ಒಳ್ಳೆಯ ಸಂಸ್ಕೃತ ಸುಭಾಷಿತಗಳು ೧೦-೧೨

ಒಳ್ಳೆಯ ಸಂಸ್ಕೃತ ಸುಭಾಷಿತಗಳು ೧೦-೧೨

ಬರಹ

೧೦. ಪರದು:ಖಂ ಸಮಾಕರ್ಣ್ಯ ಸ್ವಭಾವೋ ಸರಲೋ ಜನಾ:
ಉಪಕಾರಾಸಮರ್ಥಾತ್ವಾತ್ ಪ್ರಾಪ್ನೋತಿ ಹೃದಯವ್ಯಥಾಂ ||

ಸ್ವಭಾವದಿಂದ ಸರಳರಾದ ಸಜ್ಜನರು ಹೆರವರ ದು:ಖ ಕಂಡು ಉಪಕಾರಮಾಡಲು ಆಗದಿದ್ದ ಸಂದರ್ಭದಲ್ಲಿ ಮನಸ್ಸಿನಲ್ಲಿ ಕೊರಗುವರು.

೧೧. ಅಯಂ ನಿಜ: ಪರೋವೇತ್ತಿ ಗಣನಾ ಲಘುಚೇತಸಾಂ|
ಉದಾರಚರಿತಾನಾಂ ತು ವಸುಧೈವ ಕುಟುಂಬಕಂ ||

ಇವನು ನಮ್ಮವನು , ಇವನು ಪರ್ಕೀಯನು ಎಂದು ಸಂಕುಚಿತ ಮನಸ್ಸಿನವರು ತಿಳಿಯುತ್ತಾರೆ . ಉದಾತ್ತ ನಡತೆಯುಳ್ಳವರಿಗೆ ಇಡೀ ಜಗತ್ತೇ ಒಂದು ಕುಟುಂಬ.

೧೨. ಸಂಸಾರಕಟು ವೃಕ್ಷಸ್ಯ ದ್ವೇಫಲೇ ಹಿ ಅಮೃತೋಪಮೇ |
ಕಾವ್ಯಾಮೃತರಸಾಸ್ವಾದ: ಸಂಗಮ: ಸುಜನೈ: ಸಹ ||

ಸಂಸಾರವೆಂಬ ವಿಷವೃಕ್ಷಕ್ಕೆ ಎರಡು ಅಂರುತಕ್ಕೆ ಸಮನಾದ ಹಣ್ಣುಗಳು . ಒಂದು ಕಾವ್ಯದ ರಸಾಸ್ವಾದನೆ. ಇನ್ನೊಂದು ಸಜ್ಜನರ ಸಂಗ.