ಒಳಿತು/ಕೆಡುಕು

ಒಳಿತು/ಕೆಡುಕು

ಕವನ

ಒಳಿತು/ಕೆಡುಕು

ಮರಿಬೇಕು ಕೆಡಕುಗಳ
ನೆನಿಬೇಕು ಒಳಿತುಗಳ

ಕೊರಗುತ್ತ ಕೂರಬೇಡ
ಕೊರತೆಗಳ ಕಾಣಬೇಡ
ಕೊಂಕುನುಡಿಗಳಿಗೆ ಕಿವಿಕೊಡಬೇಡ
ಕುಂಟುನೆಪಗಳ ನೀಡಬೇಡ
!!ಮರಿಬೇಕು ಕೆಡಕುಗಳ!!

ಇರುವುದರಲ್ಲಿಯೇ ಖುಷಿಪಡು
ಇಂದಿನ ಕಾರ್ಯಗಳ ಇಂದೇ ಮಾಡು
ಇಂಪಾದ ನುಡಿಗಳ ನೀನಾಡು
ಇನ್ನೊಬ್ಬರ ಬಗ್ಗೆ ಚಿಂತೆ ಮಾಡುವುದ ಬೀಡು
!!ಮರಿಬೇಕು ಕೆಡಕುಗಳ!!

ಅಪತ್ಕಾಲಕ್ಕಾದವರ ಮರಿಬೇಡ
ಆಪ್ತಮಿತ್ರರನ್ನು ದೂರ ಮಾಡಿಕೊಳ್ಳಬೇಡ
ಆಪ್ತರಿಗೆ ಅಪಾಯ ಮಾಡಬೇಡ
ಅಪರಿಚಿತರನ್ನು ಶೀಘ್ರವಾಗಿ ನಂಬಬೇಡ
!!ಮರಿಬೇಕು ಕೆಡಕುಗಳ!!

ಅಮ್ಮನ ಆರೈಕೆ ನೆನೆಯುತ್ತಿರು
ಅಪ್ಪನ ಹಾರೈಕೆ ಮರೆಯದಿರು 
ಸಹೋದರಿಯರಿಗೆ ಸಂಕಟ ನೀಡದಿರು
ಸಹೋದರರಿಗೆ ಕಂಟಕ ನೀನಾಗದಿರು
!!ಮರಿಬೇಕು ಕೆಡಕುಗಳ!!

ಗೆಲುವನ್ನು ನೀನು ಪಡೆಯುತ್ತಿರು
ಸೋಲಿನ ಪಾಠವನ್ನು ಮರೆಯದಿರು
ಹೋಗಳಿಕೆ ಮಾತಿಗೆ ಹಿಗ್ಗದ್ದಿರು
ತೇಗಳಿಕೆ ಮಾತಿಗೆ ಕುಗ್ಗದ್ದಿರು
!!ಮರಿಬೇಕು ಕೆಡಕುಗಳ!!

ರಚನೆ:-ತುಂಬೇನಹಳ್ಳಿ ಕಿರಣ್ ರಾಜು ಎನ್
Thumbenahalli Kiranraju N