟ್ಟು 

ಅರಿವು ಪಡೆಯು ನರನೇ

ನಿನ್ನ ಸಂಗಡಿಗರೂ ಆದರಾಗಲಿ

ನಿನ್ನ ತರಹನೇ

 

-ಎಂ.ಎ.ಮುಸ್ತಫಾ ಬೆಳ್ಳಾರೆ

ಚಿತ್ರ ಕೃಪೆ : ಇಂಟರ್ನೆಟ್ 

 

ಚಿತ್ರ್