ಒಳ್ಳೆ ನಾಯಕರುಗಳು ತಪ್ಪು ನಿರ್ಧಾರ ಮಾಡಿದಾಗ ಕಷ್ಟ ಖಂಡಿತ.
ಧರಮ್ ಸಿಂಗ್, ಮತ್ತೆ ಪ್ರಕಾಶ್ ಗೆ ಹೀಗೇಕಾಯ್ತು. ? ಅಂಬರೀಷ್, ವಾಟಾಳ್, ಇವೆರಲ್ಲಾ ಗೆಲ್ಲೊ-ಕುದುರೆಗಳು ಅಂತ ಜನ ಮೊದ್ಲಿಂದ ಹೇಳ್ತಿದ್ರಪ್ಪ. ಯೇನ್ ಗೊಟಾಲ ಮಾಡ್ಕೊಂಡ್ರೊ ತಿಳಿವಲ್ದೆ ! ಸ್ವಲ್ಪ ಇವಾಗ್ ತಲೆಗೆ ಹೊಗ್ತಿದೆ. ಅಂಬರೀಶ್ ಸರಿಯಾಗಿ ಲೊಕ್ಸಭೆ ಅಟೆಂಡ್ ಮಾಡ್ತಿದ್ರ ? ನಮ್ ಗೊವಿಂದ ಮಾಡ್ತಿರ್ಲಿಲ್ಲ ಅನ್ನೊ ಗುಮಾನಿ ಈ ರಾಜ್ಯದಲ್ಲಿ. ನಟನೆ, ಮತ್ತೆ ರಾಜಕೀಯ ಸಂಭಾಳಿಸ್ಕೊಂಡ್ ಹೊಗೊದು ಸುಮ್ನೆನಾ ?
ವಾಟಾಳ್ ಹೇಗಿದ್ರು ಪ್ರತಿಭಾಟ್ನೆ ನಲ್ಲೇ ತೃಪ್ತಿ ಪಡೀತಾರೆ. ಅವರ್ಗೇನು ಅಪೊಸಿಶನ್ ಒಳ್ಳೇದೆ ಅಯ್ತಲ್ವ ?
ಪ್ರಕಾಶ್, ಮಾತ್ರ ಅಲ್ಲಿಂದ ಇಲ್ಲಿ ಇಲ್ಲಿಂದ ಅಲ್ಲಿಗೆ, ಮತ್ತೆ ಡೆಲ್ಲಿ ಅಂತ ಓಡಾಡಿ ನೆಲಕಚ್ಚಿದ್ರು. ಪಾಪ. ಒಳ್ಳೇ ಭಾಷ್ಣ ಬಿಗಿತಿದ್ರು. ೫ ವರ್ಷ ಅನ್ನೊದೇನ್ ಬಂದೇ ಬಿಡುತ್ತೆ. ಬಿ. ಜೆ. ಪಿ. ಮಾಡೋ ತಪ್ಪುಗಳ್ನೆಲ್ಲಾ ಪಟ್ಟಿ ಮಾಡ್ಕೊಳ್ಳಿ. ಮುಂದಿನ್ ಎಲೆಕ್ಷನ್ ನಲ್ಲಿ ನಿಮಗೆ ಜಯ ಖಂಡಿತ.
ಪಾಪ, ಎಸ್. ಎಮ್. ಕೃಷ್ಣ ಕರ್ಣಾಟ್ಕಕ್ ಬಂದ್ರು. ಹೈ ಕಮಾಂಡ್ ಇವ್ರಮ್ಯಾಲೆ ಎಷ್ಟ್ ವಿಶ್ವಾಸ ಇಟ್ಕೊಂಡಿದ್ರು. ಸೋನಿಯ ಮಾತೇ ನಿಂತೊಗಿದೆ. ಆದ್ರು ಕೃಷ್ಣ ಮಾತ್ರ ತಮ್ಮ ಸೋಲಿಗೆ ಅವ್ರೇ ಹೊಣೆ ಅಂತಹೇಳಿ ಜನಗಳ್ ಮನಸ್ನ ಗೆದ್ದಿದಾರೆ !
ಪಾಪ ಸಿದ್ರಾಮಣ್ಣಾವ್ರು, ಗೆದ್ರು ನಿಜ. ಆದ್ರೇನುಪ್ಯೋಗ ? ಈಗ ಅವರ್ಮೇಲೆ ಅವ್ರಿಗೇ ಕೋಪಬಂದಿರ್ಬೊದು !
ದ್ಯಾವೇ ಗೌಡ್ರು, ಸಾಕಷ್ಟು ಕೆಲ್ಸ ಮಾಡಿದಾರೆ. ಈಗ ಸ್ವಲ್ಪ ರೆಸ್ಟ ತೊಗೊಂಡ್ ಮನೇಲಿ ಹಾಯಾಗಿ " ಕಸ್ತೂರಿ ಟಿವಿ " ನೋಡಕೊಂಡು ಇರ್ಬೊದು.
ಮಾನ್ಯ ಮಾಜಿ ಮುಖ್ಯಮಂತ್ರಿ, ಕುಮಾರಸ್ವಾಮಿಯೋರು ಇನ್ಮೇಲಾದ್ರು ಸ್ವಂತವಾಗಿ ಯೊಚ್ನೆ ಮಾಡೊದು, ನಿರ್ಧಾರ ತೊಗೊಳೊದ್ನ ಇನ್ ಐದು ವರ್ಷ ಪ್ರಾಕ್ಟಿಸ್ ಮಾಡ್ಬೊದಲ್ವ ?
ತಲೆಹರಟೆಗೆ ಕ್ಷಮೆಯಿರಲಿ.
ವೆಂ.