ಒಳ್ಳೆಯ ಸಂಸ್ಕೃತ ಸುಭಾಷಿತಗಳು (೪೩-೪೬):

ಒಳ್ಳೆಯ ಸಂಸ್ಕೃತ ಸುಭಾಷಿತಗಳು (೪೩-೪೬):

ಬರಹ

೪೩. ತನ್ನ ಸಂಪತ್ತು ಹಾಳಾದದ್ದು , ಮಾನಸಿಕ ವ್ಯಥೆ , ಮನೆಯಲ್ಲಿಯ ಕೆಟ್ಟ ನಡತೆ , ಮೋಸ ಹೋದದ್ದು , ಅವಮಾನ ಇವುಗಳನ್ನು ಬುದ್ಧಿವಂತರು ಇನ್ನೊಬ್ಬರ ಮುಂದೆ ಹೇಳಬಾರದು .

ಅರ್ಥನಾಶಂ ಮನಸ್ತಾಪಂ ಗೃಹೇ ದುಶ್ಚರಿಚರಿತಾನಿ ಚ |
ವಂಚನಂ ಚಾಪಮಾನಂ ಚ ಮತಿಮಾನ್ ನ ಪ್ರಕಾಶಯೇತ್ ||

೪೪. ದೂರದಲ್ಲಿರುವವನನ್ನು , ನೀರಿನಲ್ಲಿರುವವನನ್ನು , ಓಡುತ್ತಿರುವವನನ್ನು , ಸಂಪತ್ತಿನಿಂದ ಗರ್ವಿಷ್ಠನಾದವನನ್ನು ಸಿಟ್ಟಿಗೆದ್ದವನನ್ನು ಸೊಕ್ಕಿನಿಂದಿರುವವನನ್ನು ನಮಸ್ಕರಿಸಬಾರದು.

ದೂರಸ್ಥಂ ಜಲಮಧ್ಯಸ್ಥಂ ಧಾವಂತಂ ಧನಗರ್ವಿತಂ |
ಕ್ರೋಧವಂತಂ ಮದೋನ್ಮತ್ತಂ ನಮಸ್ಕಾರೇಪಿ ವರ್ಜಯೇತ್ ||

೪೫. ಮಂತ್ರವಾಗದ ಅಕ್ಷರವಿಲ್ಲ , ಔಷಧವಾಗದ ಗಿಡಮೂಲಿಕೆಯಿಲ್ಲ , ನಿರುಪಯೋಗಿ ಮನುಷ್ಯನಿಲ್ಲ . ಸರಿಯಾಗಿ ಯೋಜಿಸುವವರು ಕಡಿಮೆ.

ಅಮಂತ್ರಂ ಅಕ್ಷರಂ ನಾಸ್ತಿ , ನಾಸ್ತಿ ಮೂಲಂ ಅನೌಷಧಂ |
ಅಯೋಗ್ಯ ಪುರುಷ: ನಾಸ್ತಿ ಯೋಜಕ: ತತ್ರ ದುರ್ಲಭ: ||

೪೬. ಮಾಡಬಾರದ್ದನ್ನು ಪ್ರಾಣ ಹೋದರೂ ಮಾಡಬಾರದು . ಮಾಡಬೇಕಾದ್ದನ್ನು ಪ್ರಾಣಹೋದರೂ ಮಾಡಬೇಕು

ಅಕರ್ತವ್ಯಂ ನ ಕರ್ತವ್ಯಂ ಪ್ರಾಣೈ: ಕಂಠಗತೈರಪಿ |
ಕರ್ತವ್ಯಂ ಏವ ಕರ್ತವ್ಯಂ ಪ್ರಾಣೈ: ಕಂಠಗತೈರಪಿ ||