ಓದಿಸುವುದು
ಕವನ
ನೀವೇ ಕೊಟ್ಟ ಬೆಂಕಿ
ನಿಮಗೇ ಕೊಟ್ಟಿದ್ದೇನೆ.
ಇಟ್ಟುಕೊಳಿ ಅಥವಾ ನೀರು ಹಾಕಿ.
ನೀವೇ ಕೊಟ್ಟ ನೀರು ನಿಮಗೇ ಕೊಟ್ಟಿದ್ದೇನೆ.
ಕುಡಿದು ಬಿಡಿ ಅಥವಾ ಮಡಕೆಗೆ ಹಾಕಿ.
ನೀವೇ ಕೊಟ್ಟ ಮಡಕೆ
ನಿಮಗೇ ಕೊಟ್ಟಿದ್ದೇನೆ.
ಒಡೆದು ಬಿಡಿ ಅಥವಾ ಅನ್ನ ಮಾಡಿ.
ನೀವೇ ಕೊಟ್ಟ ಅನ್ನ
ನಿಮಗೇ ಕೊಟ್ಟಿದ್ದೇನೆ.
ತಿಂದು ಬಿಡಿ ಅಥವಾ ಬಾನಿಗೆ ಹಾಕಿ.
ನೀವೇ ಕೊಟ್ಟ ಬಾನಿ
ನಿಮಗೇ ಕೊಟ್ಟಿದ್ದೇನೆ.
ಇಟ್ಟುಕೊಳಿ ಅಥವಾ ಹಸುವಿಗೆ ಕೊಡಿ.
ನೀವೇ ಕೊಟ್ಟ ಹಸು
ನಿಮಗೇ ಕೊಟ್ಟಿದ್ದೇನೆ.
ಸಾಕಿ ಅಥವಾ ಪರಿಷೆಗೊಯ್ಯಿರಿ.
ನೀವೇ ನಡೆಸುವ ಪರಿಷೆಗೆ
ನಿಮಗೇ ಕರೆಯುತ್ತೇನೆ.
( ಬಾನಿ_ ಹಸುಗಳಿಗೆ ಕುಡಿಯಲು ಇಡುತ್ತಿದ್ದ ಮುಸುರೆ ಗಡಿಗೆ)
----------------------------
c v sheshadri holavanahalli