ಒಳ್ಳೇದೆಲ್ಲ ಸುಂದರ...
ಕವನ
ಬೆಳ್ಳಿ ಕಾಲುಂಗುರ ಎಷ್ಟೊಂದು ಸುಂದರ
ಮಳ್ಳೆಕಣ್ಣಿನ ಹುಡುಗಿ ನೋಡಲು ಚಂದಿರ
ಕಳ್ಳಿ ಮಾಡಿಹಳು ನನ ಬದುಕು ಬಂಗಾರ
ಒಳ್ಳೆತನ ತೋರಿ ಕಾಣುವಳು ಮಂದಾರ
ಬಳ್ಳಿ ಹಂದರ ಹೂ ಅರಳಿದ ಮಂದಿರ
ಕಳ್ಳಿ ಮುಳ್ಳಲು ಹೂ ಅರಳಿ ಸುಂದರ
ನಳ್ಳಿ ಕಾಯಿ ತಿಂದ ಹೆಣ್ಣಾ ಝೆoಕಾರ
ತಳ್ಳಬೇಡ ಕಾಲ ಪ್ರೀತಿಯೇ ನಿರಂತರ
ಒಳ್ಳೇ ಮೇಘವು ಚಿತ್ತಾರ ಕಂಡಿದೆ ಸುಂದರ
ಸುಳ್ಳೇನಿಲ್ಲ ಮೇಘದಲಿ ಅಡಗಿಹ ಚಂದಿರ
ಬೆಳ್ಳಿ ಬಾನಲಿ ಅದಕೆ ಇರುಳಾಗಿದೆ ಬಂಧುರ
ಬೆಳ್ಳಿ ಮೂಡಲು ಭುವಿಯಾಗಿದೆ ಮಂದಾರ
ಹಳ್ಳಿಗೆ ಸುಗ್ಗಿ ಉಗ್ಗಿ ಹಬ್ಬ ಬರಲು ಸಿಂಗಾರ
ಹಳ್ಳಿ ಹೆಣ್ಣಮಗಳು ಎಲ್ಲ ಮನೆಗೆ ಸಿಂಧೂರ
ಹಳ್ಳ ಹೊಳೆ ತೊರೆ ನದಿ ನಾಡಿಗೆ ಬಂಗಾರ
ಚೆಳ್ಳೆ ಹಣ್ಣುಹೂ ತಿಂದ ದುಂಬಿ ಝೆoಕಾರ
-ಬಂದ್ರಳ್ಳಿ ಚಂದ್ರು, ತುಮಕೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್