ಒ0ಟಿಹ0ಸ‌

ಒ0ಟಿಹ0ಸ‌

ಪುಸ್ತಕದ ಲೇಖಕ/ಕವಿಯ ಹೆಸರು
ಡಾ.ವಿನೀತಾ ಗುಪ್ತಾ/ ಡಾ. ಪ0ಚಾಕ್ಷರಿ ಹಿರೆಮಠ‌
ಪ್ರಕಾಶಕರು
ನ್ಯೂ ವೇವ್ ಬುಕ್ಸ್,ಬೆ0ಗಳೂರು೪
ಪುಸ್ತಕದ ಬೆಲೆ
230/‍

ಮುನಿ ಷ್ರೀ ರೂಪ್ ಚ0ದ್ರ‌ ಅವರು ಶ್ವೇತ0ಬರ‌ ಜೈನ‌ ತೇರಾಪ0ಥದ‌ ಸಮಕಾಲಿನ‌ ಪ್ರಬಾವೀ ಗುರುಗಳು. ಪ್ರಗತಿಶೀಲ‌ ಮನೋಬಾವದ‌ ಅವರು ಪ್ರತಿಬಾವ0ತ‌ ಕವಿಯು ಹೌದು.ಧಾರ್ಮಿಕ‌ ಪ0ಥಗಳಲ್ಲಿನ‌ ಒಣಪ0ಪ್ರದಯಗಳನ್ನು ಧಿಕ್ಕರಿಸಿ ಹಲವು ರೀತಿಯ‌ ಮನಸಿಕ‌ ಕಿರುಕುಳಕ್ಕೆ ಒಳಗಾದವರು. ಅವರ‌ 'ಅ0ಧಾ ಚಾ0ದ್' ', 'ಭೂಮಾ' ಮೊದಲದ‌ ಕವನ‌ ಸ0ಗ್ರಹಗಳು ಹಾಗೂ ಹಲವಾರು ಪ್ರಬ0ಧ‌ ಸ0ಕಲನಗಳು ಹಿ0ದೀ ಸಾಹಿತ್ಯಾಸಕ್ತರ‌ ನಡುವೆ ವಿಸ್ತಾರವಾಗಿ ಚರ್ಚಿತವಾಗಿವೆ. ಇವರ‌ ಜೀವನ‌ ಚರಿತ್ರೆಯನ್ನು ಬಹು ಕಷ್ಟಪಟ್ಟು ದೆಹಲಿಯಲ್ಲಿನ‌ ಡಾ.ವಿನೀತಾ ಗುಪ್ತ‌ ಒ0ದು ಕಾದ0ಬರಿಯ‌ ರೂಪದಲ್ಲಿ ಬರೆದಿದ್ದಾರೆ.ಇದನ್ನು ಮುನಿ ರೂಪ್ ಚ0ದ್ರರ‌ ಬಹುಕಾಲದ‌ ಮಿತ್ರರೂ, ಕನ್ನಡದ‌ ಪ್ರಸಿದ್ಧ‌ ಲೇಖ‌ಕರೂ ಆದ‌ ಡಾ. ಪ0ಚಾಕ್ಷ‌ರಿ ಹಿರೇಮಠ‌ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.

     ಈ ಕ್ಱುತಿ ಹಲವಾರು ಕಾರಣಗಳಿಗಾಗಿ  ಓದಬೇಕಾದ್ದು. ಜೈನ‌ ಮುನಿಯೊಬ್ಬರು ಆಚಾರ್ಯ‌ ರಜನೀಶ್,ಅಮ್ಱುತಾಪ್ರೀತ0, ಮದರ್ ತೆರೇಸಾ ಮತ್ತಿತರ‌ ಖ್ಯಾತರೊಡನೆ ನಡೆಸಿದ‌ ಬಿಚ್ಚುಮನಸ್ಸಿನ‌ ಚರ್ಚೆಯ‌ ವಿವರಗಳು ಇಲ್ಲಿ ಸಿಗುತ್ತವೆ. ಮಾರ್ಕ್ಸ್‍ ,ಗಾ0ಧಿ , ಮಹವೀರ‍ ಇವರುಗಳ‌ ತುಲನೆ ಇಲ್ಲಿ ಸಿಗುತ್ತದೆ. ಮಹಾವೀರನ‌ ಯುದ್ಧ‌ ವಿಮುಖ‌ ಮನೋಬಾವ‌, ಬಬಗವದ್ ಗೀತೆಯಲ್ಲಿನ‌ ಯುದ್ಧ‌ ಸಮರ್ಥನೆ ‍ ಇವೆರಡನ್ನೂಹೇಗೆ ಅರ್ಥಮಾಡಿಕೊಳ್ಳುವುದೆ0ಬುದರ‌ ವಿವೇಚನೆ ಇಲ್ಲಿದೆ. ಇಲ್ಲಿ ಉಲ್ಲೇಖವಾಗಿರುವ‌ ಮುನೀಜಿ ಯವರ‌ ಅನೇಕ‌ ಪದ್ಯಗಳಾ ಮೂಲಕ‌ ಅವರ‌ ಪ್ರಥಮ‌ ದರ್ಜೆಯ‌ ಪಾವ್ಯಪ್ರತಿಭೆಯ‌ ಪರಿಚ್ಯವೂ ಆಗುತ್ತದೆ.ಆದ್ದರಿ0ದ‌ ಇದೊ0ದು ಗಮನಾರ್ಹ ಕ್ರುತಿ.