ಓ..ಒಲವೇ(4)

ಓ..ಒಲವೇ(4)

ಬಸ್ಸಲ್ಲಿ ಕೂತ ತನ್ಮಯಳಿಗೆ ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಬಸ್ಸಲ್ಲಿ ಬರುವಾಗ ನಡೆದ ಎಲ್ಲಾ ವಿಷಯಗಳು ಮತ್ತೆ ನೆನಪಿಗೆ ಬಂದವು. ಸಂಜಯ್ ನನ್ನು ತಾನೇ ಬೈದು ಕಡೆಗೆ ತಾನೇ ಅವನ ಹೆಗಲ ಮೇಲೆ ತಲೆಯಿಟ್ಟು ಮಲಗಿದ್ದು ನೆನಪಾಗಿ ಛೇ, ಅವನು ಒಳ್ಳೆಯ ವ್ಯಕ್ತಿ, ನಾನೇ ಅವನನ್ನು ತಪ್ಪಾಗಿ ತಿಳಿದಿದ್ದೆ. ಇಡೀ ರಾತ್ರಿ ಒಂದು ಹೆಣ್ಣು ತನ್ನ ಪಕ್ಕದಲ್ಲೇ ಕುಳಿತಿದ್ದರೂ ಸ್ವಲ್ಪವೂ ಅಸಭ್ಯವಾಗಿ ವರ್ತಿಸಿಲ್ಲ.ಅಂತಹ ವ್ಯಕ್ತಿಗಳು ನಮಗೆ ಈ ಕಾಲದಲ್ಲಿ ಕಾಣಸಿಗುವುದು ತೀರಾ ಕಡಿಮೆ. ಅಂತವರನ್ನು ಯಾವ ಸಂದೇಹವೂ ಇಲ್ಲದೆ ಗೆಳೆಯರನ್ನಾಗಿ ಮಾಡಿಕೊಳ್ಳಬಹುದು.ಆದರೆ ಅದು ಈಗ ಸಾಧ್ಯವಿಲ್ಲದ ವಿಷಯ, ಅವನು ಎಲ್ಲಿದ್ದಾನೋ ಏನು ಕಥೆಯೋ ಯಾರಿಗೆ ಗೊತ್ತು ಅಂದುಕೊಳ್ಳುತ್ತಿರುವಷ್ಟರಲ್ಲೇ ಕಾಕತಾಳೀಯ ಎಂಬಂತೆ ಸಂಜಯ್ ಸಹ ಅದೇ ಬಸ್ಸನ್ನು ಹತ್ತಿದನು.ಅವನನ್ನು ನೋಡಿ ಅವಳಿಗೆ ಆಶ್ಚರ್ಯವಾದರೂ ತೋರಿಸಿಕೊಳ್ಳದೆ ಸುಮ್ಮನೆ ಕಿಟಕಿಯ ಕಡೆ ಮುಖ ತಿರುಗಿಸಿದಳು. ಇದರಲ್ಲಿ ಆಶ್ಚರ್ಯವೇನು ಬಂತು, ಚಿಕ್ಕಮಗಳೂರಿನಲ್ಲಿ ತನ್ನ ಕೆಲಸ ಮುಗಿದಿರಬೇಕು ಅದಕ್ಕೆ ಮತ್ತೆ ಬೆಂಗಳೂರಿಗೆ ಹಿಂತಿರುಗುತ್ತಿದ್ದಾನೆ ಅನ್ನಿಸುತ್ತೆ ಅಂದುಕೊಂಡಳು. ಸಂಜಯ್ ಗೂ ಸಹ ಅದೇ ಬಸ್ಸಿನಲ್ಲಿರುವ ತನ್ಮಯ ಳನ್ನು ಕಂಡು ಆಶ್ಚರ್ಯವಾಗಿ ಅವಳನ್ನು ನೋಡಿ ಮುಗುಳ್ನಕ್ಕು ಹಾಯ್ ಎಂದನು.ಅವಳೂ ಸಹ ಹಾಯ್ ಎಂದಳು.ಆದರೆ ಈ ಬಾರಿ ಅವಳ ಪಕ್ಕದ ಸೀಟು ಖಾಲಿ ಇರಲಿಲ್ಲ.ಹಾಗಾಗಿ ಅವನು ಅವಳು ತನಗೆ ಕಾಣಿಸುವಂತಹ ಸೀಟನ್ನು ಆರಿಸಿ ಕುಳಿತನು. ಬಸ್ಸು ಹೊರಟಿತು.ಅದೇಕೋ ಗೊತ್ತಿಲ್ಲ ತನ್ಮಯ ಸಂಜಯ್ ನ ನೋಡಿದಾಗಲೆಲ್ಲ ಅವನು ಇವಳನ್ನೇ ನೋಡುತ್ತಿರುತ್ತಿದ್ದ. ಇವನ್ಯಾಕೆ ನನ್ನ ಈ ರೀತಿ ನೋಡುತ್ತಿದ್ದಾನೆ.ಅವಳಿಗೆ ಮುಜುಗರವಾಗುತ್ತಿತ್ತು.ಕಣ್ಣಲ್ಲೇ ಏನು ಎಂಬಂತೆ ಕೇಳಿದನು. ಅವನೂ ಸಹ ಕಣ್ಣಲ್ಲೇ ಏನು ಇಲ್ಲವೆಂಬಂತೆ ಉತ್ತರಿಸಿ ಮತ್ತೆ ಕಣ್ಣಲ್ಲಿ ಹಾಗೂ ಕೈಬೆರಳುಗಳ ಸಹಾಯದಿಂದ ಅಮ್ಮ ಹೇಗಿದ್ದಾರೆ ಅಂತ ಕೇಳಿದ. ಅವಳೂ ಸಹ ಅದೇ ಈಗ ಪರವಾಗಿಲ್ಲ, ಸ್ವಲ್ಪ ಸುಧಾರಿಸಿದ್ದಾರೆ ಅಂತ ಉತ್ತರ ಕೊಟ್ಟಳು.ಅವಳೂ ಸಹ ಅದೇ ರೀತಿ ಹೇಗಿತ್ತು ನಿಮ್ಮ ಫೋಟೋಶೂಟ್ ಅಂತ ಕೇಳಿದ್ದಕ್ಕೆ ಅವನೂ ಸಹ ಸೂಪರ್ ಅಂತ ಉತ್ತರ ಕೊಟ್ಟನು. ಹೀಗೇ ಅವರಿಬ್ಬರೂ ಕೈ ಹಾಗೂ ಕಣ್ಣ ಸನ್ನೆಯಿಂದಲೇ ಮೂಗರಂತೆ ಸ್ವಲ್ಪ ಹೊತ್ತು ಮಾತಾಡಿದರು. ಈ ರೀತಿ ಇಬ್ಬರೂ ಮಾತನಾಡುತ್ತಾ ಮಾತನಾಡುತ್ತಾ ಅವನು ಅವಳ ಕಣ್ಣಿಗೆ ಮನಸೋತಿದ್ದನು. ತನ್ಮಯಳಿಗೆ ಈಗ ಸಂಜಯ್ ಅಪರಿಚಿತ ಅನಿಸುತ್ತಿರಲಿಲ್ಲ. ಬಸ್ಸು ಬೆಂಗಳೂರು ಬಂದು ತಲುಪಿತು. ಎಲ್ಲರೂ ಬಸ್ಸಿಂದ ಇಳಿದರು.ಸಂಜಯ್ ಮುಖದಲ್ಲಿ ಈವರೆಗೂ ಇದ್ದ ಸಂತೋಷ ಕಾಣೆಯಾಯ್ತು. ಏನೋ ಕಳೆದುಕೊಂಡವನಂತೆ ಮುಖ ಮಾಡಿದ್ದ. ತನ್ಮಯ ಹೇಳಿದಳು ನಿಮ್ಮ ಪರಿಚಯದಿಂದ ತುಂಬಾ ಸಂತೋಷವಾಯ್ತು ಅಂದಳು. ಸಂಜಯ್ ಹೇಳಿದ ಹೌದು ನನಗೂ ಅಷ್ಟೆ, ಆದ್ರೆ ಈ ಸಂತೋಷ ಇಲ್ಲಿಗೇ ಯಾಕೆ ಕೊನೆಯಾಗ್ಬೇಕು ? ನಾವ್ಯಾಕೆ ಸ್ನೇಹಿತರಾಗಿರಬಾರ್ದು ಅಂದನು. ಅವಳು ಹೌದು ನಾನೂ ಸಹ ಇಂತಹವರನ್ನು ನಿಸ್ಸಂದೇಹವಾಗಿ ಗೆಳೆಯರನ್ನಾಗಿ ಮಾಡಿಕೊಳ್ಳಬಹುದು ಅಂದುಕೊಂಡಿದ್ದೆ.ಅದೇ ರೀತಿ ಇವನೂ ಸಹ ಕೇಳುತ್ತಿರುವುದನ್ನು ನೋಡಿ ಅವಳಿಗೂ ಸಂತೋಷವಾಯ್ತು.ಸರಿ ಇನ್ಮೇಲೆ ನಾವಿಬ್ಬರೂ ಫ್ರೆಂಡ್ಸ್ ಅಂದಳು. ಅದನ್ನು ಕೇಳಿ ಇಷ್ಟು ಹೊತ್ತು ಅವನ ಮುಖದಲ್ಲಿ ಕಳೆದುಹೋಗಿದ್ದ ಸಂತೋಷ ಈಗ ಮತ್ತೆ ಕಾಣಿಸಿಕೊಂಡು ಹಾಗಾದರೆ ನಿಮ್ಮ ಮೊಬೈಲ್ ನಂಬರ್ ಕೊಡಬಹುದಲ್ಲಾ ಅಂದನು.ಇಬ್ಬರೂ ತಮ್ಮ ಮೊಬೈಲ್ ನಂಬರ್ ಗಳನ್ನು ಷೇರ್ ಮಾಡಿಕೊಂಡು ತಮ್ಮ ಮನೆಗಳಿಗೆ ಹೊರಟರು.ಮಾರನೇ ದಿನ ಬೆಳಿಗ್ಗೆ 6 ಗಂಟೆಗೆಲ್ಲಾ ತನ್ಮಯ ಮೊಬೈಲ್ ಗೆ ಒಂದು ಮೆಸೇಜ್ ಬಂದಿತ್ತು.ಏನು ಅಂತ ನೋಡಿದಾಗ ಅದು ಸಂಜಯ್ ಮೆಸೇಜ್ ಆಗಿತ್ತು.ಗುಡ್ ಮಾರ್ನಿಂಗ್ ತನ್ಮಯ ಅಂತ ಕಳುಹಿಸಿದ್ದನು.ಅವಳೂ ಸಹ ಅದೇ ರೀತಿ ರಿಪ್ಲೈ ಮಾಡಿದಳು.ಹೀಗೆ ಪ್ರತೀದಿನವೂ ತಪ್ಪದೇ ಇಬ್ಬರೂ ಮೆಸೇಜ್ ಮಾಡೋದು ಮತ್ತು ಫೋನ್ ಕಾಲ್ ಮಾಡೋದು, ಇಬ್ಬರೂ ಪರಸ್ಪರ ತಮ್ಮ ತಮ್ಮ ಕಷ್ಟ ಸುಖಗಳನ್ನು ಹಂಚಿಕೊಳ್ಳುತ್ತಾ ಇದ್ದರು.ಹೀಗೇ ಇಬ್ಬರೂ ಮಾತನಾಡುತ್ತಾ ಮಾತನಾಡುತ್ತಾ ಆಪ್ತರಾಗತೊಡಗಿದರು.ಇಬ್ಬರ ಭಾವನೆಗಳಿಗೂ ಒಬ್ಬರಿಗೊಬ್ಬರು ತುಂಬ‌ಾ ಚೆನ್ನಾಗಿ ಸ್ಪಂದಿಸತೊಡಗಿದರು. ಒಮ್ಮೆ ಸಂಜಯ್ ಹೇಳದ ರೀ ತನ್ಮಯ ನಿಮ್ಮನ್ನು ತನ್ಮಯ ಅಂತ ಕರೆಯೋದು ಕಷ್ಟ, ನಾನು ನಿಮ್ಮನ್ನು ತನು ಅಂತಾನೆ ಕರೀತೀನಿ ಅಂದನು.ಅವಳು ಸರಿ ಅಂದಳು ಅಂದ ಹಾಗೆ ನಿಮ್ಮನ್ನು ನಾನು ಹೇಗಂತ ಕರೆಯಲಿ ಅಂದಳು.ಅದಕ್ಕೆ ಅವನು ನನಗೆ ನಮ್ಮಮ್ಮ ಅಂದ್ರೆ ತುಂಬಾ ಇಷ್ಟ. ಎಲ್ಲರೂ ನನ್ನನ್ನು ಸಂಜಯ್ ಅಂತ ಕರೆದರೂ ಅಮ್ಮ ಮಾತ್ರ ಸಂಜು ಅಂತ ಕರೀತಿದ್ರು, ಆದ್ರೆ ಅವರು ಇಲ್ಲ. ಹಾಗಾಗಿ ನೀನು ನನ್ನ ಸಂಜು ಅಂತಾನೆ ಕರಿ ನನಗೆ ಇಷ್ಟವಾಗುತ್ತೆ ಎಂದನು.ಹೀಗೆ ಅವನು ತನು ಎಂದು ಅವಳು ಅವನನ್ನು ಸಂಜು ಅಂತ ಕರೆಯಲು ಪ್ರಾರಂಭಿಸಿ ಇನ್ನೂ ಆತ್ಮೀಯರಾಗತೊಡಗಿದ್ದರು..

N....R....

ಮುಂದುವರೆಯುತ್ತದೆ....