ಒಳ್ಳೆಯ ಸಂಸ್ಕೃತ ಸುಭಾಷಿತಗಳು ೧೬-೧೮
೧೬. ಪಾಪಾನ್ನಿವಾರಯತಿ ಯೋಜಯತೀ ಹಿತಾಯ
ಗುಹ್ಯಂ ಚ ಗೂಹತಿ ಗುಣಾನ್ ಪ್ರಕಟೀಕರೋತಿ |
ಆಪದ್ಗತಂ ಚ ನ ಜಹಾತಿ , ದದಾತಿ ಕಾಲೇ
ಸನ್ಮಿತ್ರ ಲಕ್ಷಣಮ್ ಇದಂ ಪ್ರವದಂತಿ ಸಂತ: ||
ನಿಮ್ಮನ್ನು ಪಾಪ ಕಾರ್ಯದಿಂದ ತಪ್ಪಿಸುತ್ತಾರೆ .
ನಿಮ್ಮ ಹಿತಕ್ಕಾಗಿ ಯೋಜನೆ ಮಾಡುತ್ತಾರೆ .
ಯಾವುದನ್ನು ಮುಚ್ಚಿಡಬೇಕೋ ಆದನ್ನು ಮುಚ್ಚಿಡುತ್ತಾರೆ.
ನಿಮ್ಮ ಗುಣಗಳನ್ನು ಬಹಿರಂಗಪಡಿಸುತ್ತಾರೆ .
ಸಂಕಟ ಸಮಯದಲ್ಲಿ ಕೈ ಬಿಡುವದಿಲ್ಲ ,
ಸಕಾಲಕ್ಕೆ ಸಹಾಯ ಮಾಡುತ್ತಾರೆ.
ಒಳ್ಳೆಯ ಮಿತ್ರರ ಲಕ್ಷಣಗಳು ಇವೆಂದು ಬಲ್ಲವರು ಹೇಳುತ್ತಾರೆ.
೧೭. ಗಂಗಾ ಪಾಪಂ ಶಶೀ ತಾಪಂ ದೈನ್ಯಂ ಕಲ್ಪತರುಸ್ತಥಾ |
ಪಾಪಂ ತಾಪಂ ಚ ದೈನ್ಯಂ ಘ್ನಂತಿ ಸಜ್ಜನ ಸಂಗತಿ: ||
ಗಂಗೆಯು ಪಾಪವನ್ನು ನಾಶಮಾಡುತ್ತಾಳೆ. ಚಂದ್ರನು ತಾಪವನ್ನು ಪರಿಹರಿಸುವನು. ದು:ಖವನ್ನು ಕಲ್ಪವೃಕ್ಷವು ದೂರ ಮಾಡುವದು . ಪಾಪ, ತಾಪ ಮತ್ತು ದು:ಖ ಇವು ಮೂರನ್ನೂ ಸಜ್ಜನರ ಸಹವಾಸವು ದೂರಮಾಡುವದು.
೧೮ ದಾನಾಯ ಲಕ್ಷ್ಮೀ: ಸುಕೃತಾಯ ವಿದ್ಯಾ ಚಿಂತಾ ಪರಬ್ರಹ್ಮವಿನಿಶ್ಚಯಾಯ
ಪರೋಪಕಾರಾಯ ವಚಾಂಸಿ ಯಸ್ಯ ವಂದ್ಯ: ತ್ರಿಲೋಕೀತಿಲಕ: ಸ ಏಕ: ||
ಸಂಪತ್ತು ದಾನಕ್ಕಾಗಿ , ವಿದ್ಯೆ ಒಳ್ಳೆಯ ಕೆಲಸಕ್ಕಾಗಿ , ಚಿಂತೆ ಆಧ್ಯಾತ್ಮಿಕ ವಿಷಯದಲ್ಲಿ , ಯಾರಿಗೆ ಇರುವದೋ ಅವರು ತ್ರಿಲೋಕ ವಂದ್ಯರು .